ಪುಟಗಳು

ಶುಕ್ರವಾರ, ಜನವರಿ 10, 2025

ಡಾ.ವೆಂಕಟರೆಡ್ಡಿ ರಾಮರೆಡ್ಡಿ

ಕವಿ, ಸಾಹಿತಿ, ವಿಮರ್ಶಕ ಸಂಶೋಧಕರಾಗಿ ಹಲವಾರು ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಡಾ.ವೆಂಕಟರೆಡ್ಡಿ ರಾಮರೆಡ್ಡಿಯವರು. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ಶ್ರೀ ರಾಮರೆಡ್ಡಿ ಮತ್ತು ಹಿರಕನಬಾಯಿ ದಂಪತಿಗಳಿಗೆ ದಿನಾಂಕ ೨೦-೭-೧೯೬೯ ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್.ಪಿ.ಎಚ್.ಡಿ.ಪದವಿಧರರಾದ ಇವರು ತುಮಕೂರು ವಿಶ್ವವಿದ್ಯಾಲಯ ಕಲಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಸ್ನಾತಕೋತ್ತರ ಕನ್ನಡ ವಿಭಾಗದ ವಿಶೇಷಧಿಕಾರಿಯಾಗಿ,ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ, ಉಪಕುಲಸಚಿವರಾಗಿ,ಸಹಾಯಕ ನಿರ್ದೇಶಕರಾಗಿ, ಪ್ರಸಾರಾಂಗದ ಹಿಂದುಳಿದ ವರ್ಗಗಳ ಸಂಯೋಜಕರಾಗಿಯೂ, ಸೇವೆ ಸಲ್ಲಿಸಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ಆಸಕ್ತರಾದ ಇವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. `ಛಂದೋತ್ಸವ’, `ಬಿಸಿಲ ಹನಿಗಳು ಒಂದು ಅಧ್ಯಯನ,’ `ತುಮಕೂರು ಜಿಲ್ಲೆಯ ಜನಪದ ವೈದ್ಯ' ಇತ್ಯಾದಿ ೨೨ ಸೃಜನಶೀಲ ಮತ್ತು ೪೦ ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. ತುಮಕೂರಿನ ಯಕ್ಷ -ದೀವಿಗೆ ಸಾಂಸ್ಕೃತಿಕ ಸಂಘಟನೆಯ ಧರ್ಮದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಮೊದಲಾದ ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರಿಗೆ ನಾರಾಯಣಪುರ ವಲಯ ಮಟ್ಟದ ೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರ ಬರಹಗಳು ನಾಡಿನ ವಿವಿಧ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಮತ್ತು ತುಮಕೂರು ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳಾಗಿವೆ. ಇವರಿಗೆ ರಾಜ್ಯ ಮಟ್ಟದ ಬರಹಗಾರರ ಬಳಗದಿಂದ `ಕುವೆಂಪು ಪ್ರಶಸ್ತಿ' ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ