ಪುಟಗಳು

ಮಂಗಳವಾರ, ಜನವರಿ 14, 2025

ಮಾರುತಿ ಬಬಚೌಡಿ

ಮಾರುತಿ ಬಬಚೌಡಿ ಕವಿ, ತತ್ವಪದಕಾರ ಮಾರುತಿ ಬಬಚೌಡಿಯವರು ಬೀದರ ತಾಲೂಕಿನ ಬಬಚೌಡಿ ಗ್ರಾಮದ ಬಸಪ್ಪ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೬-೪-೧೯೫೪ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿರುವ ಇವರು ಬೀದರ ತಾಲೂಕಿನ ಮಂದಕನಳ್ಳಿ ಗ್ರಾಮದ ಪಿ.ಕೆ.ಪಿ.ಎಸ್.ಸೋಸಾಯಿಟಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೇ ಹಾಡುವ ಕಲೆಯನ್ನು ಕರಗತ ಮಾಡಿಕೊಂಡ ಇವರು ತಮ್ಮ ಗಾಯನದೊಂದಿಗೆ ಅನೇಕ ಮೋಹರಮ್ ಪದ ತತ್ವ ಪದಗಳನ್ನು ರಚನೆ ಮಾಡಿದ್ದಾರೆ. ಅವು ಕೆಲವು ಕಡೆ ಅವು ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ