ಪುಟಗಳು

ಭಾನುವಾರ, ಜನವರಿ 19, 2025

ವಿದ್ಯಾವತಿ. ಎಸ್. ಹಿರೇಮಠ

ಸಾಹಿತಿ ವಿದ್ಯಾವತಿ. ಎಸ್. ಹಿರೇಮಠ ರವರು ಬೀದರ ಜಿಲ್ಲೆ ಲಾಡಗೇರಿ ಗ್ರಾಮದ ಪೂಜ್ಯ. ಶ್ರೀ. ವೇ.ಶಾಂತಲಿAಗಯ್ಯಾ ಸ್ವಾಮಿ ಮತ್ತು ಸುಭದ್ರಾದೇವಿ ದಂಪತಿಗಳಿಗೆ ದಿನಾಂಕ ೪-೯-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ.ಎA. ಎಂ. ಫೀಲ್. ಎಂ.ಎಡ್.ಪದವಿಧರರಾದ ಇವರು ರಾಯಚೂರ ಜಿಲ್ಲೆಯಲ್ಲಿ ಸರ್ಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ತಮ್ಮ ತಂದೆಯ ಸಾಹಿತ್ಯದ ಪ್ರಭಾವದಿಂದಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡು `ಮನೆಮದ್ದು' ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಇವರಿಗೆ ಐದು ವರ್ಷವಿರುವಾಗ ಜ್ವರದ ಚುಚ್ಚು ಮದ್ದು ಕೊಡಿಸಿದ್ದರಿಂದ ಅವರ ಎಡಗೈ ನಿಷ್ಕ್ರಿಯ ಗೊಂಡಿದೆ. ಆದರೂ ಛಲ ಬಿಡದ ಇವರು ಆತ್ಮ ಸ್ಥೈರ್ಯದಿಂದ ಮುಂದೆ ಪ್ಯಾರಾ ಒಲಂಪಿಕ್ ನಲ್ಲಿ ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮೈಸೂರು, ಬೆಂಗಳೂರು, ಧಾರವಾಡ ರಾಜ್ಯ ಮಟ್ಟದ, ೧೭ನೇ ೧೮ನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಮತ್ತು ೨೦೧೭ರಲ್ಲಿ, ೨೦೧೮ರಲ್ಲಿ ನೇಪಾಳದಲ್ಲಿ ಅಂತರರಾಷ್ಟ್ರೀಯ ಪ್ಯಾರಾ ಸ್ಪೋರ್ಟ್ಸ್ ನಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕ ಪಡೆದು ರಾಷ್ಟ್ರ, ರಾಜ್ಯ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.೨೦೧೯ರಲ್ಲಿ ಶ್ರೀಲಂಕಾದಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ. ಮತ್ತು ತಮ್ಮ ತಂದೆಯವರು ಬರೆದ ೨೩ ಕೃತಿಗಳ ಸಂಪಾದಕರಾಗಿ ಪುಸ್ತಕ ಪ್ರಕಟಿಸಿದ್ದಾರೆ. ಮತ್ತು `ಶ್ರೀ ಶಾಂತ ವಚನಗಳು’ ಎಂಬ ೧ ಸಾವಿರ ಆಧುನಿಕ ವಚನಗಳು `ಶಿವ ಶಿವಾ’ ಎಂಬ ಅಂಕಿತ ನಾಮದಲ್ಲಿ ಬರೆದ ಇವರು ರಾಜ್ಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರ್ಣಗಳಲ್ಲಿ ಭಾಗವಹಿಸಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. `ಡಾನಬಾಸ್ಕೋ’ ಹೊರತರುವ `ಬಾಸ್ಕೋ - ಬಾಂಧವ್ಯ' ಕ್ಕೆ ೫ವರ್ಷದಿಂದ ಅಂಕಣಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮತ್ತು ಗುಲ್ಬರ್ಗಾದ ಕ್ರೈಸ್ತ ಧರ್ಮ ಕ್ಷೇತ್ರದವರು ಮುದ್ರಿಸುವ ಸ್ಪಂದನ ಪತ್ರಿಕೆ ಸೇರಿದಂತೆ ಹಲವಾರು ಕಡೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಇವರು ಬೀದರದ ಶಾಂತಿ ಧಾಮ ಟ್ರಸ್ಟ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ೨೦೧೯ರಲ್ಲಿ ಬೀದರ ಜಿಲ್ಲಾ ಮಟ್ಟದ ರಾಜೋತ್ಸವ ಪ್ರಶಸ್ತಿ, ೨೦೨೦ರಲ್ಲಿ ಕರ್ನಾಟಕ ಸರ್ಕಾರ ನೀಡುವ ಕಿತ್ತೂರು ಚನ್ನಮ್ಮ ಪ್ರಶಸ್ತಿ, ೨೫ ಸಾವಿರ ನಗದು ಗೌರವಧನ ಪುರಸ್ಕಾರ, ೨೦೧೮ರಲ್ಲಿ ನವಚೇತನ ಚಾರಿಟಬಲ್ ಟ್ರಸ್ಟ ರಾಮನಗರದಿಂದ ಸಾಹಿತ್ಯಶ್ರೀ ಪ್ರಶಸ್ತಿ, ೧೦ ಸಾವಿರ ನಗದು ಗೌರವ ಧನವು ನೀಡಿ ಗೌರವಿಸಿದ್ದಾರೆ. ಮತ್ತು ೨೦೧೮ರಲ್ಲಿ ಬೀದರದ ದೇಶಪಾಂಡೆ ಪ್ರತಿಷ್ಠನದ ವತಿಯಿಂದ ಕಾವ್ಯ ಕುಸುಮಾಂಜಲಿ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ