ಪುಟಗಳು

ಶುಕ್ರವಾರ, ಜನವರಿ 10, 2025

ಪ್ರೊ.ಭಾಲಚಂದ್ರ ಜಯಶೆಟ್ಟಿ

ಖ್ಯಾತ ಹಿರಿಯ ಸಾಹಿತಿ ಹಾಗೂ ಅಗ್ರಗಣ್ಯ ಅನುವಾದಕ ಪ್ರೊ. ಭಾಲಚಂದ್ರ ಜಯಶೆಟ್ಟಿ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಭೀಮಣ್ಣಾ ಮತ್ತು ಜಯಮ್ಮ ದಂಪತಿಗಳಿಗೆ ದಿನಾಂಕ ೨೨-೧೧-೧೯೩೯ರಲ್ಲಿ ಜನಿಸಿದ್ದಾರೆ. ಹಿಂದಿ ಎಂ.ಎ.ಸ್ನಾತಕೋತ್ತರ ಪದವಿಧರರಾಗಿ ೧೯೬೫ರಲ್ಲಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಹಿಂದಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೧೯೯೭ರಲ್ಲಿ ನಿವೃತ್ತರಾಗಿದ್ದಾರೆ. ಇವರು ೧೯೯೧ರಲ್ಲಿ `ಮಿರ್ಚಿ ಬಾಬಾ ಮತ್ತು ಇತರ ಕತೆಗಳು' (ಕಥಾಸಂಕಲನ) ೨೦೦೩ರಲ್ಲಿ `ಯುಗಾಂತ' (ನಾಟಕ) ೨೦೦೨ರಲ್ಲಿ `ನಮ್ಮ ಮನೆ' (ಲಲಿತ ಪ್ರಬಂಧ) ೨೦೦೩ರಲ್ಲಿ `ಚಿಂತನ -ಮಂಥನ' (ವೈಚಾರಿಕ) ೨೦೦೪ರಲ್ಲಿ `ಭಗತ್ ಸಿಂಗ’ (ಚರಿತ್ರೆ) ೨೦೦೫ರಲ್ಲಿ `ಕನ್ನಡ ವ್ಯಾಕರಣ ಕೈಪಿಡಿ’ ೧೯೭೩ರಲ್ಲಿ `ಲೀಲಾವತಾರಿ ವೀರಭದ್ರ’ ೧೯೯೧ರಲ್ಲಿ `ಕೊಡ್ಗಲ್ಲಿನ ಕೂಗು’ ೧೯೯೩ರಲ್ಲಿ `ಜ್ಞಾನಪೀಠ ಪ್ರಶಸ್ತಿ ವಿಜೇತ ವಿ.ಎಸ್.ಖಾಂಡೆಕರ್’ ೧೯೮೪ರಲ್ಲಿ ಹಿಂದಿಯಲ್ಲಿ `ವಿಭೂತಿಯಂ' ೨೦೧೪ರಲ್ಲಿ `ಅಷ್ಟಾವರಣ ಕಿ ವೈಜ್ಞಾನಿಕತಾ' ೨೦೧೬ರಲ್ಲಿ `ಶರಣ ಆಂದೋಲನ' ೨೦೦೫ರಲ್ಲಿ `ಪ್ರಯೋಗಿಕ ಕನ್ನಡ ವ್ಯಾಕರಣ' ಮತ್ತು `ಡಾ.ಸಿದ್ದಲಿಂಗ ಸ್ವಾಮಿಗಳು’ `ಹರಳಯ್ಯಾ’ ಎಂಬ ಕೃತಿಗಳು ಪ್ರಕಟಿಸಿದರೆ ೨೦೦೬ರಲ್ಲಿ `ಹೈದರಾಬಾದ ಕರ್ನಾಟಕದ ವಿಮೋಚನಾ ಚಳವಳಿ, ಕಬೀರದಾಸರು, ಪಂ.ಶಿವಚAದ್ರಜಿ, ೨೦೧೦ರಲ್ಲಿ `ಮಹಾಪ್ರಸಾದಿ ಕಕ್ಕಯ್ಯ, ಶರಣ ಸಾಹಿತ್ಯ ಸುತ್ತಮುತ್ತ, ೨೦೧೧ರಲ್ಲಿ ಆನುದೇವ ಒಳಗಣವನು, ಅಮ್ಮಾವ್ರ ಗಂಡ, ೨೦೧೨ರಲ್ಲಿ ಸಂತ ಕಬೀರದಾಸರು, ಶರಣ ಚಿಂತನೆಯ ನೆಲೆಯಲ್ಲಿ, ೨೦೧೩ರಲ್ಲಿ `ವೈಜ್ಞಾನಿಕ ನೆಲೆಯಲ್ಲಿ ಅಷ್ಟಾವರಣ’ ಮತ್ತು `ಚುರುಕು ಚಟಾಕಿ, ೨೦೧೪ರಲ್ಲಿ ಬಸವಣ್ಣ ಮತ್ತು ಲೋಹಿಯಾ, ಬಸವಣ್ಣ ಮತ್ತು ತುಳಸಿದಾಸ, ಆಮುಗಿ ದೇವಯ್ಯ, ಮೇದಾರ ಕೇತಯ್ಯ, ಎಂಬ ಕೃತಿಗಳು ೨೦೧೫ರಲ್ಲಿ `ದಂಡಕಾರುಣ್ಯದಲ್ಲಿ ಗಣತಂತ್ರ' `ಶರಣಾ ಲೋಕ' ಮತ್ತು ಶರಣು ಶರಣಾರ್ಥಿ- ಭಾಗ-೧.೨.೩. ಇವು ಅವರ ಸಮಗ್ರ ಶರಣ ಸಾಹಿತ್ಯದ ಕೃತಿಗಳಾದರೆ, ೨೦೧೬ರಲ್ಲಿ `ಸೃಜನ' ೨೦೧೭ರಲ್ಲಿ `ಸಂಕೀರ್ಣ' ಎಂಬ ಕೃತಿಗಳು ಇವರ ಸಮಗ್ರ ಸಾಹಿತ್ಯ ಸಂಪುಟಗಳು ಭಾಗ -೧.೨.ರಲ್ಲಿ ಮುದ್ರಣಗೊಂಡಿವೆ. `ಸಂಪ್ರಾಪ್ತಿ’ ಎಂಬುದು ಇವರು ಹಿಂದಿಯಿAದ ಕನ್ನಡಕ್ಕೆ ಅನುವಾದಿಸಿದ ಸಮಗ್ರ ಸಾಹಿತ್ಯ ಸಂಪುಟವಾಗಿದೆ. ೨೦೧೬ರಲ್ಲಿ `ಡೊಹರ ಕಕ್ಕಯ್ಯ' ೨೦೧೭ರಲ್ಲಿ `ಶರಣಿ ಸತ್ಯಕ್ಕ' ೨೦೧೮ರಲ್ಲಿ `ಅಪರಿಮಿತದ ಕತ್ತಲೆಯೊಳಗೆ ವಿಪರಿತದ ಬೆಳಕು' ಮತ್ತು `ಪೂರ್ವೋತ್ತರ ಪರಿಣಯ' ೨೦೧೯ರಲ್ಲಿ `ಬಾಚಿ ಕಾಯಕದ ಬಸವಯ್ಯ' ಎಂಬ ಕೃತಿಗಳು ರಚಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಮತ್ತು ಕಲಬುರ್ಗಿಯ ಸಿದ್ಧಲಿಂಗೇಶ್ವರ ಪ್ರಕಾಶನ ಹಾಗೂ ಭಾಲ್ಕಿ ಹಿರೇಮಠ ಮಠದಿಂದ ಹಲವಾರು ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಮತ್ತು ಕನ್ನಡದ ಪ್ರಮುಖ ೩೦ ಸಾಹಿತಿಗಳ ಕೃತಿಗಳು ಹಿಂದಿ ಭಾಷೆಗೆ, ಮರಾಠಿಯಿಂದ ಕನ್ನಡಕ್ಕೆ ಒಂದು, ಹಿಂದಿಯಿAದ ಕನ್ನಡಕ್ಕೆ ಮೂರು ಕೃತಿಗಳು ಅನುವಾದಿಸಿದ್ದಾರೆ. ಇವರ `ದುಃಖ ಭರಾ ರಾಗ' ಅನುವಾದ ಕೃತಿಗೆ ೧೯೮೧ರಲ್ಲಿ ಶಿಕ್ಷ ಮಂತ್ರಾಲಯ ಪರವಾಗಿ ದೆಹಲಿಯ ಹಿಂದಿ ನಿರ್ದೇಶನಾಲಯದ ಪ್ರಶಸ್ತಿ, ಹಾಗೂ ಕರ್ನಾಟಕ ಸರ್ಕಾರದ ಪ್ರಶಸ್ತಿ, ೨೦೦೨ರಲ್ಲಿ ಯು.ಆರ್.ಅನಂತಮೂರ್ತಿಯವರ `ಅವಸ್ಥಾ’ ಕೃತಿ ಹಿಂದಿಗೆ ಅನುವಾದಿಸಿದ್ದರಿಂದ ಕರ್ನಾಟಕ ರಾಜ್ಯ ಪ್ರಶಸ್ತಿ, ೧೯೯೩ರಲ್ಲಿ ಬಿ.ಎಂ.ಶ್ರೀ ಯವರ `ಭಾರತೀಯ ಕಾವ್ಯ ಮೀಮಾಂಸೆ’ ಹಿಂದಿಗೆ ಅನುವಾದಿಸಿದ್ದರಿಂದ ೧೯೯೪ರಲ್ಲಿ ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಪುರಸ್ಕಾರ, ೧೯೯೫ರಲ್ಲಿ, ಎಸ್.ಎಲ್.ಬೈರಪ್ಪನವರ ಅನುವಾದಿತ `ಛೋರ್' ಕೃತಿಗೆ ಉತ್ತರಾಂಚಲದಿAದ ಅಂತರಾಷ್ಟ್ರೀಯ ಪ್ರಶಸ್ತಿ, ೨೦೧೦ರಲ್ಲಿ ಜಿ.ಎಸ್. ಶಿವರುದ್ರಪ್ಪನವರ ಕಾವ್ಯಾರ್ಥ ಚಿಂತನ ಹಿಂದಿ ಅನುವಾದಿತ ಕೃತಿಗೆ ೨೦೦೯ನೇ ವರ್ಷದ ಅನುವಾದಿತ ಕೃತಿಗಳಿಗಾಗಿ ನೀಡುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೫ರಲ್ಲಿ ವಿಭೂತಿಯಂ ಮತ್ತು ೧೯೯೫ರಲ್ಲಿ `ಮೋಡ್' ಎಂಬ ಹಿಂದಿ ಕೃತಿಗಳಿಗೆ, ಹಾಗೂ ೨೦೦೧ರಲ್ಲಿ `ಯುಗಾಂತ' ಎಂಬ ಕನ್ನಡ ನಾಟಕ ಕೃತಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ೨೦೧೪ರಲ್ಲಿ `ಶರಣರ ಚಿಂತನೆಯ ನೆಲೆಯಲ್ಲಿ’ ಎಂಬ ಕೃತಿಗೆ ಕಾವ್ಯಾನಂದ ಪ್ರಶಸ್ತಿ, ೨೦೦೫ರಲ್ಲಿ ಕಲಬುರ್ಗಿಯ ಉದಯೋನ್ಮುಖ ಬರಹಗಾರರ ಬಳಗದಿಂದ ಕಾಯಕ ಸಮ್ಮಾನ ಪ್ರಶಸ್ತಿ, ೨೦೦೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ೧೯೯೮ರಲ್ಲಿ ಬೀದರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ೨೦೧೭ರಲ್ಲಿ ಪುಣೆಯಲ್ಲಿ ಜರುಗಿದ ಮಹಾರಾಷ್ಟ್ರದ ಮೊದಲನೇ ಮರಾಠಿ ಬಸವೇಶ್ವರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ೨೦೧೬ರಲ್ಲಿ ೭೫ವರ್ಷ ತುಂಬಿದ ಪ್ರಯುಕ್ತ ಭಾಲ್ಕಿ ಹಿರೇಮಠದಿಂದಲೂ ಇವರಿಗೆ ಸನ್ಮಾನಿಸಿ ಗೌರವಿಸಿದ್ದಾರೆ. ೨೦೦೪ರಲ್ಲಿ ಕಲಬುರಗಿಯ ಸಿದ್ಧಲಿಂಗೇಶ್ವರ ಪ್ರಕಾಶನದಿಂದ `ನಮ್ಮ ಅನುವಾದಕ' ಎಂಬ ಅಭಿನಂದನಾ ಗ್ರಂಥವು ಸಮರ್ಪಿಸಲಾಗಿದೆ. ವಿ.ಸಿ.ಸಂಪದ ಬೆಂಗಳೂರು ವತಿಯಿಂದ ೨೦೧೭ರಲ್ಲಿ `ಪ್ರತಿಭಾ ಸಂಪನ್ನರು' ಎಂದು ನಗದು ಬಹುಮಾನದೊಂದಿಗೆ ಸನ್ಮಾನ, ಮತ್ತು ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ವತಿಯಿಂದ ಇವರ ಜೀವಮಾನ ಸಾಧನೆಗಾಗಿ ೨೦೧೯ರಲ್ಲಿ ಗೌರವ ಪ್ರಶಸ್ತಿ, ನಗದು ಬಹುಮಾನ ನೀಡಿ ಸತ್ಕರಿಸಲಾಗಿದೆ. ಇವರ ಬದುಕು ಬರಹ ಕುರಿತು ಸಾಹಿತಿ ಪತ್ರಕರ್ತರಾದ ಸಂಗಮನಾಥ ರೇವತಗಾಂವ ಅವರು `ಭಾಲಚಂದ್ರ ಜಯಶೆಟ್ಡಿ' ಎಂಬ ಪರಿಚಯಾತ್ಮಕ ಕೃತಿಯೊಂದು ಹೊರತಂದಿದ್ದಾರೆ. ಇವರ ಕುರಿತು ಡಾ.ಹಣಮಂತ ಮೇಲಕೇರಿಯವರು ಎಂ.ಫೀಲ್ ಪದವಿ ಪಡೆದರೆ, ಸಾವಿತ್ರಿ ಎನ್ನುವವರು ಪಿ.ಎಚ್.ಡಿ.ಅಧ್ಯಯನ ಮಾಡಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸದ್ಯ ಇವರು ಕಲಬುರಗಿಯ ನಿವಾಸಿಯಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ