ಮಂಗಳವಾರ, ಜನವರಿ 21, 2025
ಪೂಜ್ಯ. ಶ್ರೀ ಪಂಚಾಕ್ಷರಿ ಉರಿಲಿಂಗಪೆದ್ದಿ ಸ್ವಾಮಿಜಿ.
ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಒಬ್ಬರಾಗಿ ಗುರುತಿಸಿಕೊಂಡು *,ಚಿಂತನ* *ಶರಣ ಸಾಹಿತ್ಯ*, ಸೇರಿದಂತೆ ಮೊದಲಾದ ಬರಹಗಳು ಬರೆದು,ಶರಣರ ವಚನಗಳು ಸಂಗ್ರಹಿಸಿ ಪುಸ್ತಕ ಪ್ರಕಟಿಸಿದ ಲೇಖಕ, ಮಠಾಧೀಶರೆಂದರೆ ಪೂಜ್ಯ. ಶ್ರೀ. ಪಂಚಾಕ್ಷರಿ ಸ್ವಾಮಿಗಳು. ಇವರು ಬೀದರ ಜಿಲ್ಲೆಯ ನೂತನ ಹುಲಸೂರು ತಾಲ್ಲೂಕಿನ ಬೇಲೂರು ಗ್ರಾಮದ ಶಿವಕುಮಾರ ಸ್ವಾಮಿ ಮತ್ತು ಶೇಷಾಬಾಯಿ ದಂಪತಿಗಳಿಗೆ ದಿನಾಂಕ ೯-೯-೧೯೭೩ ರಲ್ಲಿ ಜನಿಸಿದ್ದಾರೆ. ಇವರು ಕಲಿತದ್ದು ಬರಿ ಏಳನೇ ತರಗತಿಯವರೆಗೆ ಮಾತ್ರ. ಚಿಕ್ಕಂದಿನಲ್ಲಿ ಮುಂಬೈ, ಅಹಮದಾಬಾದ ನಗರಗಳಿಗೆ ವಲಸೆ ಹೋಗಿ, ಕೂಲಿ ಕಾರ್ಮಿಕರಾಗಿ ದುಡಿದ ಶ್ರೀಗಳು ಆಕಸ್ಮಿಕ ತಮ್ಮ ತಂದೆಯ ಕಾಲವಾದ ನಂತರ ಮಠದ ಪೀಠಾಧ್ಯಕ್ಷರಾಗಿದ್ದ ಚಿಕ್ಕಪ್ಪ ಬಸವಂತ ಸ್ವಾಮಿಯೂ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು.ಆಗ ಭಕ್ತರ ಆಶಯದಂತೆ ಪಂಚಾಕ್ಷರಿ ಸ್ವಾಮಿಗಳು ಪಟ್ಟಾಧಿಕಾರ ಹೊಂದಿ, ೪೫ ದಿನ ಅನುಷ್ಠಾನ ತಪಗೈದಿದ್ದಾರೆ. ಪ್ರತಿವರ್ಷ ಶ್ರೀ ಶಿವಲಿಂಗೇಶ್ವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ *ಶರಣ ಸಂಸ್ಕೃತಿ ಉತ್ಸವ, ಉರಿಲಿಂಗ ಪೆದ್ದಿ ಉತ್ಸವ*, ಕಾರ್ಯಕ್ರಮಗಳು ಶ್ರೀಗಳು ಮಾಡುತ್ತಾ ಬರುತ್ತಿದ್ದಾರೆ. ಈ ಉತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಮಟ್ಟದ ' *ಉರಿಲಿಂಗ ಪೆದ್ದಿ ಪ್ರಶಸ್ತಿ*' ಯು ನೀಡುತ್ತಿರುವುದು ವಿಶೇಷವಾಗಿದೆ. ಮೊದಲಿಗೆ ೨೦೦೭ರಲ್ಲಿ ಯುವ ಕತೆಗಾರ *ಮಚ್ಚೇಂದ್ರ ಪಿ.ಅಣಕಲ್* ಅವರಿಗೆ ಈ ಪ್ರಶಸ್ತಿಯೊಂದಿಗೆ ನಗದು ಗೌರವ ಧನ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿಯು ಪತ್ರಕರ್ತ *ಮಾಣಿಕ ಭುರೆ* ಅವರ ಪ್ರಾಯೋಜಕತ್ವದಲ್ಲಿ ಸ್ಥಾಪಿಸಲಾಗಿದ್ದು, ಇಲ್ಲಿಯವರೆಗೆ ಸುಮಾರು ೩೫ ಜನ ವಿವಿಧ ಗಣ್ಯರಿಗೆ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಮತ್ತು ೨೦೧೧ರಿಂದ ಸಾಹಿತಿ *ಡಾ.ಗವಿಸಿದ್ದಪ್ಪಾ ಎಚ್.ಪಾಟೀಲ್* ಅವರ ಸಂಚಾಲನೆಯಲ್ಲಿ ೧೨. ವಿವಿಧ ಜಿಲ್ಲಾ, ವಿಭಾಗ, ರಾಜ್ಯ ಮಟ್ಟದ *ಪ್ರಥಮ ಸಾಹಿತ್ಯ ಸಮ್ಮೇಳನಗಳು*' ನಡೆಸಿಕೊಂಡು ಬಂದಿರುವುದು ಮಠದ ಹೆಮ್ಮೆಯ ವಿಷಯವಾಗಿದೆ. ಹೀಗೆ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿರುವ ಶ್ರೀಗಳು ಸ್ವತಃ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕೆಲವು ಚಿಂತನ,ಶರಣರ ಕುರಿತಾದ ಸಾಹಿತ್ಯವು ರಚಿಸಿದ್ದಾರೆ . ಮತ್ತು *ಕಾಳವ್ವೆ, ಉರಿಲಿಂಗದೇವ ಮತ್ತು ಶರಣ ಉರಿಲಿಂಗಪೆದ್ದಿ ವಚನಗಳ ಸಂಗ್ರಹ*' ಎಂಬ ಪುಸ್ತಕವು ಸಂಪಾದಿಸಿ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ *ಶರಣ ಉರಿಲಿಂಗ ಪೆದ್ದಿ ಮಠ ಟ್ರಸ್ಟ್* ವತಿಯಿಂದ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿ, ಅದರಡಿಯಲ್ಲಿ ವಿವಿಧ ಲೇಖಕರ ೨೦ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರ ಕುರಿತು ೨೦೧೦ ರಲ್ಲಿ ಪತ್ರಕರ್ತ,ಸಾಹಿತಿ *ಮಾಣಿಕ ಆರ್. ಭುರೆ*' ಯವರು *ದಲಿತ ಪೀಠಾಧಿಪತಿ*' ಎಂಬ ಪುಸ್ತಕವು ಬರೆದಿದ್ದು, ಆ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ *ರೇವಯ್ಯ ದತ್ತಿ ಪುಸ್ತಕ ಪ್ರಶಸ್ತಿ* ಯು ಲಭಿಸಿದೆ. ಮತ್ತು ' *ಉರಿಲಿಂಗ ಪೆದ್ದಿ ವಚನಗಳ ಒಳನೊಟ* ' ಎಂಬ ಪುಸ್ತಕವೊಂದು ಇತ್ತಿಚೆಗೆ ಪ್ರಕಟಗೊಂಡಿದೆ. ಅಷ್ಟೇಯಲ್ಲದೆ *ಡಾ.ಸಾಹುಕಾರ ಎಸ್.ಕಾಂಬಳೆ* ಯವರು ಈ ಉರಿಲಿಂಗ ಪೆದ್ದಿ ಮಠಗಳ ಕುರಿತು *ಲಿಂಗಾಯತ ಅಸ್ಪೃಶ್ಯರು ಒಂದು ಅಧ್ಯಯನ* ' ಎಂಬ ವಿಷಯದ ಮೇಲೆ ಪಿ.ಎಚ್.ಡಿ. ಅಧ್ಯಯನ ಮಾಡಿ, ಡಾಕ್ಟರೇಟ್ ಪದವಿಯು ಪಡೆದಿದ್ದಾರೆ. ಸದ್ಯ ಇವರು ಸರಳ ಹಾಗೂ ಸಾದಾ- ಸೀದಾ ಜೀವನದೊಂದಿಗೆ ಬಸವಕಲ್ಯಾಣದ ತ್ರೀಪೂರಾಂತ ಶಾಖಾ ಮಠದಲ್ಲಿ ನೆಲೆಸಿ, ಚಿಂತನ ಹಾಗೂ ಶರಣ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ