ಬೀದರ ಹೊರನಾಡ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬೀದರ ಹೊರನಾಡ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭಾನುವಾರ, ಜನವರಿ 12, 2025
ಧರ್ಮೇಂದ್ರ ಪೂಜಾರಿ ಬಗ್ದೂರಿ
ಹೊರನಾಡಿನ ತೆಲಂಗಾಣ ಪ್ರದೇಶದಲ್ಲಿ `ಶೋಧವಾಣಿ' ಎಂಬ ಕನ್ನಡ ದಿನಪತ್ರಿಕೆಯ ಮೂಲಕ ಹೊರನಾಡ ಕನ್ನಡಿಗರರಾಗಿ ಪತ್ರಿಕೆಯ ಪ್ರಧಾನ ಸಂಪಾದರಾಗಿ ಲೇಖಕರಾಗಿ ಗುರುತಿಸಿಕೊಂಡವರೆAದರೆ ಧರ್ಮೇಂದ್ರ ಪೂಜಾರಿ ಬಗ್ದೂರಿಯವರು. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದ ಪಂಡಿತರಾವ ಮತ್ತು ದ್ರೌಪತಿ ಎಂಬ ದಂಪತಿಗಳಿಗೆ ದಿನಾಂಕ ೨೪-೬-೧೯೭೮ ಜನಿಸಿದ್ದಾರೆ. ಎಂ.ಎ. ಬಿ.ಇಡಿ.ಪದವಿ ಪಡೆದು ಪಿ.ಎಚ್.ಡಿ.ಅಧ್ಯಯನ ಮಾಡುತ್ತಿರುವ ಇವರು ಪತ್ರಕರ್ತ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕದ ತೆಲಂಗಾಣ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳಲ್ಲಿ ಅಧ್ಯಯನ ಮಾಡಿದ ಇವರು ಬಾಲ್ಯದಲ್ಲಿಯೇ ಸಾಹಿತ್ಯದ ಕಡೆಗೆ ಆಸಕ್ತರಾಗಿ ಉತ್ತಮ ಬರಹಗಾರರು ಆಗಿದ್ದಾರೆ. ಮತ್ತು ಈಗಾಗಲೇ `ಜೀವನ ಒಂದು ಪಯಣ' ಎಂಬ ಕವನ ಸಂಕಲನ, `ತೆಲಂಗಾಣ ಕನ್ನಡ ಕಿರಣ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ೧೯೯೮ರಲ್ಲಿ ಬಸವಕಲ್ಯಾಣದ `ಬಹಿರಂಗ ಸುದ್ದಿ' ಎಂಬ ಪತ್ರಿಯಲ್ಲಿ ಅಕ್ಷರ ಮೊಳೆ ಜೋಡಿಸಲು ಸುದ್ದಿ ಮನೆ ಸೇರಿ ಇವರು ತಮ್ಮ ಪದವಿ ಶಿಕ್ಷಣ ಕಲಿಯುವುದರೊಂದಿಗೆ ಸ್ಥಳೀಯ ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿ ನಂತರ 'ಶೋಧವಾಣಿ' ಪತ್ರಿಕೆಯನ್ನು ಹುಟ್ಟು ಹಾಕಿ ಅದರ ಪ್ರಾಧಾನ ಸಂಪಾದಕರಾಗಿ ಹೈದರಾಬಾದ್ ಮತ್ತು ಬೆಂಗಳೂರು ನಗರಗಳಿಂದ ಏಕಕಾಲಕ್ಕೆ ಮುದ್ರಣಗೊಳಿಸುತ್ತಿದ್ದಾರೆ. ಮತ್ತು ಹೈದರಾಬಾದಿನ ವಿಜಯವಾಣಿ ಪತ್ರಿಕೆಯ ವರದಿಗಾರರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ತೆಲುಗುನಾಡಿನಲ್ಲಿ ೨೦೦೫ರಿಂದ ಕನ್ನಡಿಗರ ಕಲ್ಯಾಣ ಅಭಿವೃದ್ಧಿ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಕನ್ನಡ ಕಾರ್ಯಕ್ರಮಗಳನ್ನು ಮಾಡುತ್ತಾ ನಾಡು ನುಡಿಗಾಗಿ ಶ್ರಮಿಸುತ್ತಿದ್ದಾರೆ. ಇವರ ಬರಹಗಳು ಕನ್ನಡದ ಪ್ರಮುಖ ಪತ್ರಿಕೆಗಳು ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿಯೂ ಪ್ರಕಟ, ಪ್ರಸಾರವಾಗಿವೆ.
ಸರ್ವಮಂಗಳಾ ಜಯಶೆಟ್ಟಿ
ವಿದೇಶದಲ್ಲಿ ನೆಲೆಸಿರುವ ಸಾಹಿತಿ ಸರ್ವಮಂಗಳಾ ಜಯಶೆಟ್ಟಿ. ರವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ್ರಖ್ಯಾತ ಅಗ್ರಗಣ್ಯ ಹಿರಿಯ ಸಾಹಿತಿ ಪ್ರೊ.ಭಾಲಚಂದ್ರ ಜಯಶೆಟ್ಟಿ ಮತ್ತು ಪುಷ್ಪಾ ದಂಪತಿಗಳಿಗೆ ದಿನಾಂಕ ೨೪-೧೨-೧೯೭೬ರಲ್ಲಿ ಜನಿಸಿದ್ದಾರೆ. ಸಾಫ್ಟವೇರ್ ಇಂಜಿನಿಯರಿAಗ್ ಪದವೀಧರರಾದ ಇವರು ಮುಂಬೈನಲ್ಲಿ ೧೧ ವರ್ಷ ಭಾರತ ಪೆಟ್ರೋಲಿಯಂ ಕಾರ್ಪೋರೇಷನ್ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಮ್ಯಾನೆಜರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಸುಮಾರು ೧೦ ವರ್ಷಗಳಿಂದ ಇಂಗ್ಲೆAಡಿನಲ್ಲಿ ವಾಸವಾಗಿರುವ ಇವರು ಅಲ್ಲಿಯ `ಮೈಂಡ್ ಹೆಲ್ತ ಚಾರಿಟೇಬಲ್' ಎಂಬ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ತಮ್ಮ ತಂದೆಯ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿರುವ ಇವರು ಅವರ ನಾಟಕ, ಕತೆ,ಕವನ ಲೇಖನ, ಲಲಿತ ಪ್ರಬಂಧ, ಚರಿತ್ರೆ ,ಅನುವಾದ ಸಾಹಿತ್ಯವನ್ನು ಓದಿ ಬೆಳೆದವರು. ಅಷ್ಟೇಯಲ್ಲದೆ ಆ ತರಹದ ಸಾಹಿತ್ಯ ರಚಿಸುವಲ್ಲಿ ತುಂಬ ಆಸಕ್ತರಾಗಿ ಕೆಲ ಕೃತಿಗಳು ಪ್ರಕಟಿದ್ದಾರೆ. ಅವುಗಳೆಂದರೆ ೨೦೦೩ರಲ್ಲಿ `ಸಂಗಣಕ ಸಂಗಾತಿ' ಇದು ೨೦೧೩ರಲ್ಲಿ ದ್ವಿತೀಯ ಮುದ್ರಣ ಕಂಡಿದೆ. ಜನಸಾಮಾನ್ಯರಿಗೆ ಕಂಪ್ಯೂಟರ್ ಜ್ಞಾನ ಒದಗಿಸಲು ತುಂಬ ಸಹಕಾರಿಯಾದ ಈ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿಯು ಪಡೆದಿದೆ.. ಮತ್ತು ೨೦೦೪ರಲ್ಲಿ `ಝಾಂಸಿ ರಾಣಿ ಲಕ್ಷ್ಮೀಬಾಯಿ' ಎಂಬ ಪುಸ್ತಕ ಪ್ರಕಟಿಸಿದ್ದು, ಅದು ಕೂಡ ೨೦೦೮ರಲ್ಲಿ ದ್ವಿತೀಯ, ೨೦೧೮ರಲ್ಲಿ ತೃತೀಯ ಮುದ್ರಣವಾಗಿದೆ. ಹಾಗೆಯೇ ೨೦೦೮ರಲ್ಲಿ `ಮದರ ತೆರೆಸಾ' ಎಂಬ ಕೃತಿಯು ಪ್ರಕಟಿಸಿದ್ದು ,ಇದು ಕೂಡ ಅದೇ ವರ್ಷ ದ್ವಿತೀಯ ಮುದ್ರಣವು ಕಂಡಿದೆ. ಹಾಗೂ ೨೦೦೬ರಲ್ಲಿ `ಶಿರಡಿ ಸಾಯಿಬಾಬಾ' ಎಂಬ ಕೃತಿಯು ಪ್ರಕಟಿಸಿದ್ದು, ಈ ಕೃತಿಯು ೨೦೦೮ ಮತ್ತು ೨೦೦೯ ರಲ್ಲಿಮರು ಮುದ್ರಣವಾಗಿದೆ. ಇವರು ತಮ್ಮ ಬರಹಗಳನ್ನು ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಗಳಲ್ಲಿ ಬರೆದಿದ್ದು, ಅವು ಆಕಾಶವಾಣಿಯಿಂದಲೂ ಪ್ರಸಾರವಾಗಿವೆ. ಅಷ್ಟೇಯಲ್ಲದೆ ಹಲವಾರು ಪ್ರಮುಖ ಕನ್ನಡ,ಮತ್ತು ಆಂಗ್ಲ ಭಾಷೆಯ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಸದ್ಯ ಇವರು ಇಂಗ್ಲೆAಡ್ ನಲ್ಲಿ ವಾಸವಾಗಿದ್ದಾರೆ.
ಡಾ.ರಮೇಶ ಮೂಲಗೆ
ಹೊರನಾಡ ಸಾಹಿತಿ ಡಾ.ರಮೇಶ ಮೂಲಗೆಯವರು. ಬೀದರ ತಾಲೂಕಿನ ಮಮದಾಪೂರ ಗ್ರಾಮದ ಹಣಮಂತಪ್ಪಾ ಮತ್ತು ತಾರಮ್ಮ ದಂಪತಿಗಳಿಗೆ ದಿನಾಂಕ ೧ ೬-೧೯೭೧ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್.ಪಿ.ಎಚ್.ಡಿ ಪದವಿಧರರಾದ ಇವರು ಮಹಾರಾಷ್ಟ್ರದ ಲಾತೂರ್ ಜಿಲ್ಲೆ ಉದಗಿರ ತಾಲೂಕಿನ ಉದಯಗಿರಿ ಮಹಾವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ಹೊರನಾಡಿನಲ್ಲಿದ್ದುಕೊಂಡು ಕೆಲ ಸಾಹಿತ್ಯ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಸಿಡಿದ ಮುತ್ತುಗಳು', `ಬೀದರ ಜಿಲ್ಲೆಯ ವೀರಶೈವ ಮಠಗಳು', `ಹಳೆಂಬರ ಶ್ರೀ ವೀರಭದ್ರಪ್ಪಾ’, `ನಾ ಕಂಡ ಮನೆ', `ಮಾಣಿಕ್ಯ ದೀಪ್ತಿ', `ಬೀದರ ಜಿಲ್ಲೆಯ ಬಿಸುವ ಪದಗಳು', `ಕರುನಾಡ ಸಿರಿ', `ದಸ್ತಗಿರಿ ದೀಕ್ಷಾ ವಿಧಿ ವಿಧಾನ’, `ಲೇಸನ್ನೆ ಬಯಸಿದರು', `ಶಿವಬಿಂಬ', `ಲಲಿತಾರವಿಂದ', `ಬಾಗಿದ ತಲೆ ಮುಗಿದ ಕೈ', `ನಮ್ಮ ಶರಣರು', `ಬಸವ ಪರಿಶೋಧ', `ಗಡಿನಾಡ ಕನ್ನಡಿಗರು', `ಅಮರ ದರ್ಪಣ’, `ಸಮತಾ ನಾಯಕ ಬಸವಣ್ಣ', `ಹೊಸ ಬೆಳಕು', `ಸತ್ಯ ಹುಡುಕಿದಾಗ', `ನಡುಗನ್ನಡ ಕವಿ-ಕಾವ್ಯ'. ಇವು ಇವರ ಪ್ರಮುಖ ಕೃತಿಗಳಾಗಿವೆ. ಮಹಾರಾಷ್ಟ್ರ ಲಾತೂರ್ ಜಿಲ್ಲೆಯ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಗಡಿನಾಡು ಕನ್ನಡ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾಗಿ, ಮರಾಠವಾಡ ವಿಶ್ವವಿದ್ಯಾಲಯ ನಾಂದೇಡದ ಪಿ.ಎಚ್.ಡಿ ಮಾರ್ಗದರ್ಶಕರಾಗಿ, ಬೊರ್ಡ ಆಪ್ ನಾಂದೇಡ ಶಿವಾಜಿ ವಿಶ್ವವಿದ್ಯಾಲಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ `ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಮತ್ತು ೬ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಇವರು ಕಲಬುರಗಿಯಲ್ಲಿ ನಡೆದ ೮೫ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರ ಸಂವಾದಕರಾಗಿ ಪಾಲ್ಗೊಂಡಿದ್ದರು.
ಡಾ.ಧನರಾಜ ಧರಂಪುರ
ಸಾಹಿತಿ ಡಾ.ಧನರಾಜ ಧರಂಪುರ ರವರು ಬೀದರ ತಾಲೂಕಿನ ಧರಂಪುರ ಗ್ರಾಮದ ವೀರಶೇಟ್ಟಿ ಮತ್ತು ಶರಣಮ್ಮಾ ದಂಪತಿಗಳಿಗೆ ದಿನಾಂಕ ೨-೫-೧೯೬೯ರಲ್ಲಿ ಜನಿಸಿದ್ದಾರೆ. ಬಿ.ಎ.ಎಲ್.ಎಲ್.ಬಿ. ಎಂ.ಎ.ಎA.ಫೀಲ್. ಪಿ.ಎಚ್.ಡಿ. ಪದವಿಧರರಾದ ಇವರು ೧೯೯೬ರಲ್ಲಿ ತೆಲಂಗಾಣದ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಒಪ್ಪಂದದ ಮೇರೆಗೆ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ೧೨ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೧೪ರಲ್ಲಿ `ನಮ್ಮ ಶರಣರು’ ೨೦೧೪ರಲ್ಲಿ `ಶರಣ ಸಿರಿ’ ೨೦೧೫ರಲ್ಲಿ `ಅಮರ ದರ್ಪಣ’ ೨೦೧೬ರಲ್ಲಿ `ಸಾಹಿತ್ಯ ಶೋಧ’ ೨೦೧೭ರಲ್ಲಿ `ಮಡಿವಾಳ ಮಾಚಿ ದೇವನ ಜೀವನ ಮತ್ತು ಕೃತಿಗಳು ಒಂದು ಅಧ್ಯಯನ’ ಮತ್ತು ೨೦೧೯ರಲ್ಲಿ `ಸಕಲೇಶ ಮಾದರಸನ ಜೀವನ ಮತ್ತು ಕೃತಿಗಳು ಒಂದು ಅಧ್ಯಯನ’(ಸಂಶೋಧನೆ) ೨೦೧೮ರಲ್ಲಿ `ಹೈದರಾಬಾದ ಜಾನಪದ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ತೆಲುಗು ಭಾಷೆ, ಅಕ್ಷರ, ವ್ಯಾಕರಣ ಛಂದಸ್ಸು ಕಲಿತ ಇವರು ಆ ಭಾಷೆಯಲ್ಲಿ ೨೦೧೫ರಲ್ಲಿ `ಕನ್ನಡ ಮಡೆಳು ಪುರಾಣಂ ವಿಶ್ಲೇಷಣೆ’ ಮತ್ತು `ಮಾಚಯ್ಯನ ದೃಷ್ಟಿಲು ಆತ್ಮ ದೇವುಡು’ ಎಂಬ ಕೃತಿಗಳು ಪ್ರಕಟಿಸಿರುವುದು ವಿಶೇಷವಾಗಿದೆ. ಮತ್ತು ಇವರ ಲೇಖನ, ಬರಹಗಳು ಪ್ರಜಾವಾಣಿ, ಬಸವಪಥ, ಕ್ರಾಂತಿ ಭೂಮಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ಕರ್ನಾಟಕ ಸರ್ಕಾರದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ದಲಿತ ಕವಿ ಡಾ.ಸಿದ್ದಲಿಂಗಯ್ಯ ಕನ್ನಡ ಮಾಧ್ಯಮ ಪ್ರಶಸ್ತಿ ನೀಡಿದರೆ, ಬೀದರದ ಕರ್ನಾಟಕ ಗಡಿ ಹೋರಾಟ ಸಮಿತಿಯಿಂದ ಗಡಿನಾಡು ಕನ್ನಡಿಗ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ. ಮತ್ತು ಹೈದರಾಬಾದ ಆಕಾಶವಾಣಿಯಲ್ಲಿ ಇವರು ಕನ್ನಡ ಸಾಹಿತ್ಯಕ್ಕೆ ಸಂಬAಧ ಪಟ್ಟ ವಿಷಯಗಳ ಕುರಿತು ಚರ್ಚೆ ಮತ್ತು ಉಪನ್ಯಾಸಗಳನ್ನು ನೀಡಿದ್ದಾರೆ.
ಡಾ.ಗುರುಲಿಂಗಪ್ಪ ಧಬಾಲೆ
ಗಡಿ ಕನ್ನಡಿಗರಾಗಿ ಶರಣ ಸಾಹಿತ್ಯದಲ್ಲಿ ಕೃಷಿ ಮಾಡಿದ ಲೇಖಕ ಡಾ.ಗುರುಲಿಂಗಪ್ಪ ಧಬಾಲೆ. ಇವರು ಬೀದರ ಜಿಲ್ಲೆ ಹುಲಸೂರು ತಾಲ್ಲೂಕಿನ ತೊಗಲೂರು ಗ್ರಾಮದ ಶೆಂಕರೆಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೨-೪-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫಿಲ್.ಪಿಎಚ್.ಡಿ.ಪದವಿಧರರಾದ ಇವರು ಮಹಾರಾಷ್ಟç ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟೆಯ ಸಿ.ಬಿ.ಖೇಡಗಿ ಬಸವೇಶ್ವರ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿದೆಸೆಯಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ, `ಬೀದರ ಜಿಲ್ಲೆಯ ಅನುಭಾವಿ ಕವಿಗಳು, ಶರಣ ಅಂಬಿಗರ ಚೌಡಯ್ಯ, ಹುಲಸೂರು ಬಸವಕುಮಾರ ಶಿವಯೋಗಿ, ಪೂಜ್ಯ. ಶ್ರೀ. ಡಾ.ಬಸವಲಿಂಗ ಪಟ್ಟದೇವರು, ಗಡಿ ನಡಿಯ ಬೆಡಗು, ಶರಣ ಸೊಲ್ಲಾಪುರ, ಕಲ್ಯಾಣ ದೀಪ್ತಿ, ಶರಣ ಶ್ರಾವಣ, ಬಸವಯೋಗಿ, ಕನ್ನಡ ಮರಾಠಿ ಭಾಂಧವ್ಯ ಗಡಿ ಕನ್ನಡಿಗರ ಸಮಸ್ಯೆಗಳು, ಚನ್ನಬಸವ ಕಲ್ಯಾಣ, ವೀರಗಣಾಚಾರಿ ಅಂಬಿಗರ ಚೌಡಯ್ಯ, ಪಂಡಿತಾರಾಧ್ಯ ಚಾರಿತ್ರ ಸಂಗ್ರಹ’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿ, ದೂರದರ್ಶನದಲ್ಲಿ ಪ್ರಕಟ, ಪ್ರಸಾರವಾಗಿವೆ. ಮತ್ತು ಅಕ್ಕಲಕೋಟೆಯ ಪ್ರಜಾವಾಣಿ ಪತ್ರಿಕೆ ವರದಿಗಾರರಾಗಿ, ಮಹಾರಾಷ್ಟ್ರದ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ಸಂಪಾದಕ, ಪ್ರಧಾನ ಸಂಪಾದಕರಾಗಿ, . ಕೊಲ್ಲಾಪುರ, ಮುಂಬೈ, ಸೊಲ್ಲಾಪುರ, ಗುಲಬರ್ಗಾ ವಿ.ವಿ, ಅಭ್ಯಾಸ ಮಂಡಳಿಯ ಸದಸ್ಯರಾಗಿ, ಸೊಲ್ಲಾಪುರ ವಿ.ವಿ. ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಗಡಿನಾಡು ಹೊರನಾಡು ಉಪಸಮಿತಿಯ ಸದಸ್ಯರಾಗಿ, ಸೇವೆ ಸಲ್ಲಿಸಿದ ಇವರು ಸದ್ಯ ಸೊಲ್ಲಾಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಎಂ.ಜಯವಂತ ಜ್ಯೋತಿ
ಹೊರನಾಡ ಕನ್ನಡ ಸಾಹಿತಿ ಎಂ.ಜಯವಂತ ಜ್ಯೋತಿ. ರವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಧನ್ನೂರಾ (ಹೆಚ್) ಗ್ರಾಮದ ಮಾಣಿಕರಾವ ಮತ್ತು ಸುಂದರಮ್ಮಾ ದಂಪತಿಗಳಿಗೆ ದಿನಾಂಕ ೧-೧೦-೧೯೬೪ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್. ಪದವಿಧರರಾದ ಇವರು ಕಮಲನಗರ ಮತ್ತು ಬೀದರನಲ್ಲಿ ಕೆಲ ವರ್ಷ ವಿಲೇಜ್ ಮೆಡಿಕಲ್ ಸರ್ವಿಸ್ ನಲ್ಲಿ ಅಕೌಂಟೆನ್ಸಿಯಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ, ಹಿಂದಿ, ಮರಾಠಿ, ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಹೊಂದಿದ ಇವರು ಆ ಭಾಷೆಗಳಲ್ಲಿ ಕವನ, ಲೇಖನ, ನಾಟಕ, ಬೀದಿ ನಾಟಕಗಳನ್ನು ಬರೆದಿದ್ದಾರೆ. ಮತ್ತು ಸಂಗೀತ ಪ್ರೀಯರಾಗಿ ಮುಂಬಯಿಯ ಸಿನಿಮಾ ಗಾಯಕರೊಂದಿಗೆ ಒಡನಾಟ ಬೆಳೆಸಿಕೊಂಡು, ಹಾಡುಗಳನ್ನು ಹಾಡುವುದು, ಭಜನೆ ಮಾಡುವುದರೊಂದಿಗೆ ಸಾಹಿತ್ಯ ರಚಿಸಿ ೧೯೯೬ರಲ್ಲಿ `ಬಡವರ ಬಂಧು ಸೈನಿಕಾರ' (ವ್ಯಕ್ತಿ ಚಿತ್ರಣ) `ದಾರಿ ದೀಪ’ (ಕವನಸಂಕಲನ) `ಅರ್ಟಿಕಲ್ ಟು ನ್ಯೂಜ್ ಲೇಟರ್’ (ಇಂಗ್ಲೀಷ) ಎಂಬ ಕೃತಿಗಳು ಹೊರತಂದಿದ್ದಾರೆ. ಇವರ ಬರಹಗಳು ಕನ್ನಡ, ಹಿಂದಿ, ಇಂಗ್ಲೀಷ್, ಮರಾಠಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಕೆಲ ಸ್ಮರಣ ಸಂಚಿಕೆ ಮತ್ತು ಪ್ರಾತಿನಿಧಿಕ ಸಂಕಲನಗಳಲ್ಲಿಯು ಅವು ಪ್ರಕಟವಾಗಿವೆ. ಇವರು ಸುಮಾರು ೨೦ ವರ್ಷಗಳಿಂದ ಮುಂಬಯಿಯ ಮೇಥೊಡಿಸ್ಟ ಚರ್ಚಿನಿಂದ ಪಾಸ್ಟರಾಗಿ ಕ್ರೈಸ್ತ ಧರ್ಮದ ಕುರಿತು ಪ್ರಚಾರದಲ್ಲಿದ್ದುಕೊಂಡು ಮುಂಬಯಿ ಮಹಾನಗರಿಯಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ.
ಪೂಜ್ಯ.ಶ್ರೀ ಕರುಣಾದೇವಿ ಮಾತಾ
ಕವಯತ್ರಿ ಹಾಗೂ ಮಾತಾಜಿಯವರಾದ ಪೂಜ್ಯ ಶ್ರೀ ಕರುಣಾದೇವಿಯವರು. ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಧನ್ನೂರು (ಹೆಚ್) ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ಹಿಪ್ಪಳಗಿಮಠ ಮತ್ತು ಶರಣಮ್ಮನವರ ಉದರದಲ್ಲಿ ದಿನಾಂಕ ೨೨-೨-೧೯೬೧ರಲ್ಲಿ ಜನ್ಮ ತಳೆದಿದ್ದಾರೆ. ಬಿ.ಎ.ಪದವಿಧರರಾದ ಇವರು ಅಪಾರ ಅಧ್ಯಾತ್ಮಿಕ ಪಾಂಡಿತ್ಯವನ್ನು ಹೊಂದಿ, ವೈರಾಗ್ಯ ಜೀವನದೊಂದಿಗೆ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ, ಹಿಂದಿ, ಮರಾಠಿ, ತೆಲುಗು ಚರ್ತುಭಾಷಾ ಪರಿಣಿತರಾದ ಇವರು ಆ ಭಾಷೆಗಳಲ್ಲಿ ಸಾಹಿತ್ಯ ರಚಿಸಿ ಸುಶ್ರಾವ್ಯವಾಗಿ ಹಾಡುವ ಕಲೆಯನ್ನು ಕರಗತ ಮಾಡಿಕೊಂಡು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಶರಣರ ಶ್ರೀಶೈಲ್', `ಶ್ರೀ ಗಿರಿ ಅಕ್ಕಮಹಾದೇವಿ ಪ್ರಾರ್ಥನೆ' (ಕವನ ಸಂಕಲನಗಳು) `ಚಿದ್ಘನ್ ಚೆನ್ನಬಸವಣ್ಣ ನವರ ವಚನೇತರ ಸಾಹಿತ್ಯ' (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಶ್ರೀ ಗಿರಿ ಅಕ್ಕಮಹಾದೇವಿ ಪ್ರಾರ್ಥನೆ' ಎಂಬ ಕೃತಿ ಚಂದ್ರ ಶೇಖರ ರೆಡ್ಡಿ ಎಂಬುವವರು ತೆಲುಗು ಭಾಷೆಗೆ ಅನುವಾದಿಸಿದ್ದಾರೆ. ಇವರು ಬರೆದ ಅನೇಕ ಹಾಡುಗಳು ಸಿ.ಡಿ.ರೂಪದಲ್ಲಿ ಧ್ವನಿ ಮುದ್ರಿತಗೊಂಡಿವೆ. ಅವುಗಳಲ್ಲಿ `ತೊಗಲಿಲ್ಲದ ಘನ, `ಶಿವನೇ ಬಸವಣ್ಣನ ನಾದ, `ಸಿದ್ದರಾಮೇಶ್ವರ ವಚನಗಳು, `ಶ್ರೀ ಗಿರಿ ಅಕ್ಕಮಹಾದೇವಿ' (ಕನ್ನಡ ಸಿಡಿಗಳು) `ಬಸವವಾಣಿ' (ಮರಾಠಿ) `ಬ್ರಹ್ಮಾನಂದ ಭಜನ' (ಹಿಂದಿ) `ಶ್ರೀ ಅಕ್ಕ ಮಹಾದೇವಿ ವಚನಾಲು' (ತೆಲುಗಿ) ಎಂಬ ಸಿ.ಡಿ.ಗಳು.ರಚನೆಯಾಗಿವೆ. ಇವರ ವೈರಾಗ್ಯ ಜೀವನದ ಕುರಿತು ಡಾ.ನೀಲಮ್ಮ ಕನ್ನಳ್ಳಿಯವರು ಲೇಖನಗಳು ಬರೆದಿದ್ದಾರೆ. ಸದ್ಯ ಮಾತಾಜಿಯವರು ಶ್ರೀಶೈಲದ ಶ್ರೀ ಅಕ್ಕ ಮಹಾದೇವಿ ಚೈತನ್ಯ ಕೇಂದ್ರದ ಮಹಾತಪಸ್ವಿನಿಯಾಗಿ ಅಧ್ಯಾತ್ಮಿಕ ಜೀವನದಲ್ಲಿ ಅಪಾರ ಪಾಂಡಿತ್ಯ ಹೊಂದಿ ವಚನ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ. ಇವರು ಕರ್ನಾಟಕ, ಆಂಧ್ರ ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಖ್ಯಾತಿಯನ್ನು ಪಡೆದು `ಮಹಾ ತಪಸ್ವಿನಿ, `ಅಭಿನವ ಅಕ್ಕ' ಮತ್ತು ಅಧ್ಯಾತ್ಮಿಕ ಕೋಗಿಲೆ ಎಂಬ ಬಿರುದುಗಳಿಗೆ ಪಾತ್ರರಾಗಿದ್ದಾರೆ.
ಡಾ.ಮಲ್ಲಿಕಾರ್ಜುನ ಎ. ಭಂಡೆ
ಸಾಹಿತಿ ಡಾ.ಮಲ್ಲಿಕಾರ್ಜುನ ಎ.ಭಂಡೆ ರವರು ಬೀದರ ಜಿ¯್ಲೆ ಕಮಲನಗರ ತಾಲೂಕಿನ ರಂಡ್ಯಾಳ ಗ್ರಾಮದ ಅಣ್ಣಾರಾವ ಮತ್ತು ಬಂಡೆಮ್ಮಾ ದಂಪತಿಗಳಿಗೆ ದಿನಾಂಕ ೧೦-೬-೧೯೫೧ರಲ್ಲಿ ಜನಿಸಿದ್ದಾರೆ. ಎಂ.ಬಿ.ಬಿ.ಎಸ್.ಪದವಿಧರರಾದ ಇವರು ೧೯೭೯ರಲ್ಲಿ ಮಹಾರಾಷ್ಟçದ ಉದಗಿರದಲ್ಲಿ ‘ಚಿರಾಯು ಕ್ಲಿನಿಕ’ ಎಂಬ ಹೆಸರಿನ ಸ್ವಂತ ಖಾಸಗಿ ದವಾಖಾನೆಯೊಂದು ತೆರೆದು ಉದಗಿರ ನಗರದಲ್ಲಿಯೆ ನೆಲೆಸಿ, ೪೧ ವರ್ಷಗಳಿಂದ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡು ಮಹಾರಾಷ್ಟçದ ಖಾಯಂ ನಿವಾಸಿಯಾಗಿ ಕನ್ನಡ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಇವರು ‘ಶ್ರೀ ಗುರು ಚನ್ನಮಲ್ಲೇಶ್ವರ ಇತಿಹಾಸ’ ಎಂಬ ಚರಿತ್ರೆಯನ್ನು ಮತ್ತು ‘ನನ್ನ ಅನುಭಾವದ ವಚನಗಳು’ ಎಂಬ ಕೃತಿಗಳು ರಚಿಸಿದ್ದಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಅಭಿರುಚಿಯಿಂದ ಸಾಹಿತ್ಯ ರಚಿಸುತ್ತಿರುವ ಇವರದು ತುಂಬ ಹೆಮ್ಮೆ ಪಡುವ ವಿಷಯವಾಗಿದೆ. ‘ಮರಾಠಿ’ ಜನ ಸಮುದಾಯದ ನಡುವೆ ವೈಧ್ಯಕೀಯ ಕ್ಷೇತ್ರದಲ್ಲಿ ಇದ್ದುಕೊಂಡು ಅಧ್ಯಾತ್ಮಿಕ ಆಧುನಿಕ ವಚನಗಳು ತುಂಬ ಬರೆದಿದ್ದಾರೆ.
ಮಾಣಿಕರಾವ ಬಿರಾದಾರ
`ಚನ್ನ ಕಿರಣ' ಎಂಬ ಅಂಕಿತನಾಮದಿAದ ಹೊರನಾಡಿನಲ್ಲಿದ್ದು ಸಾಹಿತ್ಯ ರಚಿಸುತ್ತಿರುವ ಹಿರಿಯ ಸಾಹಿತಿ ಮಾಣಿಕರಾವ ಬಿರಾದಾರ ರವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಬಿರಿ (ಬಿ) ಗ್ರಾಮದ ಶರಣಪ್ಪಾ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೧೧-೧-೧೯೪೭ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪದವಿ ಪಡೆದು ಮಹಾರಾಷ್ಟ್ರ ಲಾತೂರ್ ಜಿಲ್ಲೆ ಉದಗಿರದ ಮಹಾರಾಷ್ಟ್ರ ಉದಯಗಿರಿ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಮಹಾರಾಷ್ಟ್ರದಲ್ಲಿ ಸೇವೆಗೆ ಸೇರಿ ಮರಾಠಿ ಭಾಷೆ ಕಲಿತು ಶರಣರ ಮತ್ತು ಸರ್ವಜ್ಞನ ವಚನಗಳು ಮರಾಠಿಗೆ ಅನುವಾದಿಸಿದ್ದಾರೆ ಇವರ ಕೃತಿಗಳೆಂದರೆ, `ಚನ್ನಬಸವನ ಕರಣ ಹಾಸಿಗೆ' (ಅಧ್ಯಾತ್ಮೀಕ) `ಹಾವಗಿ ಸ್ವಾಮಿ ಚರಿತ್ರೆ' `ಶಿವದಾಸ ಮುತ್ಯಾನ ಚರಿತ್ರೆ ' (ಚರಿತ್ರೆಗಳು) `ಮಹಾರಾಷ್ಟ್ರ ಗಡಿಯ ಕನ್ನಡ ಜಾನಪದ ಗೀತೆಗಳು' `ಮಹಾರಾಷ್ಟ್ರ ಗಡಿಯ ಭಕ್ತಿ ಗೀತೆಗಳು' (ಸಂಪಾದನೆ) `ಕುವೆಂಪು ವಿಶ್ವಮಾನವ ಸಂದೇಶ', `ವಚನ ಸಂಗಮ', ಸರ್ವಜ್ಞನ ೫೦೦ ವಚನಗಳು (ಮರಾಠಿಗೆ ಅನುವಾದ) `ವಚನ ವಿಚಾರ ವಾಹಿನಿ' (ಮರಾಠಿ ಕೃತಿ) ಮತ್ತು `ಬಿಡುಗಡೆ', `ವ್ಯಸನ ಮುಕ್ತಿ', `ವಧುದಕ್ಷಿಣೆ', `ಮುಕ್ತಿ', `ಶರಣು ಶರಣಾರ್ಥಿ', `ಮಿಸಲು ಮುಕ್ತಿ', `ಅತ್ತೆ-ಸೊಸೆ ದರ್ಪ', `ಒಗ್ಗಟ್ಟು', `ಭಾವೈಕ್ಯತೆ', `ಶಿವಶರಣ ನನ್ನಯ್ಯಾ', `ಸುಂಕಕAಜಿ ನಡೆದೇನು', `ಅಪಹರಣ'. ಇವು ಅವರ ೧೨ ಏಕಾಂಕ ನಾಟಕಗಳಾಗಿವೆ ಇವರ ಬರಹಗಳು ಕನ್ನಡ, ಮರಾಠಿ ಪ್ರಮುಖ ಪತ್ರಕೆಗಳಲ್ಲಿ ಪ್ರಕಟವಾಗಿವೆ. ಇವರು ಕೆಲ ಕಾಲ `ಉದಯ ಕೆಸರಿ ಘರ್ಜನೆ, ಪ್ರಭೆ, ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಮಹಾರಾಷ್ಟçದಲ್ಲಿ ಹಲವು ಕನ್ನಡ ಪರ ಸಂಘಟನೆಗಳನ್ನು ಕಟ್ಟಿ ಬೆಳರೆಸಿದ್ದಾರೆ. ಇವರು ೧೯೭೮ರಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಬಸವಕಲ್ಯಾಣ ಸಸ್ತಾಪೂರದ ೫ನೇ ಆಧುನಿಕ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ, ಸದ್ಯ ಇವರು ಮಹಾರಾಷ್ಟç ಉದಗಿರದಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ.
ಡಾ.ತಾತ್ಯೆರಾವ ಕಾಂಬಳೆ
ಹಿರಿಯ ಸಾಹಿತಿ ಡಾ.ತಾತ್ಯೆರಾವ ಕಾಂಬಳೆಯವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದ ಮಸಾಜಿ ಕಾಂಬಳೆ ಮತ್ತು ಮಾಲನಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೪೦ರಲ್ಲಿ ಜನಿಸಿದ್ದಾರೆ. ಮರಾಠಿ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಬಿ.ಎ. ಎಲ್.ಎಲ್.ಬಿ.ಪದವಿ ಪಡೆದು ವಕೀಲರಾಗಿ ದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ತೆಲುಗು ಪಂಚ ಭಾಷಾ ಪ್ರವೀಣರಾದ ಇವರು ಕ್ರಾಂತಿಕಾರಿ ಭಾಷಣಕಾರರಾಗಿದ್ದಾರೆ. ಡಾ.ಅಂಬೇಡ್ಕರ್ ಸ್ಥಾಪಿತ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿ, ಸಾಹಿತಿಯಾಗಿ `ಭಾರತ ಭಾಗ್ಯ ವಿಧಾತ ಡಾ. ಬಿ.ಆರ್.ಅಂಬೇಡ್ಕರ್’ (ಚರಿತ್ರೆ) `ಯುದ್ದ ಬನಾಮ್ ಬುದ್ಧ’, `ಯುಗ ಪರಿವರ್ತಕ ಡಾ.ಅಂಬೇಡ್ಕರ್’, `ಹೂ ಇಜ್ ಹಿಂದು?’ ಎಂಬ ಕೃತಿಗಳು ಹಿಂದಿ ಭಾಷೆಯಲ್ಲಿ, `ಚೌನಿ’ ಎಂಬ ಕಥಾ ಸಂಕಲನ ಮರಾಠಿಯಲ್ಲಿ ಬರೆದಿದ್ದಾರೆ. `ಭಾರತ ಭಾಗ್ಯ ವಿಧಾತ ಡಾ.ಬಿ.ಆರ್.ಅಂಬೇಡ್ಕರ್ ’ ಇದು ಕನ್ನಡಕ್ಕೆ ಅನುವಾದಗೊಂಡಿದೆ. ೧೯೭೦ರಲ್ಲಿ ಡಾ. ಅಂಬೇಡ್ಕರ್ ಅವರ ಮಗ ಯಶ್ವಂತರಾವ ಸ್ಥಾಪಿಸಿದ ಭಾರತೀಯ ಬೌದ್ಧ ಮಹಾಸಭಾದ ದಕ್ಷಿಣ ಭಾರತದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರಿಗೆ ೧೯೯೦ರಲ್ಲಿ ಮೀರಾ ತಾಯಿ ಅಂಬೇಡ್ಕರ್ ರವರು ಭಾರತೀಯ ಬೌದ್ಧ ಮಹಾಸಭಾ ದಕ್ಷಿಣ ಭಾರತದ ಲಿಗಲ್ ಅಡ್ವಿಕೇಟ್ ಆಗಿಯು ನೇಮಕ ಮಾಡಿದ್ದರಿಂದ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ೧೯೬೪ರಲ್ಲಿ ವಿದ್ಯಾರ್ಥಿಯಾಗಿದ್ದಾಗ ಔರಂಗಾಬಾದನಲ್ಲಿ ಅಂಬೇಡ್ಕರ ಸ್ಥಾಪಿತ ಮಿಲಿಂದ ಕಾಲೇಜ್ ನಿಂದ `ಮಿಸ್ಟರ್ ಮಿಲಿಂದ ಪ್ರಶಸ್ತಿ, ೧೯೯೩ರಲ್ಲಿ ದೆಹಲಿಯಿಂದ ಡಾ.ಅಂಬೇಡ್ಕರ್ ರಾಷ್ಟ್ರೀಯ ಸೇವಾ ಪ್ರಶಸ್ತಿ, ೨೦೦೭ರಲ್ಲಿ ಹುಬ್ಬಳ್ಳಿ-ಧಾರವಾಡ ಬೌದ್ಧ ಮಹಾಸಭಾದಿಂದ `ಅಂಬೇಡ್ಕರ್ ಪ್ರಶಸ್ತಿ, ೨೦೧೧ರಲ್ಲಿ ಕರ್ನಾಟಕ ಸರ್ಕಾರದಿಂದ ಡಾ.ಅಂಬೇಡ್ಕರ್ ಪ್ರಶಸ್ತಿ, ೨೦೧೨ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೧೪ರಲ್ಲಿ ಭಗವಾನ್ ಬುದ್ಧ ಅಂತರಾಷ್ಟ್ರೀಯ ಫೀಲೋಸಿಫ್ ಅವಾರ್ಡ, ೨೦೧೭ರಲ್ಲಿ ಬೆಂಗಳೂರಿನ ವರ್ಚುವಲ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯು ಲಭಿಸಿದೆ. ಇವರು ೧೯೬೭ ಮತ್ತು ೧೯೯೬ರಲ್ಲಿ ಬೀದರ ಲೋಕಸಭಾ, ೧೯೭೮ರಲ್ಲಿ ಹುಲಸೂರು ವಿಧಾನ ಸಭಾ, ಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪ ಮತಗಳಿಂದ ಪರಾಭವ ಗೊಂಡಿದ್ದು ಬೆಸರದ ಸಂಗತಿಯಾಗಿದೆ. ಸದ್ಯ ಇವರು ಹೆಂಬತ್ತರ ಇಳಿ ವಯಸ್ಸಿನಲ್ಲೂ ಸಮಾಜ ಸೇವಕರಾಗಿ, ಶಿಕ್ಷಣ ಪ್ರೇಮಿ, ಸಾಹಿತಿಯಾಗಿ ಹೈದರಾಬಾದನಲ್ಲಿ ನೆಲೆಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)









