ಮಂಗಳವಾರ, ಜನವರಿ 14, 2025
ವೀರಂತರೆಡ್ಡಿ ಜಂಪಾ
ಉದಯೋನ್ಮುಖ ಬರಹಗಾರರಾದ ವೀರಂತರೆಡ್ಡಿ ಜಂಪಾ ರವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಐನಾಪೂರ ಗ್ರಾಮದ ಗುಂಡಾರೆಡ್ಡಿ ಮತ್ತು ಬಕ್ಕಮ್ಮಾ ದಂಪತಿಗಳಿಗೆ ದಿನಾಂಕ ೫-೭-೧೯೬೯ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್.ಎಂ.ಎ.ಬಿ.ಎಡ್.ಪದವಿಧರರಾದ ಇವರು ೧೯೮೯ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸೇರಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸದ್ಯ ಹುಮನಾಬಾದ ತಾಲೂಕಿನ ಕನಕಟ್ಟಾ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕತೆ, ಕವನ, ಹನಿಗವನ, ಲೇಖನಗಳನ್ನು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ೧೯೮೭ರಲ್ಲಿ ಪಿ.ಯು. ವಿದ್ಯಾರ್ಥಿಯಾಗಿದಾಗ ಬೆಂಗಳೂರಿನ ರಾಜ್ಯ ಮಟ್ಟದ ಪರ-ವಿರೋಧ ಚರ್ಚೆ, ಭಾಷಣ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ಸಾಹಿತ್ಯದೊಂದಿಗೆ ಉತ್ತಮ ಸಂಘಟಕರು ಆಗಿರುವ ಇವರು ೨೦೦೧ ರಿಂದ ೨೦೦೪. ೨೦೦೮ ರಿಂದ ೨೦೧೧ ರವರೆಗೆ ಹುಮನಾಬಾದ ತಾಲೂಕಾ ಕಸಾಪ ಅಧ್ಯಕ್ಷರಾಗಿ, ೨೦೦೫ ರಿಂದ ೨೦೦೮ ರವರೆಗೆ ನೃಪತುಂಗ ಕನ್ನಡ ಬಳಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನದಿಂದ ಶಿಕ್ಷಕ ರತ್ನ ಪ್ರಶಸ್ತಿ, ಹಾರಕೂಡ ಮಠದಿಂದ ಚನ್ನಶ್ರೀ ಪ್ರಶಸ್ತಿ, ಹಿಂದಿ ಪ್ರತಿಷ್ಠಾನ ಧಾರವಾಡದಿಂದ ಶಿಕ್ಷಕ ಸಾಹಿತ್ಯ ರತ್ನ ಪ್ರಶಸ್ತಿ, ಹುಮನಾಬಾದ ತಾಲೂಕಿನ ಆದರ್ಶ ಶಿಕ್ಷಕ ಪ್ರಶಸ್ತಿ, ಬೀದರ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ತಾಲೂಕಾ ರಾಜ್ಯೋತ್ಸವ ಪ್ರಶಸಿ, ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ