ಪುಟಗಳು

ಮಂಗಳವಾರ, ಜನವರಿ 14, 2025

ಡಾ. ರವೀಂದ್ರ ಲಂಜವಾಡಕರ್

ಹವ್ಯಾಸಿ ಬರಹಗಾರ ಡಾ.ರವೀಂದ್ರ ಲಂಜವಾಡಕರ್ ರವರು ಭಾಲ್ಕಿ ತಾಲೂಕಿನ ಲಂಜವಾಡ ಗ್ರಾಮದ ವಿಲಾಸರಾವ ಮತ್ತು ಅಂಜನಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೮೦ರಲ್ಲಿ ಜನಿಸಿದ್ದಾರೆ. ಎಂ.ಎ. ಪದವಿಧರರಾದ ಇವರು ಬೀದರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನುಭಾವ ಸಾಹಿತ್ಯ ಪ್ರಚಾರ ಮತ್ತು ದಾಸ ಸಾಹಿತ್ಯದ ಹೊಸ ಆಯಾಮಗಳ ಚಿಂತನೆ ಹಾಗೂ ದಾಸರ ಕ್ಷೇತ್ರ ದರ್ಶನಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಅಮೆರಿಕಾದ ಯುಗಾ ಯುನಿವರ್ಸಿಟಿಯ ಹುಬ್ಬಳ್ಳಿ ಶಾಖೆಯಲ್ಲಿ `ದಾಸ ಸಾಹಿತ್ಯದ ಮಹತ್ವ ಮತ್ತು ಪ್ರಸ್ತುತತೆ’ ಎಂಬ ವಿಷಯದಲ್ಲಿ ಪಿ.ಎಚ್.ಡಿ.ಅಧ್ಯಯನ ಮಾಡುತ್ತಿದ್ದಾರೆ. `ಕನಕದಾಸರ ಪ್ರತಿಮಾ ಲೋಕ' ಎಂಬುದು ಇವರು ರಚಿಸಿದ ಕೃತಿಯಾಗಿದ್ದು ಅದು ಅಪ್ರಕಟಿತವಾಗಿದೆ. ಅಷ್ಟೇಯಲ್ಲದೆ ಕೆಲ ಅನುಭಾವ ಲೇಖನಗಳು ಇತರರು ಸಂಪಾದಿಸಿದ ಸ್ಮರಣ ಸಂಚಿಕೆ, ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. `ಸಮಾಜ ಮುಖಿ ಕೀರ್ತನೆಗಳು' ಎಂಬ ನಾಲ್ಕು ಸಂಪುಟಗಳ ಸಂಪಾದಕೀಯ ಮಂಡಳಿಯ ಸದಸ್ಯರಾಗಿರುವ ಇವರು ಬೀದರದಿಂದ ಪ್ರಕಟವಾಗುತ್ತಿರುವ `ಸಾಹಿತ್ಯ ಸಿಂಚನ' ತ್ರೈಮಾಸಿಕ ಪತ್ರಿಕೆಯ ಗೌರವ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜನಿವಾದ ವರ್ಚುವಲ್ ಯುನಿವರ್ಸಿಟಿ ವತಿಯಿಂದ ಮೈಸೂರಿನಲ್ಲಿ ನಡೆದ ಆ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸತ್ಕರಿಸಿದ್ದಾರೆ. ಸದ್ಯ ಇವರು ಬೀದರದ ನಿವಾಸಿಯಾಗಿದ್ದು, ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ