ಮಂಗಳವಾರ, ಜನವರಿ 14, 2025
ಡಾ.ಸುರೇಶ ಮುಳೆ
ಕನ್ನಡ ಮತ್ತು ಹಿಂದಿ ಭಾಷೆಗಳೆರಡರಲ್ಲೂ ಸಾಹಿತ್ಯ ರಚಿಸಿರುವ ಡಾ.ಸುರೇಶ ಮುಳೆ. ಭಾಲ್ಕಿ ತಾಲೂಕಿನ ಅಂಬೆಸಾAಗವಿ ಗ್ರಾಮದ ಮಾರುತಿರಾವ ಮತ್ತು ಪಾರ್ವತಿಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೩ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ.(ಹಿಂದಿ) ಪದವೀಧರರಾದ ಇವರು ಧಾರವಾಡದ ವಿದ್ಯಾರಣ್ಯ ಪದವಿ ಪೂರ್ವ ಪದವಿ ಪೂರ್ವ ಕಾಲೇಜಿನಲ್ಲಿ ಹಿಂದಿ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ `ಕಚ್ಚಿದಿವಾರ, ನಯಾಡ್ರೆಸ್, ಏಕಬುನೌತಿ ಚುನೌತಿ, ಗುರುದೇವೋ ಭವ, ದುಸರಿ ಶಾದಿ' ಎಂಬ ಕತೆಗಳು ಬರೆದಿದ್ದಾರೆ. ಇವರ ಬರಹಗಳು ಅನೇಕ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ದೆಹಲಿಯಿಂದ ಡಾ.ಅಂಬೇಡ್ಕರ್ ಫೆಲೋಶಿಪ್ ಪ್ರಶಸ್ತಿ, ಬೂಸಾವಳದ ವತಿಯಿಂದ ರವೀಂದ್ರನಾಥ ಟ್ಯಾಗೋರ್ ಲೇಖಕ ಪ್ರಶಸ್ತಿ, ದೆಹಲಿಯ ದಲಿತ ಸಾಹಿತ್ಯ ಅಕಾದೆಮಿ ವತಿಯಿಂದ ಮಹಾತ್ಮ ಜ್ಯೋತಿಬಾ ಫುಲೆ ಪ್ರಶಸ್ತಿಗಳು ಲಭೀಸಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ