ಪುಟಗಳು

ಶುಕ್ರವಾರ, ಜನವರಿ 10, 2025

ರೇವಣಸಿದ್ದಪ್ಪಾ ವಾಂಜರಖೇಡೆ

ಮಕ್ಕಳ ಸಾಹಿತಿ ರೇವಣಸಿದ್ದಪ್ಪಾ ವಾಂಜರಖೇಡೆಯವರು ಬೀದರ ಜಿಲ್ಲೆಯ ಬಸವಕಲ್ಯಾಣದ ಬಸವಲಿಂಗಪ್ಪಾ ಮತ್ತು ವೀರಮ್ಮಾ ದಂಪತಿಗಳಿಗೆ ದಿನಾಂಕ ೧೦-೬-೧೯೪೨ರಲ್ಲಿ ಜನಿಸಿದ್ದಾರೆ. ಎಚ್.ಎಸ್.ಸಿ. ಟಿ.ಸಿ.ಎಚ್.ಶಿಕ್ಷಣ ಪಡೆದು ೧೯೬೨ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ೨೦೦೦ರಲ್ಲಿ ನಿವೃತ್ತರಾಗಿದ್ದಾರೆ. ಇವರು ೧೯೬೭ರಲ್ಲಿ `ಕಡುಕನ ಸಂಸಾರ' ೧೯೯೨ರಲಿ `ಗೀತಾಳ ಜ್ಯೋತಿ’ ೧೯೯೩ರಲ್ಲಿ `ನಾರಿ ತೋರಿದ ದಾರಿ’ ೧೯೯೭ರಲ್ಲಿ `ಹೇಮರೆಡ್ಡಿ ಮಲ್ಲಮ್ಮ’ ಎಂಬ ನಾಟಕಗಳು, ೧೯೯೪ರಲ್ಲಿ `ಮಕ್ಕಳ ಪರಿಮಳ’ ಎಂಬ ಮಕ್ಕಳ ಕವಿತೆಗಳು, ೧೯೯೫ರಲ್ಲಿ `ಚಿಣ್ಣರ ಚುಟುಕು’ ಎಂಬ ಶಿಶುಪ್ರಾಸ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರಿಗೆ ೨೦೦೪ರಲ್ಲಿ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ೨೦೦೩ರಲ್ಲಿ ಹಾರಕೂಡದ ೭ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ೨೦೧೯ರಲ್ಲಿ ಗದಲೇಗಾಂವ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ರತ್ನ ಪ್ರಶಸ್ತಿ, ನೀಡಿ ಗೌರವಿಸಿದ್ದಾರೆ. ಮತ್ತು ೨೦೧೦ರಲ್ಲಿ ಬಸವೇಶ್ವರ ದೇವಸ್ಥಾನದ ನಂದಿಧ್ವಜ ತರಬೇತಿಯವರಿಂದ ಇವರಿಗೆ ಕಲ್ಲುಸಕ್ಕರೆಯಿಂದ `ತುಲಾಭಾರ’ ಮಾಡಿ ಸತ್ಕರಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ