ಶುಕ್ರವಾರ, ಜನವರಿ 10, 2025
ಪಿ.ಬಸವರಾಜ
ಕನ್ನಡ ಪಂಡಿತರೆಂದರೆ ಖ್ಯಾತರಾಗಿ ಭಾಮಿನಿ ಷಟ್ಪದಿಯಲ್ಲಿ ಕಾವ್ಯ ರಚಿಸಿದ ಕವಿಯೆಂದರೆ ಪಿ.ಬಸವರಾಜ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದ ಗುರಪ್ಪಾ ಮತ್ತು ಗುರುಸಿದ್ದಮ್ಮಾ ದಂಪತಿಗಳಿಗೆ ದಿನಾಂಕ ೨೦-೦೬-೧೯೪೪ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್., ಬಿ.ಇಡಿ, ಎಂ.ಎ., ಸ್ನಾತಕೊತ್ತರ ಪದವಿಧರರಾದ ಇವರು ೧೯೬೨ರಲ್ಲಿ ಶಿಕ್ಷರಾಗಿ ಸೇವೆಗೆ ಸೇರಿ ಸಹಾಯಕ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ೨೦೦೨ರಲ್ಲಿ ನಿವೃತ್ತರಾಗಿದ್ದಾರೆ.
`ಹೃನ್ನಾದ', `ಕಮ್ಮಟದ ಕಾರಣಿಕ' (ಭಾಮಿನಿ ಷಟ್ಪದಿ) `ವಿವೇಚನೆ,' `ವಚನ ಚಿಂತನೆ’, `ಸ್ವಾತಂತ್ರ‍್ಯ ಹೋರಾಟಗಾರ ಲಿಂಗಶೆಟ್ಟೆಪ್ಪ ಸಾಹು', 'ಹೇಮರೆಡ್ಡಿ ಮಲ್ಲಮಾಂಬೆಯ ಪುರಾಣಂ' (ಸರಳಾನುವಾದ) `ವಚನ ಸಂಪದ' (ಸಂಪಾದನೆ) `ಸಂಸ್ಕೃತಿ ಸಿಂಚನ' `ಕಲಿಗಾಲದ ತಿವದಿಗಳು' (ಅಂಶಗಣ ಪ್ರಧಾನವಾದ ತ್ರಿಪದಿ) ಇವು ಇವರ ಪ್ರಮುಖ ಕೃತಿಗಳಾಗಿವೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ `ಧರಿನಾಡ ಸಿರಿ' ಮತ್ತು `ವ್ಯಾಕರಣ ಶ್ರೀ ರತ್ನ' ಎಂಬ ಪ್ರಶಸ್ತಿ ನೀಡಿ ನಾರಾಯಣಪುರದಲ್ಲಿ ನಡೆದ ೪ನೇ ವಲಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಿದ್ದಾರೆ. ೧೯೮೩ರಲ್ಲಿ ಕೈವಾರದಲ್ಲಿ ನಡೆದ ೫೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಹಾಗೂ ೧೯೯೨ರಲ್ಲಿ ಕೊಪ್ಪಳದಲ್ಲಿ ನಡೆದ ೬೨ನೇ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಸದ್ಯ ಇವರು ಬೀದರನಲ್ಲಿ ವಾಸವಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ