ಪುಟಗಳು

ಶುಕ್ರವಾರ, ಜನವರಿ 10, 2025

ಚಂದ್ರಕಾಂತ ಪೊಸ್ತೆ

ದಲಿತ ಬಂಡಾಯ ಲೇಖಕರಾದ ಚಂದ್ರಕಾAತ ಪೊಸ್ತೆಯವರು. ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಘಾಟಹಿಪ್ಪರ್ಗಾ ಗ್ರಾಮದ ಶ್ರೀ ವಿಠಲರಾವ ಪೊಸ್ತೆ ಮತ್ತು ಶ್ರೀಮತಿ ನರಸಾಬಾಯಿ ದಂಪತಿಗಳಿಗೆ ದಿನಾಂಕ ೫-೮-೧೯೫೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿ ಪಡೆದು ೧೯೭೪ರಲ್ಲಿ ಕರ್ನಾಟಕ ಸರ್ಕಾರದ ರಾಯಚೂರು ಭೂ ಮಾಪನ ಇಲಾಖೆಯಲ್ಲಿ ಭೂ ಮಾಪಕರಾಗಿ ಸೇವೆ ಸಲ್ಲಿಸಿ ೨೦೧೦ರಲ್ಲಿ ಕಲಬುರಗಿಯ ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ವಿದ್ಯಾರ್ಥಿಯಾಗಿರುವಾಗಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿ ಇವರು ಶೋಷತ ಜನಾಂಗದ ಧ್ವನಿಯಾಗಿ ಚಂಪಾ, ದ್ಯಾವನೂರರ ಒಡನಾಟದಲ್ಲಿ ಅನೇಕ ಹೋರಾಟಗಳನ್ನು ಮಾಡಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ೧೯೮೭ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರು ಪಾಲಿ ಭಾಷೆಯಿಂದ ಮರಾಠಿಗೆ ಅನುವಾದಿಸಿದ್ದ `ಬುದ್ಧ ವಂದನಾ' ಎಂಬ ಕೃತಿಯು ಕನ್ನಡಕ್ಕೆ ಅನುವಾದಿಸಿ ಅದರ ೧೦ ಸಾವಿರ ಪ್ರತಿಗಳು ನಾಡಿನಾದ್ಯಂತ ಉಚಿತವಾಗಿ ಹಂಚಿದ್ದಾರೆ. ೨೦೧೭ರಲ್ಲಿ `ವೈಚಾರಿಕ ಸಂಘರ್ಷ' ಎಂಬ ಮತ್ತೊಂದು ಕೃತಿ ಬಹಳ ವರ್ಷಗಳ ನಂತರ ಪ್ರಕಟಿಸಿ ಇದು ಕೂಡ ಉಚಿತವಾಗಿ ಹಂಚಿದ್ದಾರೆ. ದಲಿತ ಮತ್ತು ಬಂಡಾಯ ಸಾಹಿತ್ಯ ಸಂಘಟನೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಕೆಲ ಸಭೆ ಸಮಾರಂಭಗಳನ್ನು ಆಯೋಜಿಸಿ ೧೯೮೬ರಲ್ಲಿ ದ್ಯಾವನೂರ ಮಹಾದೇವ ರವರ ಜೋತೆಗೂಡಿ ಕರ್ನಾಟಕದಿಂದ ಇವರಿರ್ವರು ಮಾತ್ರ ಪ್ರತಿನಿಧಿಯಾಗಿ ಹೈದರಾಬಾದಿನಲ್ಲಿ ನಡೆದ ವಿಶ್ವ ಬರಹಗಾರರ ಕಮ್ಮಟದಲ್ಲಿ ಭಾಗವಹಿಸಿದ್ದಾರೆ. ಸಾಹಿತಿ, ಉತ್ತಮ ವಾಗ್ಮಿಗಳು, ಕ್ರಾಂತಿಕಾರಿ ಭಾಷಣಕಾರರು ಆದ ಇವರಿಗೆ ೧೯೮೭ರಲ್ಲಿ ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ `ಡಾ.ಅಂಬೇಡ್ಕರ್ ಫೀಲ್ಲೊಷಿಪ್ ಪ್ರಶಸ್ತಿ, ೧೯೯೭ರಲ್ಲಿ ಬೀದರ ಜಿಲ್ಲಾಡಳಿತದಿಂದ `ರಾಜ್ಯೋತ್ಸವ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ. ೧೯೮೮ರಲ್ಲಿ ನಾಗಪುರದಲ್ಲಿ ಜರುಗಿದ ನಾಟ್ಯ ಸಮ್ಮೇಳನದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ್ದರಿಂದ ತಾಮ್ರಪಟವು ನೀಡಿ ಸತ್ಕಾರಿಸಿದ್ದಾರೆ. ಮತ್ತು ಮಧ್ಯ ಪ್ರದೇಶದ ಬಾಲ ವಿಶ್ವವಿದ್ಯಾಲಯ ನಾಗಪುರ, ಬೀದರ, ಗುಲಬರ್ಗಾ, ಧಾರವಾಡ, ಮೈಸೂರು, ಪುಣೆ, ಬೆಂಗಳೂರು ಮೊದಲಾದ ವಿಶ್ವವಿದ್ಯಾಲಗಳಿಂದ ಗೌರವ ಸಮ್ಮಾನ ಪಡೆದಿದ್ದಾರೆ. ಇವರ ಬರಹಗಳು ಕೆಲ ಪ್ರಮುಖ ಪತ್ರಿಕೆ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ