ಪುಟಗಳು

ಶುಕ್ರವಾರ, ಜನವರಿ 10, 2025

ಸರಸ್ವತಿ ವಿ.ಪಾಟೀಲ್

ಎಲೆಮರೆಯ ಕಾಯಿಯಂತೆ ತಮ್ಮಷ್ಟಕ್ಕೆ ತಾವೂ ಸಾಹಿತ್ಯ ರಚಿಸುತ್ತಿರುವ ಲೇಖಕಿಯೆಂದರೆ ಸರಸ್ವತಿ ವಿ.ಪಾಟೀಲ್ ರವರು. ಇವರು ಕಲಬುರಗಿಯ ಗಣಪತರಾವ ಲಿಂಗನವಾಡಿ ಪಾಟೀಲ್, ಮತ್ತು ಗಂಗಾಬಾಯಿ ದಂಪತಿಗಳಿಗೆ ದಿನಾಂಕ- ೪-೧೨-೧೯೫೧ರಲ್ಲಿ ಜನಿಸಿದ್ದಾರೆ. ಇವರ ಮಾತೃಭಾಷೆ ಮರಾಠಿಯಾಗಿದ್ದರು, ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಎಂ.ಎ.ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವಿಯನ್ನು ಪಡೆದು, ೧೯೭೬ರಲ್ಲಿ ಕಲಬುರಗಿಯ `ಗೋದುತಾಯಿ ಮಹಿಳಾ ಮಹಾವಿದ್ಯಾಲಯ' ಹಾಗೂ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು `ಭಾರತದ ಸಂವಿಧಾನ' `ಭಾರತದ ಸರಕಾರ ಹಾಗೂ ರಾಜಕೀಯ' `ರಾಜಕೀಯ ಸಿದ್ಧಾಂತ' `ರಾಜನೀತಿ ವಿವೇಚಕರು' `ಭಾರತದ ರಾಜಕೀಯ ಪ್ರಕ್ರಿಯೆ' `ಸಾರ್ವಜನಿಕ ಆಡಳಿತ ಭಾಗ -೧ ' `ಸಾರ್ವಜನಿಕ ಆಡಳಿತ ಭಾಗ-೨ . ಇವು ಅವರು 'ರಾಜ್ಯ ಶಾಸ್ತ್ರ' ಪದವಿ ಪಠ್ಯ ವಿಷಯಕ್ಕೆ ಸಂಬAಧಿಸಿದAತೆ ಬರೆದು ಪ್ರಕಟಿಸಿದ್ದಾರೆ. `ರುಚಿಕರ ಅಡುಗೆ' `ಜನಪದ ಹಾಡುಗಳು' `ಮನೆಮದ್ದು' `ಕೋಹಿನೂರು ಕುಸುಮ' `ಚನ್ನ ಸಂಭ್ರಮ -೫೭.' ಎಂಬ ಕೃತಿಗಳು ಸಂಪಾದಿಸಿದ್ದಾರೆ. ಮತ್ತು ಹಾರಕೂಡ ಸಂಸ್ಥಾನ ಮಠದ ಪೂಜ್ಯ ಷ.ಬ್ರ.ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಕುರಿತು ಕೆಲ ಕವನಗಳು ರಚಿಸಿದ್ದಾರೆ. ಇವರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯಿAದ `ಅತ್ಯುತ್ತಮ ಶಿಕ್ಷಕ' ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ