ಶುಕ್ರವಾರ, ಜನವರಿ 10, 2025
ಡಾ.ಬಾಬುರಾವ ಮುಡಬಿ
ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕೆಲ ಕೃತಿಗಳು ಪ್ರಕಟಿಸಿದ ಲೇಖಕರೆಂದರೆ ಡಾ.ಬಾಬುರಾವ ಮುಡಬಿ.ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮದ ದಿ.ಚಂದ್ರಪ್ಪಾ ಮತ್ತು ಗುಂಡಮ್ಮ ದಂಪತಿಗಳಿಗೆ ದಿನಾಂಕ ೧೩-೫-೧೯೫೨ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ.ಪದವಿಧರರಾದ ಇವರು ೧೯೭೬ರಲ್ಲಿ ತಹಶಿಲ್ದಾರರಾಗಿ ಸೇವೆಗೆ ಸೇರಿ ಸುಮಾರು ಸತತವಾಗಿ ೨೦ ಇಲಾಖೆಗಳಲ್ಲಿ ಉನ್ನತ ಅಧಿಕಾರಿಯಾಗಿ, ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ, ಕೆ.ಎಸ್.ಆರ್.ಟಿ.ಸಿ. ಕೃಷಿ, ಭೂ ಮಾಪನ, ಮತ್ತು ಸಮಾಜಕಲ್ಯಾಣ ಇಲಾಖೆಯ ಆಯುಕ್ತರಾಗಿ ಸೇವೆ ಸತತ ೩೬ ವರ್ಷ ಸೇವೆ ಸಲ್ಲಿಸಿ ೨೦೧೨ರಲ್ಲಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿ, ಹಲವಾರು ಲೇಖನಗಳನ್ನು ಬರೆದು ಕೆಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. `ಮಹಿಳಾ ಸಬಲಿಕರಣ ಮತ್ತು ಅಂಬೇಡ್ಕರ್ ದೃಷ್ಟಿಕೋನ' ಎಂಬುದು ಅವರ ಪಿ.ಎಚ್.ಡಿ. ಪ್ರಬಂಧ ಪುಸ್ತಕ ಪ್ರಕಟಿಸಿದ ಇವರು `ಸಾರ್ವಜನಿಕ ಆಡಳಿತ ನಿರ್ವಹಣೆ' ಕುರಿತು ಕೆಲ ಪುಸ್ತಕಗಳು, ಹಾಗೂ ತಮ್ಮ ಜೀವನದಲ್ಲಿ ನಡೆದು ಬಂದ ಕಾಲಘಟ್ಟಗಳ ಕುರಿತು `ಆತ್ಮಕತೆ'ಯು ಬರೆಯುತ್ತಿದ್ದಾರೆ. ಇವರು ಲಕ್ಷ್ಮಿ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯೊAದು ಹುಟ್ಟು ಹಾಕಿ ಅದರ ಮೂಲಕವು ಕೆಲ ಲೇಖಕರ ಕೃತಿಗಳು ಪ್ರಕಟಿಸಿದ್ದಾರೆ. ಇವರು ಶಿಕ್ಷಣ ಕ್ಷೇತ್ರದಲ್ಲಿಯು ತುಂಬ ಆಸಕ್ತರಾಗಿದ್ದರಿಂದ ಶ್ರೀ ಲಕ್ಷ್ಮಿ ವಿದ್ಯಾವರ್ಧಕ ಶಿಕ್ಷಣ ಸಂಘದ ವತಿಯಿಂದ ಬಸವಕಲ್ಯಾಣದಲ್ಲಿ ಶ್ರದ್ಧಾಂಜಲಿ ಕಿವುಡು ಮಕ್ಕಳ ವಸತಿಯುತ ಶಾಲೆ ತೆರದು, ಆ ಮಕ್ಕಳಿಗಾಗಿ ಶ್ರಮಿಸುತ್ತಿದ್ದಾರೆ. ಮತ್ತು ಬಸವಕಲ್ಯಾಣದಲ್ಲಿ ಬಿ.ಎಡ್.ಶಿಕ್ಷಕರ ತರಬೇತಿ ಸಂಸ್ಥೆಯು ೨೦೦೪ರಲ್ಲಿ ತೆರೆದು ಶಿಕ್ಷಣ ನೀಡುತ್ತಿದ್ದಾರೆ. ಹಾಗೂ ಪದವಿ ಮಹಾವಿದ್ಯಾಲಯಗಳು ಕೂಡ ನಡೆಸಿಕೊಂಡು ಬರುತ್ತಿದ್ದಾರೆ. ಮತ್ತು ತಮ್ಮ ಹುಟ್ಟೂರಿನಲ್ಲಿ ಮಾಜಿ ಶಾಸಕ ಗೋಪಾಳರಾವ ಪಾಟೀಲ್ ರವರ ಹೆಸರಿನಲ್ಲಿ ಪ್ರೌಢ ಶಾಲೆಯೊಂದು ತೆರೆದು ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿದ್ದಾರೆ. ಊರಲ್ಲಿ ಪ್ರಾಥಮಿಕ ಪ್ರೌಢ ಶಾಲೆಗಳು ಸರ್ಕಾರಿ ಅನುದಾನಿತಗೊಂಡಿವೆ. ಕಲಬುರಗಿಯಲ್ಲಿಯು ಸರ್ವೋದಯ ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಶಾಲೆಯೊಂದಿಗೆ,ವಿವಿಧ ಶಾಲಾ ಕಾಲೇಜುಗಳ ಮೂಲಕ ಶಿಕ್ಷಣ ನೀಡುತ್ತಿದ್ದಾರೆ. ಇಂದಿನ ವಿದ್ಯಾರ್ಥಿಗಳು ಉನ್ನತ ಹುದ್ದೆ ಪಡೆಯಬೇಕಾದರೆ ಅವರು ಮಾಡಬೇಕಾದ ಸತತ ಅಧ್ಯಯನದ ಕುರಿತು ಕೈಪಿಡಿಗಳು ಬರೆದು ಮುದ್ರಿಸುವ ವಿಚಾರದಲ್ಲಿದ್ದಾರೆ. ಸದ್ಯ ಇವರು ಬೆಂಗಳೂರಿನಲ್ಲಿ ವಾಸವಾಗಿದ್ದು ವಿಶ್ರಾಂತಿ ಜೀವನದೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಇವರ ಕುರಿತು ಶಿವಮೊಗ್ಗ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಜೋಗನ್ ಶಂಕರ ಅವರು ಪ್ರಧಾನ ಸಂಪಾದಕರಾಗಿ, ಹಂಪಿಯ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ.ಮಲ್ಲಿಕಾ ಘಂಟಿಯವರ ಸಂಪಾದಕತ್ವದಲ್ಲಿ `ಕಪ್ಪು ಕಾಲಿನ ಖಡ್ಗ' ಎಂಬ ಅಭಿನಂದನಾ ಗ್ರಂಥವು ಪ್ರಕಟಗೊಂಡು ಬಿಡುಗಡೆಯಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ