ಪುಟಗಳು

ಶುಕ್ರವಾರ, ಜನವರಿ 10, 2025

ಪ್ರೊ. ಸೂರ್ಯಕಾಂತ ಶೀಲವಂತ

ಸೃಜನೇತರ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಪ್ರೊ. ಸೂರ್ಯಕಾಂತ ಶೀಲವಂತ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಧನ್ನೂರ (ಕೆ) ಗ್ರಾಮದ ಶಂಕರೆಪ್ಪಾ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೮-೧೨-೧೯೫೮ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಇಡಿ.ಸ್ನಾತಕೋತ್ತರ ಪದವೀಧರರಾದ ಇವರು ಶ್ರೀ ಬಸವೇಶ್ವರ ಪ.ಪೂ. ಮತ್ತು ಅಕ್ಕಮಹಾದೇವಿ ಮಹಿಳಾ ಪದವಿ ಕಾಲೇಜಿನಲ್ಲಿ ೨೦ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ಸದ್ಯ ಪುಣ್ಯ ಕೋಟಿ ಕಲಾ ಮತ್ತು ವಾಣಿಜ್ಯ ಪ.ಪೂ.ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ೨೦೦೪ರಲ್ಲಿ `ಸ್ವತಂತ್ರ ಭಾರತದಲ್ಲಿ ಶಿಕ್ಷಣ ಮತ್ತು ಶ್ರೇಷ್ಠ ಶಿಕ್ಷಣ ತಜ್ಞರು' ಎಂಬ ಕೃತಿ ಪ್ರಕಟಿಸಿದ್ದು ಅದು ಪಠ್ಯ ಪುಸ್ತಕವಾಗಿದೆ. ಮತ್ತು ಇವರ ಬರಹಗಳು ಬಾಳೆಹೊನ್ನೂರಿನ ರಂಭಾಪುರಿ ಪೀಠದಿಂದ ಪ್ರಕಟವಾಗುವ `ರಂಭಾಪುರಿ ಬೆಳಗು' ಮತ್ತಿತರ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಇವರಿಗೆ ೨೦೦೫ರಲ್ಲಿ ಬಸವಕಲ್ಯಾಣ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ೨೦೧೨ರಲ್ಲಿ ಉತ್ತರಾಂಚಲ ರಾಜ್ಯದ ಶ್ರೀ ಹಿಮವತ್ತೆ ದಾರ ಪೀಠದಿಂದ `ವೃತ್ತಿ ಶ್ಚೆöÊತನ್ಯ ರತ್ನ ಪ್ರಶಸ್ತಿ, ೨೦೧೫ರಲ್ಲಿ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದಿಂದ `ಶಿಕ್ಷಣ ತಜ್ಞ ’ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ