ಪುಟಗಳು

ಶುಕ್ರವಾರ, ಜನವರಿ 10, 2025

ಭೀಮಶೇನ್ ಗಾಯಕವಾಡ

` ಬಿ.ಎಂ.ಜಿ’ ಕಾವ್ಯನಾಮ ಹೊಂದಿರುವ ದಲಿತ ಕವಿಯೆಂದೆ ಹೆಸರಾದ ಭೀಮಸೇನ್ ಎಂ.ಗಾಯಕವಾಡ . ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದವರು ಮೂಲತಃ ಶಹಾಪೂರ ತಾಲೂಕಿನ ಇಟಗಿ ಗ್ರಾಮದ ಮಲ್ಲಪ್ಪ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೧೬-೦೧-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಇಡಿ. ಎಂ.ಎ.ಎಂ.ಫೀಲ್. ಪದವಿಧರರಾದ ಇವರು ಬಸವಕಲ್ಯಾಣ ತಾಲೂಕಿನ ರಾಜೋಳಾ ಸರ್ಕಾರಿ ಪ್ರೌಢ ಶಾಲಾ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ೨೦೦೫ರಲ್ಲಿ `ನಲಿದಾಡಿ ಹೊಳೆಯುವ ಮುತ್ತುಗಳೆ' ಮತ್ತು `ಬುದ್ಧನೊಲುಮೆಯ ಆಧುನಿಕ ವಚನಗಳು' ೨೦೧೯ರಲ್ಲಿ `ಭೀಮನೊಲುಮೆಯ ಶಾಯಿರಿ ಗಜಲ್‌ಗಳು' (ಕವನ ಸಂಕಲನಗಳು) `ಸಮರಸ ಜೀವಿ' (ಸಂಪಾದನೆ) `ಬೆಸಗರಹಳ್ಳಿ ರಾಮಣ್ಣನವರ ಕತೆಗಳು' (ವಿಮರ್ಶೆ) ಕೃತಿಗಳು ರಚಿಸಿದ್ದಾರೆ. ಮತ್ತು `ಬಸವನೊಲುಮೆಯ ಕಾವ್ಯಗಳು', `ಕನಕನೊಲುಮೇಯ ಹಾಯ್ಕುಗಳು’ ಎಂಬ ಕೃತಿಗಳು ರಚಿಸಿದ್ದು ಅವು ಮುದ್ರಣ ಹಂತದಲ್ಲಿದೆ. ಇವರ `ಬೆಸಗರಹಳ್ಳಿ ರಾಮಣ್ಣನವರ ಕತೆಗಳು’ ಎಂಬ ವಿಮರ್ಶೆ ಕೃತಿಗೆ ೨೦೧೭ರಲ್ಲಿ ಹುಮನಾಬಾದ ತಾಲೂಕಿನ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಿಂದ `ಡಾ.ಅಂಬೇಡ್ಕರ್ ಪುಸ್ತಕ ಪ್ರಶಸ್ತಿ, ಬೀದರದ ದೇಶಪಾಂಡೆ ಪ್ರತಿಷ್ಠಾನದಿಂದ `ಕಾವ್ಯ ಚೇತನ ರತ್ನ' ಪ್ರಶಸ್ತಿ, ೨೦೨೦ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿಯು ಪಡೆದಿದ್ದಾರೆ. ಇವರ ಬರಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟಿವಾಗಿವೆ. ಇವರು ಸಿರಿಗನ್ನಡ ವೇದಿಕೆಯ ಹುಮನಾಬಾದ ತಾಲೂಕಾ ಅಧ್ಯಕ್ಷರಾಗಿ. ಜಾನಪದ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ