ಪುಟಗಳು

ಶುಕ್ರವಾರ, ಜನವರಿ 10, 2025

ಡಾ.ಸತೀಶಕುಮಾರ ಹೊಸಮನಿ

ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ, ಡಾ.ಸತೀಶಕುಮಾರ ಎಸ್. ಹೊಸಮನಿ. ಇವರು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಖೇರ್ಡಾ (ಬಿ) ಗ್ರಾಮದ ಶಂಬುಲಿAಗ ಹಾಗೂ ಮಾಪಮ್ಮಾ ಅವರ ಉದರದಲ್ಲಿ ದಿನಾಂಕ ೦೧-೦೬-೧೯೬೯ರಲ್ಲಿ ಜನ್ಮತಳೆದಿದ್ದಾರೆ. ಎಂ.ಎ. ಎಂ.ಎಲ್.ಐ.ಎಸ್.ಸಿ. ಎಂ.ಫೀಲ್. ಪಿ.ಎಚ್.ಡಿ. ಡಿ.ಲಿಟ್. ಪದವಿಧರರಾದ ಇವರು ೧೯೯೩ರಲ್ಲಿ ಅಸಿಸ್ಟೆಂಟ್ ಪೊಸ್ಟ ಮಾಸ್ಟರ್ ಆಗಿ ಸೇವೆಗೆ ಸೇರಿ ನಂತರ ಬಸವಕಲ್ಯಾಣದ ಪೊಸ್ಟ ಮಾಸ್ಟರ್À ಆಗಿ ಮುಂದೆ ಕೆಲವರ್ಷ ಶಹಪೂರದ ಹೊಸಪೇಟೆಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ, ಕಲಬುರಗಿ ಗ್ರಂಥಾಲಯ ವಿಭಾಗದ ಅಧಿಕಾರಿಯಾಗಿ, ೧೯೯೫ ರಿಂದ ೨೦೦೪ರ ವರೆಗೆ ಸೇವೆ ಸಲ್ಲಿಸಿ ಅಪಾರ ಓದುಗ ಬಳಗದ ಸಾಹಿತಿಗಳಿಗೆ ಸ್ನೇಹಜೀವಿಯಾಗಿ ಬೆಳೆದಿದ್ದಾರೆ.ಇವರು ೨೦೦೬ರಿಂದ ಬೆಂಗಳೂರಿನ ಆರ್.ಟಿ.ನಗರದ ಕೇಂದ್ರ ಗ್ರಂಥಾಲಯದ ಉಪನಿರ್ದೆಶಕರಾಗಿ ೨೦೧೧ರವರೆಗೆ ಸೇವೆಸಲ್ಲಿಸಿ ೨೦೧೧ರಿಂದ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸಿ ೨೦೧೪ರಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಸಾಹಿತ್ಯ ಬಳಗದೊಂದಿಗೆ ಕರ್ನಾಟಕದ ಲೇಖಕ ಹಾಗೂ ಪ್ರಕಾಶಕರ ಪುಸ್ತಕ ಸಂಸ್ಕೃತಿಗೆ ಪ್ರೊತ್ಸಾಹಿಸುತ್ತಾ `ಉತ್ತಮ ಗ್ರಂಥಾಲಯ ನಿರ್ದೇಶಕರು' ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ. ಇವರ ಕುರಿತು ನಾಡಿನ ಹಿರಿಯ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಚಂದ್ರಶೇಖರ ಕಂಬಾರ, ಸಿದ್ಧಲಿಂಗಯ್ಯ ಮೊದಲಾದವರು `ಸತೀಶಕುಮಾರ ಅವರೊಬ್ಬ ದಕ್ಷ ಅಧಿಕಾರಿ' ಎಂದು ಪ್ರಶಂಸಿಸಿದ್ದಾರೆ. ಇವರು ಪ್ರಕಟಿಸಿದ ಕೃತಿಗಳೆಂದರೆ `ಗ್ರಂಥಾಲಯ ಸಂಸ್ಕೃತಿ’, `ಗ್ರಂಥಾಲಯ ಸಂದರ್ಭ ಸೇವೆ’, `ಸಾಗರದಾಚೆ ಕನ್ನಡದ ಕಂಪು’, `ಡಾ.ಎಸ್.ಆರ್.ರಂಗನಾಥನ್’, `ಗ್ರಂಥಾಲಯಗಳ ಲೋಕದಲ್ಲಿ’, `ಸಕ್ಕರೆಯ ಸವಿನೆನಪು’ ಎಂಬ ಒಟ್ಟು ೧೦ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರಿಗೆ ಸುಮಾರು ೫೦ಕಿಂತ ಹೆಚ್ಚು ರಾಜ್ಯ, ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರ ಸಾಹಿತ್ಯ ಮತ್ತು ಗ್ರಂಥಾಲಯ ಇಲಾಖೆಯ ಸಾಧನೆ ಕುರಿತು ಸಾಹಿತಿ ಎ.ಜಿ.ರತ್ನ ಕಾಳೆಗೌಡ ಪ್ರಧಾನ ಸಂಪಾದಕತ್ವದಲ್ಲಿ `ಕಲ್ಯಾಣ ಪ್ರಭೆ' ಎಂಬ ಅಭಿನಂದನಾ ಗ್ರಂಥವು ಪ್ರಕಟಿಸಿದ್ದಾರೆ. ಈ ಗ್ರಂಥದಲ್ಲಿ ನಾಡಿನಲ್ಲಿ ಹಲವಾರು ಲೇಖಕರು ಇವರ ಕುರಿತು ಲೇಖನ, ಕಾವ್ಯ ಬರೆದು ಅಭಿನಂದಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ