ಪುಟಗಳು

ಮಂಗಳವಾರ, ಜನವರಿ 14, 2025

ಮಾಣಿಕರಾವ ಜ್ಯೋತಿ

`ಭೀಮಕವಿ' ಎಂದೇ ಖ್ಯಾತರಾದ ಕವಿ ಮಾಣಿಕರಾವ ಜ್ಯೋತಿ ರವರು ಬೀದರ ತಾಲೂಕಿನ ಖಾಸೆಂಪೂರ ಗ್ರಾಮದ ನರಸಪ್ಪ ಮತ್ತು ಹಣಮವ್ವ ದಂಪತಿಗಳಿಗೆ ೧೯೩೩ರಲ್ಲಿ ಜನಿಸಿದ್ದಾರೆ. ಮತ್ತು ಕೆಲಕಾಲ ಹೈದರಾಬಾದ್ ನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿ ನಂತರ ಸರ್ಕಾರಿ ವಸತಿ ಗೃಹ ಇಲಾಖೆಯಲ್ಲಿ ಮತ್ತು ಬೀದರ ಏರ್ ಫೋರ್ಸ್ ನಲ್ಲಿ ಸೇವಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಇಹಲೋಕ ತ್ಯಜಿಸಿದ್ದಾರೆ. ಇವರು ಬೀದರ ಹತ್ತಿರದ ಪಾತರಪಳ್ಳಿಯಲ್ಲಿ ಬಹುಕಾಲ ಜೀವನ ಕಳೆದಿದ್ದು ದಿ. ಪಂಚಶೀಲ ಗವಾಯಿ ಕಾಶಿನಾಥ ಅವರೊಂದಿಗೆ ನಾಗಪುರದಲ್ಲಿ ಬೌದ್ಧ ಧಮ್ಮ ದೀಕ್ಷೆ ಪಡೆದು ಹಿಂದೂ ದೇವತೆಗಳ ಆರಾಧನೆ ಗೀತೆಗಳನ್ನು ಕೈ ಬಿಟ್ಟು ಸ್ವತಃ ಬುದ್ದ ಬಸವ ಅಂಬೇಡ್ಕರ್ ಕುರಿತಾದ ಗೀತೆಗಳು ರಚನೆ ಮಾಡಿ ಹಾಡುವ ಕಲಾವಿದರಾಗಿದ್ದರು. ಮೊದಲು ತತ್ವಪದಗಳು ಬರೆದಿದ್ದ, ನಂತರದಲ್ಲಿ ಅಂಬೇಡ್ಕರ್ ಬುದ್ದ ಬಸವಣ್ಣನವರ ಬಗ್ಗೆ ಬರೆದ ಹಾಡುಗಳು ಭಜನೆ ಪದಗಳಾಗಿ ತುಂಬ ಜನಪ್ರಿಯವಾಗಿವೆ. ಮತ್ತು ಇವರು ವಿಶೇಷವಾಗಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಹೆಚ್ಚು ಸಾಹಿತ್ಯ ರಚನೆ ಮಾಡಿದ್ದರಿಂದ ಇವರಿಗೆ `ಭೀಮ ಕವಿ' ಎಂದು ಜನರೆ ನೀಡಿದ ಬಿರುದಾಗಿದೆ. ಹಾಗಾಗಿ ಇವರ ಕುರಿತು ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್ ಅವರು `ಭೀಮ ಕವಿ ಮಾಣಿಕರಾವ ಜ್ಯೋತಿ' ಎಂಬ ಕೃತಿಯನ್ನು ಪ್ರಕಟಿಸಿದರೆ, ಮಂಗಲಾ ವಿ.ಕಪರೆಯವರು `ಮಾಣಿಕ್ಯ ಜ್ಯೋತಿ’ ಎಂಬ ಜೀವನ ಚರಿತ್ರೆ ಬರೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ