ಪುಟಗಳು

ಶುಕ್ರವಾರ, ಜನವರಿ 10, 2025

ರುಕ್ಮೋದಿನ್ ಇಸ್ಲಾಂಪೂರ.

ಬೀದರ ಜಿಲ್ಲೆಯ ಮುಸ್ಲಿಂ ಕನ್ನಡ ಸಾಹಿತಿ ಎಂದರೆ ರುಕ್ಮೋದಿನ್ ಇಸ್ಲಾಂಪೂರ. ಇವರನ್ನು ಕನ್ನಡದ ಎರಡನೇ ಸಂತ ಶಿಶುನಾಳ ಷರೀಫ್’ ಎಂದರೆ ತಪ್ಪಾಗಲಾರದು. ಯಾಕೆಂದರೆ ಶಿಶುನಾಳ ಷರೀಫರು ಹಿಂದು ಧರ್ಮದ ಗುರುಗೊವಿಂದ ಭಟ್ಟರ ಶಿಷ್ಯರಾಗಿ ಸಾಹಿತ್ಯ ರಚಿಸಿದರೆ ಇವರೂ ಹಿಂದು ಧರ್ಮದ `ಲಾಲ್ ಧರಿ' ಶ್ರೀಗಳ ಪರಮ ಶಿಷ್ಯರಾಗಿ ಸರ್ವಧರ್ಮ ಸಮಾನತೆಗಾಗಿ ಸಾಹಿತ್ಯ ರಚಿಸುತ್ತಿದ್ದಾರೆ. ಇವರು ಬಸವಕಲ್ಯಾಣ ತಾಲೂಕಿನ ಇಸ್ಲಾಂಪೂರದ ಪಾಶಮೀಯ ಮತ್ತು ಮಸ್ತಾನಬೀ ದಂಪತಿಗಳಿಗೆ ದಿನಾಂಕ ೧೮-೦೭-೧೯೬೬ರಲ್ಲಿ ಜನಿಸಿದ್ದಾರೆ. ಎಂ.ಎ. ಎಲ್.ಎಲ್.ಬಿ.ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಎನ್.ಇ.ಕೆ.ಆರ್.ಟಿ. ನೌಕರರಾಗಿ ಕೆಲ ಕೃತಿಗಳು ಪ್ರಕಟಿಸಿದ್ದಾರೆ. `ಕಾರ್ಗತ್ತಲೆಯಿಂದ ಮಂಜು ಬೆಳಕಿನೆಡೆಗೆ’ (ಕಥಾ ಸಂಕಲನ) `ಕಣ್ಣಂಚಿನ ನೀರು', 'ಕರುಳ ಬಳ್ಳಿ' (ಕಾದಂಬರಿಗಳು) `ಎನ್ನೊಡಲಿನಿಂದ ತಮ್ಮಡಿಲಿಗೆ ...' (ಕವನ ಸಂಕಲನ) `ಮಾನಸ ಗಂಗೋತ್ರಿಯ ಮಡಿಲಲ್ಲಿ’ (ಲೇಖನ ಸಂಕಲನ,) `ಈ ಯೋಗಿ ವಾಸ್ತವವಾದಿ’ ಎಂಬ ಲಾಲಧರಿ ಶ್ರೀಗಳ ಕುರಿತಾದ ಜೀವನ ಚರೀತ್ರೆಯು ಬರೆದು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಮತ್ತು ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ೨೦೦೬ರಲ್ಲಿ ಬೀದರನಲ್ಲಿ ನಡೆದ ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರ ಸಂವಾದಕರಾಗಿ ಕವಿಗೊಷ್ಠಿಗಳಲ್ಲಿಯು ಕವನ ವಾಚನ ಮಾಡಿದ್ದಾರೆ. ಇವರಿಗೆ ತಾಲೂಕು ಮತ್ತು ಜಿಲ್ಲಾ ಮಟ್ಟದ `ರಾಜ್ಯೋತ್ಸವ ಪ್ರಶಸ್ತಿ' ಹಾಗೂ ಹಾರಕೂಡ ಶ್ರೀಮಠದ `ಶ್ರೀಚೆನ್ನ ರತ್ನ ಪ್ರಶಸ್ತಿ' ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ