ಪುಟಗಳು

ಶುಕ್ರವಾರ, ಜನವರಿ 10, 2025

ನಾಗೇಂದ್ರ ಆರ್.ಬಿರಾದಾರ

ಸಾಹಿತಿ ನಾಗೇಂದ್ರ ಆರ್.ಬಿರಾದಾರ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ಮಂಠಾಳದ ರಾಚಣ್ಣಾ ಮತ್ತು ಮಲ್ಲಮ್ಮ ದಂಪತಿಗಳಿಗೆ ದಿನಾಂಕ ೨೨-೪-೧೯೬೬ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್.ಬಿ.ಎ .ಬಿ.ಎಡ್.ಎಂ.ಎ. ಪದವಿಧರರಾಗಿ ೧೯೯೦ರಿಂದ ಸರ್ಕಾರಿ ಪ್ರಾ.ಶಾ.ಶಿಕ್ಷಕರಾಗಿ ನಂತರ ೨೦೧೨ರಲ್ಲಿ ಬಡ್ತಿ ಹೊಂದಿ ಈಗ ಬಸವಕಲ್ಯಾಣ ಬೋಸಗಾ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೨೦೦೨ರಲ್ಲಿ `ಜೀವನ ಜೋಕಾಲಿ’ ಎಂಬ ಕವನಸಂಕಲನ ಪ್ರಕಟಿಸಿದ್ದಾರೆ ಮತ್ತು `ನಾನು ಬದುಕಬೇಕು' `ಎಚ್ಚರ ತಂಗಿ ಎಚ್ಚರ'. `ನಾನೇಕೆ ವರದಕ್ಷಿಣೆ ಕೊಡಬೇಕು' (ಮಕ್ಕಳ ನಾಟಕಗಳು) `ತಾನಾಗಿ ಬಂದವಳು’ ಎಂಬ ಕಿರು ಕಾದಂಬರಿ, ಕೆಲ ಕತೆಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಆಕಾಶವಾಣಿ ಪ್ರಕಟ, ಪ್ರಸಾರವಾಗಿವೆ. ಮತು ್ತಕುಕನೂರಿನ ದೇವಚಂದ್ರ ರಾಜ್ಯ ಚುಟುಕು ಸ್ಪರ್ಧೆಯಲ್ಲಿ ಇವರಿಗೆ ಪ್ರಥಮ ಬಹುಮಾನ ಲಭೀಸಿದೆ. ಮತ್ತು ೨೦೦೨ರಲ್ಲಿ ಕರ್ನಾಟಕ ಸಾಹಿತ್ಯ ಮತ್ತು ಕೇಂದ್ರ ಸಾಹಿತ್ಯ ಅಕಾದೆಮಿಯವರು ಏರ್ಪಡಿಸಿದ ಕಥಾ ಕಮ್ಮಟ, ಹಾಗೂ ಕಲಬುರಗಿ ಬರಹಗಾರÀ ಕಮ್ಮಟದಲ್ಲಿ ಪಾಲ್ಗೊಂಡಿದ್ದಾರೆ. ಹಾಗೂ ಮೈಸೂರಿನ ರಂಗಾಯಣ, ಕೊಪ್ಪಳದ ಚುಟುಕು ಸಾಹಿತ್ಯ, ಪ್ರಶಸ್ತಿಗಳು ಪಡೆದಿದ್ದಾರೆ. ಮತ್ತು ಮೈಸೂರಿನ ರಂಗಾಯಣದಲ್ಲಿ ತರಬೇತಿ ಪಡೆದು ಡಿ.ಪಿ.ಇ.ಪಿ, ಎಸ್.ಎಸ್.ಎ. ಮತ್ತು ಆರ್.ಎಂ.ಎಸ್.ನ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಸಿ.ಆರ್.ಪಿ.ಯಾಗಿ, ಬಸವಕಲ್ಯಾಣ ಬಿ.ಆರ್.ಪಿ.ಯಾಗಿ ಜಿಲ್ಲಾ ಡಿ.ಪಿ.ಇ.ಪಿ.ಕಲಾಜಾತÀ ನಿರ್ದೇಶಕರಾಗಿ ಹಳ್ಳಿ ಹಳ್ಳಿಗಳಲ್ಲಿ ಅಕ್ಷರ ಕಲಿಕೆಯ ಹಾಡು ಹಾಡಿ, ಬೀದಿ ನಾಟಕಗಳ ಮೂಲಕ ಜನಜಾಗೃತಿ ಮೂಡಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ