ಸೋಮವಾರ, ಜನವರಿ 13, 2025
ದಿ.ವೀರೇಂದ್ರ ಸಿಂಪಿ
ಹಿರಿಯ ಸಾಹಿತಿ ವೀರೇಂದ್ರ ಸಿಂಪಿಯವರು ಬಿಜಾಪುರ ಜಿಲ್ಲೆ ಚಡಚಣ ತಾಲ್ಲೂಕಿನ ಜಾನಪದ ತಜ್ಞರಾದ ಸಿಂಪಿ ಲಿಂಗಣ್ಣ ಮತ್ತು ಸೊಲಬವ್ವ ದಂಪತಿಗಳಿಗೆ ದಿನಾಂಕ ೧೪-೧೦-೧೯೪೮ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ೧೯೬೨ರಲ್ಲಿ ಬೀದರದ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಇಂಗ್ಲೀಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ೧೯೯೯ರಲ್ಲಿ ನಿವೃತ್ತಿರಾಗಿ ನಾಲ್ಕು ವರ್ಷ ಚಿದಂಬರ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಇವರು ‘ಖೊಟ್ಟಿ ನಾಣ್ಯ' ಎಂಬ ಮೊದಲ ಕಥೆ ಬರೆದು ‘ಸಂಗಮ’ ಎಂಬ ಕೈ ಬರಹದ ಪತ್ರಿಕೆಯಲ್ಲಿ ಪ್ರಕಟಿತವಾಗಿದೆ. `ಏಕಲವ್ಯ’ ಎಂಬ ಹಿಂದಿ ನಾಟಕ ಕನ್ನಡಕ್ಕೆ ಅನುವಾದಿಸಿದ್ದಾರೆ. `ಇಂದಿನ ವಿದ್ಯಾರ್ಥಿಗಳಲ್ಲಿ ಅಸಂತೋಷವೇಕೆ ?’ ಎಂಬ ಪ್ರಬಂಧ ಬರೆದು ಅಂತರ ಕಾಲೇಜು ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡಿದರು. ಇವರು ಬರೆದ ಲೇಖನ, ಪ್ರಬಂಧ, ಅಂಕಣ, ಕಥೆ, ವಿಮರ್ಶೆ ಮೊದಲಾದ ಬರಹಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿಯಲ್ಲಿ ಇಂಗ್ಲೀಷ ಪ್ರಾಧ್ಯಾಪಕರಾದರೂ ಬರೆದದ್ದೆಲ್ಲಾ ಕನ್ನಡದಲ್ಲೆ. ಇವರು ಪ್ರಮುಖ ಪ್ರಬಂಧಕಾರರು ಮತ್ತು ಅಂಕಣಕಾರರೆAದೇ ಪ್ರಸಿದ್ಧಿಯಾಗಿದ್ದಾರೆ. ಮತ್ತು `ಕಾಗದದ ಚೂರು,’ `ಭಾವ ಮೈದುನ,’ `ಸ್ವಚ್ಛಂದ ಮನದ ಸುಳಿಗಾಳಿ,’ `ಪರಸ್ಪರ ಸ್ಪಂದನ,’ (ಲಲಿತ ಪ್ರಬಂಧ ಸಂಕಲನಗಳು) `ಆಯ್ದ ಲಲಿತ ಪ್ರಬಂಧಗಳು.,' `ಚನ್ನಬಸವಣ್ಣನವರ ವಚನಗಳು,' `ಬೀದರ ಜಿಲ್ಲಾ ದರ್ಶನ,' `ಬೀದರ ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರು,' (ಸಂಪಾದನೆ) `ಜೀವನವೆಂದರೇನು ?' (ಅಂಕಣ) `ಸುಖಸಾಧನ' (ವೈಚಾರಿಕ) `ಚೆನ್ನಬಸವಣ್ಣ ಮತ್ತು ಆಯ್ದಕ್ಕಿ ಲಕ್ಕಮ್ಮ' (ವಚನ ಸಾಹಿತ್ಯ) `ಯೋಗಾರಂಭ', 'ಗಾಯ ಡಿ ಮೊಪಾಸನ ಕಥೆಗಳು' (ಅನುವಾದ) ಮಾಸ್ತಿ ವೆಂಕಟೇಶ ಅಯ್ಯಂಗಾರ್, ಆರ್.ವಿ. ಬೀಡಪ್, (ಚರಿತ್ರೆ) ಸಿಂಪಿ ಲಿಂಗಣ್ಣನವರ ಸಾಹಿತ್ಯ, ಇಂಡಿ ತಾಲ್ಲೂಕ ದರ್ಶನ, ಹತ್ತು ಪಾಶ್ಚಾತ್ಯ ಕಾದಂಬರಿಕಾರರು. ಬಣ್ಣಗಾರಿಕೆ ಇತ್ಯಾದಿ ಕೃತಿಗಳು ಪ್ರಕಟಿಸಿದ್ದಾರೆ. ಇವರ ಭಾವ ಮೈದುನ ಲಲಿತ ಪ್ರಬಂಧಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನವು ಲಭಿಸಿದೆ, `ಸ್ವಚ್ಛಂದ ಮನದ ಸುಳಿಗಾಳಿ' ಎಂಬ ಪ್ರಬಂಧ ಸಂಕಲನವು ಕರ್ನಾಟಕ,ಗುಲಬರ್ಗಾ, ಶಿವಾಜಿ ವಿಶ್ವವಿದ್ಯಾಲಯಗಳಲ್ಲಿ ಮೊದಲ ಬಿ.ಎ.ವಿದ್ಯಾರ್ಥಿಗಳಿಗೆ ಪಠ್ಯವಾಗಿ ಪ್ರಕಟವಾಗಿದೆ. `ಪರಿಸರ ಸ್ಪಂದನ’ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ. ಬಹುಮಾನ ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಯು ಲಭಿಸಿದೆ. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ವಿಜಾಪುರ ಮತ್ತು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ೨೦೦೭ರಲ್ಲಿ ಸಾಹಿತಿ ಡಾ.ರಮೇಶ ಮೂಲಗೆ ಅವರ `ಲಲಿತಾರವಿಂದ’ ಎಂಬ ಅಭಿನಂದನ ಗ್ರಂಥವು ಪ್ರಕಟಿಸಿದ್ದಾರೆ. ಇವರು ದಿನಾಂಕ ೩೧-೫-೨೦೧೭ರಂದು ತಮ್ಮ ೭೯ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ