ಸೋಮವಾರ, ಜನವರಿ 13, 2025
ಪರಮ ಪೂಜ್ಯ. ಡಾ.ಶಿವಕುಮಾರ್ ಮಹಾಸ್ವಾಮಿಗಳು
ಸಾಹಿತಿ ಹಾಗೂ ಮಠಾಧೀಶರಾದ ಪರಮ ಪೂಜ್ಯ. ಡಾ.ಶಿವಕುಮಾರ ಮಹಾಸ್ವಾಮಿಗಳು. ಇವರ ಮೂಲನಾಮ `ವೀರಕುಮಾರ' ಎಂದಾಗಿದೆ. ಇವರು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಪಡನೂರು ಗ್ರಾಮದ ಶ್ರೀ ಕಲ್ಲಪ್ಪ ಮತ್ತು ಶ್ರೀಮತಿ ಪಾರ್ವತಮ್ಮ ದಂಪತಿಗಳ ಉದರದಲ್ಲಿ ದಿನಾಂಕ ೧೬-೧೧-೧೯೪೫ರಲ್ಲಿ ಜನಿಸಿದ್ದಾರೆ. ಎಂ.ಎ.ತತ್ವಶಾಸ್ತ್ರ ಅಧ್ಯಯನ ಮಾಡಿದ ಇವರು ಬೀದರದ ಶ್ರೀ ಸಿದ್ಧರೂಢ ಮಠ ಚಿದಂಬರಾಶ್ರಾಮದ ಪೀಠಾಧ್ಯಕ್ಷರಾಗಿದ್ದು ಅಪಾರ ಪಾಂಡಿತ್ಯವನ್ನು ಹೊಂದಿದ್ದಾರೆ. ಆಳವಾದ ಅಧ್ಯಯನ ಮತ್ತು ವೈಚಾರಿಕ ಚಿಂತನೆಯಿAದ ಉತ್ತಮ ವಾಗ್ಮಿಗಳು ಹಾಗೂ ಪ್ರವಚನಕಾರರು ಆಗಿದ್ದು ತಮ್ಮ ಅನುಭಾವದೊಂದಿಗೆ ಹಲವು ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ ೧೯೭೧ರಲ್ಲಿ `ಗೀತೆಯ ಸ್ಥಿತಿ ಪ್ರಜ್ಯೋಪನಿಷತ್, ೧೯೮೧ರಲ್ಲಿ `ಅಷ್ಟಾವರಣ,’ ೧೯೮೨ರಲ್ಲಿ `ಅನುಭವ ಸಾರ ಭಾಗ-೧, ೧೯೮೩ರಲ್ಲಿ `ಶಿವ ಸ್ತುತಿ, ೧೯೮೭ರಲ್ಲಿ `ಜಪಜ್ಞಾನ, ೧೯೮೮ರಲ್ಲಿ `ಮೃತೋರ್ಮಾಮೃತಂಗಮಯ ಭಾಗ-೧, ೧೯೯೦ರಲ್ಲಿ `ಪೂಜಾಯೋಗ, ೧೯೯೬ರಲ್ಲಿ `ಭಜಗೋವಿಂದA, ೧೯೯೬ರಲ್ಲಿ `ಮೃತೋರ್ಮಾಮೃತಂಗಮಯ ಭಾಗ -೨, ಮತ್ತು `ಶತ ಕಥಾ ಕುಸುಮಾಂಜಲಿ, ಹಾಗೂ `ಅನುಭವ ಸಾರ ಭಾಗ -೨, ೨೦೦೪ರಲ್ಲಿ `ವೇದಾಂತಿ ಸಾರ' ಎಂಬ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರಿಗೆ `ವೇದಾಂತ ವಾಗೀಶ, ಗೀತೋತ್ತಮ, ಶಿವಾದ್ವೈತ.’ ಎಂಬಿತ್ಯಾದಿ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ