ಪುಟಗಳು

ಭಾನುವಾರ, ಜನವರಿ 12, 2025

ಡಾ. ವಜ್ರಾ ಪಾಟೀಲ್

ಸಾಹಿತಿ ಡಾ. ವಜ್ರಾ ಪಾಟೀಲ್. ರವರು ಹುಟ್ಟಿದ್ದು ಹುಬ್ಬಳ್ಳಿಯಲ್ಲಿ ಇವರ ತಂದೆ ವಿರೂಪಾಕ್ಷಗೌಡ ತಾಯಿ ಪಾರ್ವತಿದೇವಿಯ ಉದರದಲ್ಲಿ ದಿನಾಂಕ ೨೩-೬-೧೯೫೬ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ.ಪದವಿಧರರಾದ ಇವರು ಬೀದರದ ದೇವಿ ಕಾಲೋನಿಯ ವಕೀಲರಾದ ಕೈಲಾಸನಾಥ ಪಾಟೀಲ್ ಅವರ ಧರ್ಮಪತ್ನಿಯಾಗಿದ್ದು, ಬೀದರ ಅಕ್ಕ ಮಹಾದೇವಿ ಮಹಿಳಾ ಮಹಾವಿದ್ಯಾಲಯದಲ್ಲಿ ಮನಃಶಾಸ್ತ್ರ ವಿಷಯದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು `ಮರ', `ಮನದಾಳ', `ಚೈತ್ರ'. `ಚೈತನ್ಯ' (ಕವನ ಸಂಕಲನಗಳು) ಮತ್ತು `ಆಧುನಿಕ ವಚನಗಳು' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕುರಿತು ಸಾಹಿತಿ ವಿಜಯಲಕ್ಷ್ಮಿ ಮುಜುಮದಾರ ಅವರು `ಸ್ನೇಹ' ಎಂಬ ಕವನ ಸಂಕಲನ ಹಾಗೂ ರಘುಶಂಖ ಭಾತಂಬ್ರಾ ಅವರು `ವಜ್ರಾ ಬಿಂಬ' ಎಂಬ ಕೃತಿಗಳು ರಚಿಸಿದ್ದಾರೆ. ಮತ್ತು ಕೆಲ ವಿದ್ಯಾರ್ಥಿಗಳು ಇವರ ಕುರಿತು ಎಂ.ಫೀಲ್. ಪಿ.ಎಚ್.ಡಿ. ಸಂಶೋಧನಾ ಕಾರ್ಯಕೈಗೊಂಡಿದ್ದಾರೆ. ಇವರು ೨೦೦೭ರಿಂದ ೨೦೧೦ರವರೆಗೆ ಬೀದರ ಜಿಲ್ಲಾ ಮಹಿಳಾ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ೨೦೧೦ರಿಂದ ೨೦೧೩ರವರೆಗೆ ಆ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ೨೦೧೨ರಲ್ಲಿ ನೇಪಾಳದಲ್ಲಿ ನಡೆದ ಅಖಿಲ ಭಾರತ ಕವಯತ್ರಿರ ಸಮ್ಮೇಳನದಲ್ಲಿ ಕವನವಾಚನ, ಹಾಗೂ ಬಸವಕಲ್ಯಾಣದ ಸಸ್ತಾಪೂರದಲ್ಲಿ ನಡೆದ ೬ನೇ ತಾಲೂಕಾ ಆಧುನಿಕ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯಾಗಿ ಆಯ್ಕೆಯಾಗಿದರು. ೨೦೧೭ರಲ್ಲಿ ಕನ್ನಡಾಂಬೆಯ ಕಲಾನಿಕೇತನದ `ರಾಜ್ಯೋತ್ಸವ ಪ್ರಶಸ್ತಿ,' ಬೀದರ ಜಿಲ್ಲಾ ೧೧ನೇ ಕಸಾಪ ಸಮ್ಮೇಳನದಲ್ಲಿ `ಉತ್ತಮ ಕವಯತ್ರಿ' ಸನ್ಮಾನ ಮತ್ತು ಮುಕ್ತಿ ಮಂದಿರ ಬೀದರದಿಂದ `ಮನಶಾಸ್ತ್ರಜ್ಞೆ' ಗೌರವ ಸನ್ಮಾನ, ೨೦೧೩ರಲ್ಲಿ ರಾಷ್ಟ್ರೀಯ ಅಂತರಾಷ್ಟ್ರೀಯ ಸ್ನೇಹಿತರ ಒಕ್ಕೂಟ ನವದೆಹಲಿಯಿಂದ `ಶಿಕ್ಷಾರತ್ನ ಪ್ರಶಸ್ತಿ , ಕಸಾಪ ಮಹಾರಾಷ್ಟ್ರ ಗಡಿನಾಡು ಘಟಕದಿಂದ `ಮಹಾಲೇಖಕಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ