ಪುಟಗಳು

ಭಾನುವಾರ, ಜನವರಿ 12, 2025

ಸೂರ್ಯಕಾಂತ ನಿನ್ನೇಕರ

ಸಾಹಿತಿ ಸೂರ್ಯಕಾಂತ ನಿನ್ನೇಕರ. ಇವರು ಬೀದರ ತಾಲೂಕಿನ ಚಿಲ್ಲರ್ಗಿ ಗ್ರಾಮದ ವೀರೆಂದ್ರ ಮತ್ತು ಸಿಮಿತ್ರಾಬಾಯಿ ದಂಪತಿಗಳಿಗೆ ದಿನಾಂಕ ೨೫-೮-೧೯೫೫ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ. ಟಿ.ಸಿ.ಎಚ್ ವರೆಗೆ ಶಿಕ್ಷಣ ಪಡೆದ ಇವರು ೧೯೮೨ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ೨೦೧೫ರಲ್ಲಿ ನಿವೃತ್ತರಾಗಿದ್ದಾರೆ. ವಿದ್ಯಾರ್ಥಿಯಾಗಿರುವಾಗಲೇ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಕನ್ನಡ ಕಸ್ತೂರಿ' `ಬಯಕೆ'. `ಅಮ್ಮ' `ಜೀವನ ಜೋಕಾಲಿ' `ಕಾವ್ಯಧಾರೆ', `ಎದೆಯ ವೀಣೆ', `ಸಿರಿ ಮಲ್ಲಿಗೆ', `ಹೊಳೆವ ಕಂಗಳು', `ಭವ ಪ್ರತಿಭೆ', `ತಾರುಣ್ಯ ಸಿಂಧು', `ಶುಭಯೋಗ' (ಕವನ ಸಂಕಲನಗಳು) `ಶ್ರೀ ಶಿವಶರಣ ಹರಳಯ್ಯಾ ಚರಿತ್ರೆ' (ಚರಿತ್ರೆ) `ಮಹಾಶರಣ ಹರಳಯ್ಯಾ' ಮತ್ತು `ನಾ ಕಂಡ ಕನಸಿನಲ್ಲಿ' (ಲೇಖನ) `ಕಾಯಕ ಚೇತನ' (ಅಭಿನಂದನಾ ಗ್ರಂಥ) ಎಂಬ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರಿಗೆ ೨೦೧೩ರಲ್ಲಿ ಬೀದರ ತಾಲೂಕಿನ ರಾಜಗೀರಾ ಪ್ರಥಮ ಗ್ರಾಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಇವರಿಗೆ ಬೀದರ ಬಸವಕೇಂದ್ರದ ವತಿಯಿಂದ ಆದರ್ಶ ಶಿಕ್ಷಕ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನ ದತಿಯಿಂದ ಶಿಕ್ಷಣ ಸಿರಿ ಪ್ರಶಸ್ತಿ, ಪಡೆದಿದ್ದಾರೆ ಇವರ ಬರಹಗಳು ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ