ಭಾನುವಾರ, ಜನವರಿ 12, 2025
ದಿ.ಈಶ್ವರ ಕರುಣಾ ಸಾಗರ
ಬುದ್ಧ,ಬಸವ,ಅಂಬೇಡ್ಕರ್ ಮೊದಲಾದವರ ಕುರಿತು ಕವಿತೆಗಳು ಬರೆದ ಕವಿ ದಿ.ಈಶ್ವರ ಕರುಣಾ ಸಾಗರ. ಇವರು ಬೀದರ ತಾಲೂಕಿನ ಅಣದೂರು ಗ್ರಾಮದ ದಿ.ಮೊನಪ್ಪ ಮಾಸ್ತರ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೫-೧೧-೧೯೫೪ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ, ಟಿ.ಸಿ.ಎಚ್.ವರೆಗೆ ಶಿಕ್ಷಣ ಪಡೆದ ಇವರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ತಮ್ಮ ವೃತ್ತಿ ಬದುಕಿನೊಂದಿಗೆ ನೂರಾರು ಕವಿತೆಗಳನ್ನು ಹಾಡುವ ಧಾಟಿಯಲ್ಲಿ ಬರೆದಿದ್ದಾರೆ. ಇವರು ಬರೆದ ಗೀತೆಗಳು ಇಂದಿಗೂ ಕೆಲವು ಕಡೆ ಭಜನೆಯಲ್ಲಿ ಅವರ ಹಾಡು ಹಾಡುತ್ತಾರೆ. ಇವರ ತಂದೆಯು ಒಬ್ಬ ಕವಿ ತತ್ವ ಪದಕಾರರಾಗಿದ್ದರಿಂದ ಅವರ ಮಾರ್ಗದಲ್ಲಿ ಸಾಹಿತ್ಯ ರಚಿಸಿ ಗೇಯತೆಯಿಂದ ಕೂಡಿರುವ ಕಾವ್ಯ ರಚನೆ ಮಾಡಿದ್ದಾರೆ. ಮತ್ತು ೧೯೯೭ರಲ್ಲಿ `ಧಮ್ಮ ಸಂದೇಶ ಗೀತೆಗಳು' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಆದರೆ ದುರಾದೃಷ್ಟ ಇವರು ೨೫-೨-೨೦೦೭ರಲ್ಲಿ ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ