ಪುಟಗಳು

ಶುಕ್ರವಾರ, ಜನವರಿ 10, 2025

ಮಾಣಿಕರೆಡ್ಡಿ ದೇಶದ

ಸಾಹಿತಿ ನಾಟಕಕಾರರಾದ ಮಾಣಿಕರೆಡ್ಡಿ ದೇಶದ ರವರು ಬೀದರ ಜಿಲ್ಲೆ ಚಿಟಗುಪ್ಪಾ ತಾಲೂಕಿನ ಬೇಮಳಖೇಡ ಗ್ರಾಮದ ವೀರಾರೆಡ್ಡಿ ಮತ್ತು ಗಂಗಮ್ಮಾ ದಂಪತಿಗಳಿಗೆ ೧೯೫೫ರಲ್ಲಿ ಜನಿಸಿದ್ದಾರೆ. ೧೦ನೇ ತರಗತಿಯ ವರೆಗೆ ಅಧ್ಯಯನ ಮಾಡಿದ ಇವರು ಬೇಸಾಯದ ವೃತ್ತಿಯೊಂದಿಗೆ ಕವನ, ನಾಟಕ ಭಜನೆ, ತತ್ವಪದ, ಅಭಂಗಗಳ ರಚನೆ ಮಾಡಿದ್ದಾರೆ. ೨೦೧೬ರಲ್ಲಿ `ವಿಮಳಖೇಡ ಮಾಣಿಕ ನಗರೇಶ’ ಎಂಬ ಅಂಕಿತನಾಮದ ತತ್ವಪದಗಳ ಕೃತಿ, ಹಾಗೂ ೨೦೧೮ರಲ್ಲಿ `ಗಂಗಾಧರ ಬಕ್ಕಪ್ರಭು ಭಜನೆ’ ಎಂಬ ಅಭಂಗ ಕೃತಿಯು ಪ್ರಕಟಿಸಿದ್ದಾರೆ. ಮತ್ತು `ಪ್ರೇಮ ತಂದ ದುರಂತ’ (ನಾಟಕ) `ಶ್ರೀ ಮನ್ನಿರಂಜನ ಗಂಗಾಧರ ಬಕ್ಕ ಪ್ರಭುಗಳ ೧೦೮ ನಾಮಾವಳಿ, ಆದರ್ಶ ವಿದ್ಯಾರ್ಥಿ’ ಎಂಬಿತ್ಯಾದಿ ಕೃತಿಗಳು ರಚಿಸಿರುವ ಇವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ