ಶುಕ್ರವಾರ, ಜನವರಿ 10, 2025
ವಿರೂಪಾಕ್ಷಯ್ಯ ಶಿವಲಿಂಗಯ್ಯ ಮಠಪತಿ
ಹಿರಿಯ ಸಾಹಿತಿ ವಿರೂಪಾಕ್ಷಯ್ಯ ಗೋರ್ಟಾ ಅವರು ಬೀದರ ಜಿಲ್ಲೆ ಹುಲಸೂರ ತಾಲೂಕಿನ ಗೋರ್ಟಾ (ಬಿ) ಗ್ರಾಮದ ಶಿವಲಿಂಗಯ್ಯ ಹಾಗೂ ಸಂಗಮ್ಮ ದಂಪತಿಗಳ ಉದರದಲ್ಲಿ ೧೯೨೬ರಂದು ಜನಿಸಿದ ಇವರು ಸದ್ಯ ೯೪ ವರ್ಷದ ಇಳಿವಯಸ್ಸಿನವರಾದರೂ ಸಾಹಿತ್ಯ ಸಂಗೀತ ಕ್ಷೇತ್ರದಲ್ಲಿ ಇರುವ ಆಸಕ್ತಿ ಬಿಟ್ಟು ಕೊಡದೆ ಬದುಕುತ್ತಿದ್ದಾರೆ. ಇವರು ರಚಿಸಿದ ಕೃತಿಗಳೆಂದರೆ ಭಕ್ತಿ ಕುಸುಮಾಂಜಲಿ, ಭುಲಾಯಿ ಪದಗಳು, ಗುರುಗಾನ ಸ್ತುತಿ, ಗುರುಗಾನ , ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳ ಪುರಾಣ, ಹೈದರಾಬಾದ್ ಕರ್ನಾಟಕ ಜಲ್ಲಿಯಾನ ವಾಲಾಬಾಗ ಗೋರ್ಟಾ. ಹಾರಕೂಡ ಚನ್ನಬಸವ ಶಿವಯೋಗಿಗಳ ಲೀಲಾಮೃತ. ರಾಚೋಟಿ ಶಿವಾಚಾರ್ಯರ, ರೇಣುಕಾ ವಿಜಯ (ನಾಟಕ) ಶಿವಲಿಂಗಯ್ಯ ಮಠಪತಿಯವರ ಜೀವನ ಚರಿತ್ರೆ, ಕೋಲಾಟದ ಪದಗಳು ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಇವರ ಭುಲಾಯಿ ಪದಗಳು ರಜಾಕಾರರು ಗೋರ್ಟಾ ಹತ್ಯಾಕಾಂಡ ಮಾಡಿದ ನೋವಿನ ಕತೆ ಹೇಳುತ್ತವೆ. ಸಂಗೀತದಲ್ಲಿ ಅಪಾರ ಪಾಂಡಿತ್ಯ ಹೊಂದಿದ ಇವರು ೧೯೫೭ ರಲ್ಲಿ 'ಶಾರದಾ ಸಂಗೀತ ವಿದ್ಯಾಲಯ' ಸ್ಥಾಪಿಸಿ ಅಂದಿನ ಕಾಲದಲ್ಲಿ ಹೈದರಾಬಾದ್ ಕರ್ನಾಟಕ ಪ್ರಾಂತೀಯ ಸಂಗೀತ ಸಮ್ಮೇಳನ ನಡೆಸಿದ್ದಾರೆ. ಇವರಿಗೆ ೨೦೧೨-೧೩ ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಅಷ್ಟೇಯಲ್ಲದೆ ಶ್ರೀರುದ್ರ ಸಂಗೀತಾಚಾರ್ಯ, ಸಂಗೀತ ರುದ್ರ ಭೂಷಣ, ಶರಣ ಉರಿಲಿಂಗ ಪೆದ್ದಿ ಪ್ರಶಸ್ತಿ, ಸಂಗೀತ ರುದ್ರ ಸಂಪದ, ಪುರಾಣ ರತ್ನ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ