ಭಾನುವಾರ, ಜನವರಿ 12, 2025
ಇಂದುಮತಿ ಬಂಡಿ
ಹಿರಿಯ ಕವಯತ್ರಿಯಾದ ಇಂದುಮತಿ ಬಂಡಿ. ಇವರು ಬೀದರದ ವೀರಶೇಟ್ಟಿ ಮನ್ನಳ್ಳಿಕರ್ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೯-೭-೧೯೫೧ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ.ಪದವಿ ಪಡೆದ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ೨೦೧೧ರಲ್ಲಿ ನಿವೃತ್ತರಾದ ಇವರು ದಿನಾಂಕ ೨೫-೯-೨೦೧೯ರಲ್ಲಿ ಇಹಲೋಕ ತ್ಯಜಿಸಿದ್ದಾರೆ. ೨೦೦೩ರಲ್ಲಿ `ಅರಳು ಮೊಗ್ಗು' ಎಂಬ ಕವನಸಂಕಲನ ಪ್ರಕಟಿಸಿದ್ದಾರೆ. ಮತ್ತು ಆ ಕೃತಿಗೆ ೨೦೦೮ರಲ್ಲಿ ಕರ್ನಾಟಕ ಜನಸೇವಾ ಸಾಹಿತ್ಯ ಬಳಗದಿಂದ ಜನಸೇವಾ ಪ್ರಶಸ್ತಿ, ೧೫-೮-೧೯೮೭ರಲ್ಲಿ ಪಬ್ಲಿಕ್ ಪತ್ರಿಕೆ ಏರ್ಪಡಿಸಿದ ಕವನ, ಲೇಖನ ಸ್ಪರ್ಧೆಯಲ್ಲಿ `ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಶೋಷಣೆ' ಎಂಬ ಲೇಖನ ಮತ್ತು `ಒಡಲ ಕರೆ' ಎಂಬ ಕವಿತೆಗೆ ಪ್ರಥಮ ಬಹುಮಾನಗಳು ಪಡೆದಿದ್ದಾರೆ. ೧೯೯೦ ಮತ್ತು ೨೦೦೮ರಲ್ಲಿ ಹುಮನಾಬಾದ ತಾಲೂಕಿನ ಶಿಕ್ಷಕರ ಕವನ ಸ್ಪರ್ಧೆಯಲ್ಲಿ ಇವರ ಕವಿತೆಗಳಿಗೆ ಎರಡು ಸಲ ದ್ವಿತೀಯ ಬಹುಮಾನ ಲಭೀಸಿವೆ. `ಪ್ಲಾಸ್ಟಿಕ್ ಪ್ರಪಂಚ' ಎಂಬ ಮಕ್ಕಳ ವಿಜ್ಞಾನ ನಾಟಕಕ್ಕೆ ಜಿಲ್ಲಾ ಮಟ್ಟದ ಪ್ರಥಮ ಬಹುಮಾನ ಬಂದಿದೆ. ೧೯೯೨ರಲ್ಲಿ ಬೀದರ ದೀಪ ಸಾಕ್ಷರತಾ ಸಮಿತಿಯ ಸದಸ್ಯರಾಗಿದ್ದಾಗ ಬಿಡುಗಡೆಯಾದ `ಬೀದರ ಸಾಕ್ಷರತೆ ಧ್ವನಿ ಸುರುಳಿಯಲ್ಲಿ ಇವರದೊಂದು `ಅಕ್ಷರ ಕಲಿಯುವ' ಎಂಬ ಕವಿತೆ ಆಯ್ಕೆಯಾಗಿ ಜನಪ್ರಿಯತೆ ಗಳಿಸಿದೆ. `ಧನ ಪಿಶಾಚಿ' ಎಂಬ ಕತೆ ಪ್ರಪಂಚ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ. ಲಿಂಗನುಡಿ, ವಚನಕ್ರಾಂತಿ ಪತ್ರಿಕೆಯಲ್ಲಿ ಕವನಗಳು ಪ್ರಕಟವಾಗಿವೆ. ಇವರಿಗೆ ೨೦೦೦ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, ೨೦೦೫ರಲ್ಲಿ ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನದಿಂದ ಕನ್ನಡ ರತ್ನ ಪ್ರಶಸ್ತಿ, ಗುರಮಠಕಲ್ ನಿಂದ ಸಿರಿಗನ್ನಡ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ