ಪುಟಗಳು

ಶುಕ್ರವಾರ, ಜನವರಿ 10, 2025

ಆಧುನಿಕ ಒಡೆಯರ್

ಸಾಹಿತಿ ಆಧುನಿಕ ಒಡೆಯರ್ ಇವರು ಬೀದರ ಜಿಲ್ಲೆ ಹುಮನಾಬಾದಿನ ಶಿವಶಂಕರಯ್ಯ ಮತ್ತು ಕಾಸಮ್ಮ ದಂಪತಿಗಳಿಗೆ ದಿನಾಂಕ ೧-೫-೧೯೪೧ರಲ್ಲಿ ಜನಿಸಿದ್ದಾರೆ. ಎಚ್.ಎಸ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಧರ್ಮ ಪ್ರಚಾರಕ್ಕಾಗಿ ಸೇವೆ ಸಲ್ಲಿಸಿ ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ ೧೯೫೮ರಲ್ಲಿ `ಕುರಿಯ ಉಪಕಾರ ಕುರುಬರ ಅಪಕಾರ, ೧೯೬೯ರಲ್ಲಿ `ಕುರಿ ಕುರುಬ ಜ್ಞಾನ ಉಪಾಸನೆ, ೧೯೭೬ರಲ್ಲಿ `ದಕ್ಷಿಣ ಕಾಶಿ ಮೈಲಾರ.' ಎಂಬ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರಿಗೆ ೧೯೭೪ರಲ್ಲಿ ಅಖಿಲ ಭಾರತ ಪಾಲ ಕ್ಷತ್ರಿಯ ಮಹಾನುಭಾವದಿಂದ `ಪಾಲ ರತ್ನ ಪ್ರಶಸ್ತಿ, ಲಭಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ