ಪುಟಗಳು

ಶನಿವಾರ, ಜನವರಿ 11, 2025

ಮಲ್ಲಮ್ಮ ಆರ್ ಪಾಟೀಲ

ಸಾಹಿತಿ ಮಲ್ಲಮ ಆರ್.ಪಾಟೀಲ್ ಇವರು ಬೀದರ್ ಜಿಲ್ಲೆ ಔರಾದ ತಾಲೂಕಿನ ಕಮಲನಗರದ ನಾಗಶೆಟ್ಟಿ ಹಾಗೂ ಚಂದ್ರಮ್ಮ ದಂಪತಿಗಳಿಗೆ ದಿನಾಂಕ ೧೫-೧೦-೧೯೬೫ರಲ್ಲಿ ಜನಿಸಿದ್ದಾರೆ. ಎಂ.ಎ ಅರ್ಥಶಾಸ್ತ್ರ ಪದವಿಧರರಾದ ಇವರು ಹುಲಸೂರಿನ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೧೯೯೮ರಲ್ಲಿ ಭಾಲ್ಕಿಯ ಲಿಂ.ಡಾ.ಚನ್ನಬಸವ ಪಟ್ಟದೇವರ ಕುರಿತು `ಶಿವಯೋಗಿ ಚನ್ನಬಸವ' (ಕಾದಂಬರಿ) `ಶ್ರದಾಂಜಲಿ' (ಕವನ ಸಂಕಲನ) `ಮಲ್ಲಮ್ಮ ಆರ್ ಪಾಟೀಲರ ವಚನಗಳು' (ಆಧುನಿಕ ವಚನ) ಎಂಬ ಕೃತಿಗಳು ಹೊರತಂದಿದ್ದಾರೆ. ಇವರ ಕವನ ಲೇಖನಗಳು ರಾಜ್ಯ ಮಟ್ಟದ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮತ್ತು ಕಾದಂಬರಿ ಬೀದರದ ಪತ್ರಿಕೆಯೊಂದರಲ್ಲಿ ಧಾರವಾಹಿಯಾಗಿ ಪ್ರಕಟಗೊಂಡಿದೆ. ಲೇಖಕರು ಉತ್ತಮ ಭಾಷಣಕಾರರಾಗಿಯು ಹಲವಾರು ಕಡೆ ಗುರುತಿಸಿಕೊಂಡಿದ್ದಾರೆ .ಇವರಿಗೆ ಹಲವಾರು ರಾಜ್ಯ ಮಟ್ಟದ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಬಂದಿವೆ. ಮತ್ತು ಅಖಿಲ ಭಾರತ ಕವಯಿತ್ರಿ ಸಮ್ಮೇಳನದ ಗೌರವ ಸದಸ್ಯರಾಗಿ ದೆಹಲಿ ಅಮರಾವತಿ, ಹೈದ್ರಾಬಾದ್, ರಾಯಪುರ, ವಿಜಯಪುರ ಕಲಬುರಗಿ, ಬೀದರ ಇನ್ನಿತರ ಕಡೆಗಳಲ್ಲಿ ಜರುಗಿದ ಸಮ್ಮೇಳನಗಳಲ್ಲಿ ಭಾಗವಹಿಸಿ ಭಾಷಣ ಮತ್ತು ಕವನ ವಾಚನ ಮಾಡಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಭಾಲ್ಕಿಯ ಅಧ್ಯಕ್ಷರಾಗಿ ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಇವರ ಪಾಂಡಿತ್ಯದ ಪ್ರೇರಣೆಯಿಂದ ಇವರ ಮಗ ೨೦೧೬ರಲ್ಲಿ ಐ. ಎ. ಎಸ್. ಪರೀಕ್ಷೆ ಬರೆದು ಇಡೀ ರಾಷ್ಟ್ರಕ್ಕೆ ೩೭೬ನೇ ರ‍್ಯಾಂಕ್ ಪಡೆದು. ಕಂದಾಯ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ