ಪುಟಗಳು

ಭಾನುವಾರ, ಜನವರಿ 12, 2025

ಮಾಣಿಕರಾವ ಚಿಲ್ಲರ್ಗಿ

ಬಂಡಾಯ ಸಾಹಿತಿ ಮಾಣಿಕರಾವ ಚಿಲರ್ಗಿಯವರು. ಬೀದರ ತಾಲೂಕಿನ ಚಿಲರ್ಗಿ ಗ್ರಾಮದ ಕಲ್ಲಪ್ಪ ಮತ್ತು ರುಕ್ಕಮ್ಮ ದಂಪತಿಗಳಿಗೆ ದಿನಾಂಕ ೧೧-೪-೧೯೫೯ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿದ ಇವರು ಸಮಾಜ ಸೇವಕರಾಗಿ, ಧಮ್ಮ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ. ದಿ.ಕಾಶಿನಾಥ ಗವಾಯಿಗಳ ಪ್ರಭಾವದಿಂದಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಮತ್ತು `ಜಯ ಭೀಮ ಲೀಲಾ, ಹಾಗೂ `ಗೀತಾ ಮಾಲಾ' ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ