ಪುಟಗಳು

ಭಾನುವಾರ, ಜನವರಿ 12, 2025

ಶಂಬುಲಿಂಗ ವಾಲ್ದೊಡ್ಡಿ

ರಂಗಭೂಮಿ ಕವಿ,ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿಯವರು ಬೀದರ ತಾಲೂಕಿನ ವಾಲ್ದೊಡ್ಡಿ ಗ್ರಾಮದ ನರಸಪ್ಪ ಮತ್ತು ಚಂದ್ರಮ್ಮ ದಂಪತಿಗಳಿಗೆ ದಿನಾಂಕ ೧-೮-೧೯೫೭ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ. ಎಲ್.ಎಲ್.ಬಿ. ಹಿನ್ನೆಲೆ ಗಾಯನ, ಪದವಿಧರರಾದ ಇವರು ೧೯೯೦ರಲ್ಲಿ ಪ್ರೌಢ ಶಾಲೆಯ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ೨೦೧೭ರಲ್ಲಿ ನಿವೃತ್ತರಾಗಿದ್ದಾರೆ. ಗಾಯನ ಕಲೆಯೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ ಇವರು ೨೦೧೦ರಲ್ಲಿ `ವ್ಯಾಕರಣ ಕುಂಜ' (ವ್ಯಾಕರಣ) ೨೦೧೬ರಲ್ಲಿ `ಮಹಾತಾಯಿ' (ಚರೀತ್ರೆ) ೨೦೧೩ರಲ್ಲಿ `ಕನ್ನಡದಲ್ಲಿ ಹೊಸ ಸಂವೇದನೆಯ ಹಾಡುಗಳು' ೨೦೧೪ರಲ್ಲಿ `ಜೀವನ ದರ್ಶನ' (ಸಂಪಾದನೆ) ೨೦೧೯ರಲ್ಲಿ `ಹೊಂಗನಸ್ಸಿನ ಹಾಯಿಕುಗಳು' (ಹಾಯ್ಕುಗಳು) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು `ಕೆರೆಗೆ ಹಾರ', `ಏಳು ಎಚ್ಚರವಾಗು', `ಅಕ್ಷರ ಗೀತೆಗಳು', `ಬೆಳಗುವ ಬೆಳ್ಳಿ', `ಹಕ್ಕಿಗೂಡು' ಎಂಬ ಧ್ವನಿ ಸುರುಳಿಗಳು ಹೊರತಂದಿದ್ದಾರೆ. ಇವರ ಸಂಗೀತ ಮತ್ತು ಸಾಹಿತ್ಯ ಸಾಧನೆಗೆ ೧೯೯೩ರಲ್ಲಿ ದಲಿತ ಸಾಹಿತ್ಯ ಅಕಾಡೆಮಿ ನವದೆಹಲಿಯಿಂದ ಡಾ.ಅಂಬೇಡ್ಕರ್ ಫೆಲೋಷಿಪ್ ಪ್ರಶಸ್ತಿ, ೧೯೯೮ರಲ್ಲಿ ಬೆಂಗಳೂರಿನ ನಾಟಕ ಅಕಾಡೆಮಿಯಿಂದ ರಂಗಭೂಮಿ ಸೇವಾ ಪ್ರಶಸ್ತಿ, ೨೦೦೩ರಲ್ಲಿ ಕರ್ನಾಟಕ ರಾಜ್ಯ ಶಿಕ್ಷಕ ಪ್ರಶಸ್ತಿ, ೨೦೦೯ರಲ್ಲಿ ರಾಷ್ಟ್ರಮಟ್ಟದ ಶಿಕ್ಷಕ ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ. ೨೦೦೬ರಲ್ಲಿ ಇವರ ಕುರಿತು `ಸ್ನೇಹ ಜೀವಿ' ಎಂಬ ಅಭಿನಂದನಾ ಗ್ರಂಥವು ಹೊರತರಲಾಗಿದೆ. ಇವರು ಆಕಾಶವಾಣಿ ದೂರದರ್ಶನದ ಕಲಾವಿದರಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಶಿಕ್ಷಣ ಇಲಾಖೆಯಿಂದ ನೂರಾರು ಬಿದಿ ನಾಟಕಗಳನ್ನು ಮಾಡಿ ಜನಜಾಗೃತಿ ಮೂಡಿಸಿದ್ದಾರೆ. ಇವರ ಕೆರೆಗೆ ಹಾರ ರೂಪಕ ೨೦೦ ಪ್ರದರ್ಶನ ಕಂಡಿದೆ. ಇವರು ತಮ್ಮ ಹುಟ್ಟೂರಿನಲ್ಲಿ `ಶೋಭಾ ಕಲೆ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ ನ್ನು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಹಾತಾಯಿ ಕೃತಿಗೆ ೨೦೧೭ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನಿAದ `ಆರ್.ರೇವಯ್ಯ' ದತ್ತಿ ಪ್ರಶಸ್ತಿ ಪಡೆದಿದೆ. ಮತ್ತು ಈ ಕೃತಿಯನ್ನು ಸಾಹಿತಿ ಇಂದುಮತಿ ಸುತಾರ ಅವರು ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಇವರು ಕೆಲ ಕನ್ನಡ, ಹಿಂದಿ ಚಲನಚಿತ್ರಗಳಲ್ಲಿ ನಟಿಸಿ ೨೦೧೧ರಲ್ಲಿ `ಎದೆ ತುಂಬಿ ಹಾಡಿದೇನು' ಎಂಬ ದೂರದರ್ಶನ ಕಾರ್ಯಕ್ರಮದಲ್ಲಿ ಜಯಂತ ಕಾಯ್ಕಿಣಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಅತಿಥಿಗಳಾಗಿ ಭಾಗವಹಿಸಿದ್ದಾರೆ. ೨೦೧೫ರಲ್ಲಿ ಅಮೆರಿಕಾದಲ್ಲಿ ನಡೆದ ನಾವಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ