ಭಾನುವಾರ, ಜನವರಿ 12, 2025
ದಿ.ಬಿ.ಆರ್.ಕೊಂಡಾ.
ಹಿರಿಯ ಸಾಹಿತಿ ದಿ.ಬಿ.ಆರ್.ಕೊಂಡಾ. ರವರ ಪೂರ್ಣನಾಮ `ಬಸವಲಿಂಗಪ್ಪ ತಂದೆ ರಾಚಪ್ಪ ಕೊಂಡಾ' ಎಂದಾಗಿದೆ. ಇವರು ಬೀದರ ತಾಲೂಕಿನ ಹೊಕರಾಣ ಗ್ರಾಮದ ರಾಚಪ್ಪ ಮತ್ತು ತೇಜಮ್ಮ ದಂಪತಿಗಳಿಗೆ ದಿನಾಂಕ ೧೫-೧-೧೯೪೩ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಎಡ್. ಪದವಿಧರರಾದ ಇವರು ೧೯೬೩ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಪ್ರೌಢ ಶಾಲಾ ಶಿಕ್ಷಕರಾಗಿ, ಪದವಿ ಪೂರ್ವ ಉಪನ್ಯಾಸಕರಾಗಿ, ಹಾಗೂ ಪದವಿ ಕಾಲೇಜಿನ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ೨೦೦೧ರಲ್ಲಿ ನಿವೃತ್ತಿ ಹೊಂದಿದರು.
ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತಿ ಮತ್ತು ಪ್ರಾವೀಣ್ಯತೆಯನ್ನು ಹೊಂದಿದ ಇವರು ೧೯೮೦ರಲ್ಲಿ `ಕುಟುಂಬ ಜೀವನ ಶಿಕ್ಷಣ’ ೧೯೮೪ರಲ್ಲಿ `ರಾಷ್ಟ್ರೀಯ ಹಬ್ಬಗಳು’ ೧೯೯೮ರಲ್ಲಿ `ಸಾರ್ವಜನಿಕ ಆಡಳಿv ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಸಾರ್ವಜನಿಕ ಆಡಳಿತ’ ಕೃತಿ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯ ಶಾಸ್ತ್ರ ವಿಷಯದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿಯೂ ಪ್ರಕಟವಾಗಿದೆ. `ಆಳಂದೆ ಸಾಸಿರ' ಮತ್ತು `ಬೀದರ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ' ಎಂಬ ಕೃತಿಗಳು ಕೂಡ ಅವರು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರು ಬರೆದ ಬೀದರ ಜಿಲ್ಲೆಯ ಐತಿಹಾಸಿಕ, ಸಾಂಸ್ಕೃತಿಕ, ಕೋಟೆ ಕೊತ್ತಲುಗಳ ಕುರಿತಾದ ಲೇಖನಗಳು ನಾಡಿನಾದ್ಯಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ೧೯೯೬ ಮತ್ತು ೧೯೯೯ರಲ್ಲಿ `ಉತ್ತಮ ಉಪನ್ಯಾಸಕ, ಮತ್ತು ಉತ್ತಮ ಪ್ರಾಧ್ಯಾಪಕ ಪ್ರಶಸ್ತಿಗಳು ಲಭಿಸಿವೆ. ೨೦೦೩ರಲ್ಲಿ ಕಸಾಪದಿಂದ ಕರ್ನಾಟಕ ಶ್ರೀ ಪ್ರಶಸ್ತಿ, ೨೦೦೩ರಲ್ಲಿ ನಡೆದ ಬೆಳಗಾವಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಶ್ರೀ ಪ್ರಶಸ್ತಿ, ೨೦೧೧ರಲ್ಲಿ ಎಂ.ಕೆ.ಕಮಟಗಿ ಮಠದ ಶಿಕ್ಷಣ ಸೇವಾ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿಗಳು ಪಡೆದಿದ್ದಾರೆ. ಇವರು ದಿನಾಂಕ ೨೬-೬-೨೦೧೪ರಂದು ಇಹಲೋಕ ತ್ಯಜಿಸಿದರಿಂದ ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ