ಶನಿವಾರ, ಜನವರಿ 11, 2025
ಜಿ.ಬಿ.ವಿಸಾಜಿ
ಹಿರಿಯ ಸಾಹಿತಿ ಜಿ.ಬಿ.ವಿಸಾಜಿ. ಅವರ ಪೂರ್ಣನಾಮ ಗುರುಲಿಂಗಪ್ಪಾ ಭೀಮರಾವ ವಿಸಾಜಿ ಎಂದಾಗಿದೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಭೀಮರಾವ ಮತ್ತು ಶಿವಗಂಗಾದೇವಿ ದಂಪತಿಗಳಿಗೆ ದಿನಾಂಕ ೫-೧-೧೯೪೩ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ.ಪದವಿಧರರಾದ ಇವರು ೧೯೬೮ರಿಂದ ಭಾಲ್ಕಿಯ ಚನ್ನಬಸವೇಶ್ವರ ಪದವಿ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೨೦೦೧ರಲ್ಲಿ ನಿವೃತ್ತರಾಗಿದ್ದಾರೆ. ಮತ್ತು ಕೆಲಕಾಲ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ವರದಿಗಾರರಾಗಿ, ಶಾಂತಿ ಕಿರಣ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು `ಮುಂಜಾವು', 'ಮುಂಜಾವಿನಿAದ ಮುಸ್ಸಂಜೆವರೆಗೆ' (ಕವನ ಸಂಕಲನಗಳು) `ಅನಂತ ಸಂಗಮ' (ಕಥಾಸಂಕಲನ) `ಸಾಹಿತ್ಯಾವಲೋಕನ', `ಭಾವ ಬಿಂಬ', `ಸಾಲು ದೀಪ' (ಪ್ರಬಂಧ ಸಂಕಲನಗಳು) `ಚಿಂತನ ದೀಪಿಕೆ'. `ಬೆಳಕಿನೆಡೆಗೆ' (ರೇಡಿಯೋ ಚಿಂತನಗಳು) `ಉದಗಿರ ಸಂಗ್ರಮಪ್ಪನವರು' 'ಶ್ರೀ ಚನ್ನಬಸವ ಪಟ್ಟದ್ದೆವರು' `ಕೇಶವರಾವ ನಿಟ್ಟೂರಕರ್', `ಉರಿಲಿಂಗಪೆದ್ದಿ', `ಹರಿಹರ', `ಡಾ.ಚನ್ನಬಸವ ಪಟ್ಟದ್ದೆವರು', `ಕಾಶಿರಾಯ ದೇಶಮುಖ', `ಪೂಜ್ಯ ಚನ್ನಬಸವ ಪಟ್ಟದ್ದೆವರು' (ವ್ಯಕ್ತಿ ಚಿತ್ರಗಳು) `ನೆಲದ ನುಡಿ', `ಹರಿಹರ ದೇವನ ರಗಳೆಗಳು', `ಚೆಂಬೆಳಕು', `ಕೊಳ್ಳುರು ಹುಸೆನಾ ಸಾಹೇಬರು', `ಅಲ್ಲಮಪ್ರಭು ದೇವರ ವಚನಗಳು', `ವಚನ ಸಂಪದ' (ಸಂಪಾದನೆ) `ಭಾಲ್ಕಿ ತಾಲೂಕು ದರ್ಶನ' `ಹೀರೆಮಠ ಸಂಸ್ಥಾನ ಭಾಲ್ಕಿ' (ಪರಿಚಯ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ `ಹರಿಹರ ದೇವನ ನಾಲ್ಕು ರಗಳೆಗಳು’ ಕೃತಿ ೧೯೯೨ರಿಂದ ೧೯೯೫ ರವರೆಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಬಿ.ಎ.ತೃತೀಯ ವಿದ್ಯಾರ್ಥಿಗಳಿಗೆ ಮತ್ತು `ಚನ್ನಬಸವ ಪಟ್ಟದ್ದೆವರು' ಎಂಬ ಕೃತಿ ನಾಂದೇಡ್‌ದ ಎಸ್.ಆರ್.ಟಿ. ಮರಾಠವಾಡ ವಿಶ್ವವಿದ್ಯಾಲಯದ ಬಿ.ಎ. ಕನ್ನಡ ಅಭ್ಯಾರ್ಥಿಗಳಿಗೆ ೨೦೦೦ ಇಸ್ವಿಯಿಂದ ೨೦೧೦ ರವರೆಗೆ ಪಠ್ಯಪುಸ್ತಕವಾಗಿದ್ದವು. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ೧೯೮೬ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಭಾಲ್ಕಿ ಶ್ರೀ ಮಠದ ಪ್ರಶಸ್ತಿಗಳು ಲಭೀಸಿವೆ. ಮತ್ತು ಇವರಿಗೆ ೧೯೯೩ರಲ್ಲಿ ಬಸವಕಲ್ಯಾಣ ತಾಲೂಕಿನ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಇವರು ಭಾಲ್ಕಿ ಕಸಾಪ ಅಧ್ಯಕ್ಷರಾಗಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, ಬೆಂಗಳೂರು ಜಾನಪದ ಸಮೀಕ್ಷೆ ಉಪಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ