ಶನಿವಾರ, ಜನವರಿ 11, 2025
ಈಶ್ವರಿ ಶಿವರಾಜ ಪಾಟೀಲ
ಕವಯತ್ರಿ ಈಶ್ವರಿ ಶಿವರಾಜ ಪಾಟೀಲ್. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಕೋನಮೇಳಕುಂದಾ ಗ್ರಾಮದ ಗುರುಪಾದಪ್ಪ ಮತ್ತು ತಾರಾಬಾಯಿ ದಂಪತಿಗಳಿಗೆ ದಿನಾಂಕ ೦೪-೦೭-೧೯೬೮ರಲ್ಲಿ ಜನಿಸಿದ್ದಾರೆ. ಬಿ.ಎ,ಬಿ.ಇಡಿ.ಎಂ.ಎ ಪದವಿಧರರಾದ ಇವರು ೧೯೯೪ರಲ್ಲಿ ತಮ್ಮ ಹುಟ್ಟೂರಿನ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಬೆನಕನಳ್ಳಿ, ನೌಬಾದ ಶಾಲೆಗಳಲ್ಲಿ ಸೇವೆ ಸಲ್ಲಿಸಿ, ಸದ್ಯ ಬೀದರ ತಾಲೂಕಿನ ಅಮಲಾಪೂರ ಶಾಲಾ ಶಿಕ್ಷಕರಾಗಿದ್ದಾರೆ. ತಮ್ಮ ವೃತ್ತಿಯೊಂದಿಗೆ ಸಾಹಿತ್ಯದ ಗೀಳು ಬೆಳೆಸಿಕೊಂಡ ಇವರು ೨೦೧೫ರಲ್ಲಿ `ನೀಲಮನ ಬಳಗದ ವಚನಗಳು' ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಮತ್ತು `ಗುರುಸ್ತುತ್ತಿ’ ಎಂಬ ಕೃತಿ, ಹಾಗೂ ಕೆಲ ಹಾಡುಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ನಾಟಕ ರೂಪಕಗಳಲ್ಲಿಯೂ ನಟಿಸಿ ಕಲಾವಿದರಾಗಿ ಗುರುತಿಸಿಕೊಂಡಿರುವ ಇವರು ಹುಬ್ಬಳ್ಳಿಯ `ಸಿದ್ದಾರೂಢ ಅಮೃತ’ ಎಂಬ ಮಾಸಪತ್ರಿಕೆಯಲ್ಲಿ ಹಲವು ಬರಹಗಳು ಪ್ರಕಟಿಸಿದ್ದಾರೆ. ೨೦೧೬ರಲ್ಲಿ ಇವರಿಗೆ ಸರ್.ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಪ್ರತಿಷ್ಠಾನ ಬೆಂಗಳೂರಿನಿAದ `ಬಸವ ಶಿರೋಮಣಿ ಪ್ರಶಸ್ತಿ, ನೀಡಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ