ಪುಟಗಳು

ಭಾನುವಾರ, ಜನವರಿ 12, 2025

ದಿ.ಬಸವರಾಜ ಹದನೂರೆ.

ಹಿರಿಯ ಸಾಹಿತಿ ಬಸವರಾಜ ಹದನೂರೆಯವರು. ಬೀದರ ತಾಲೂಕಿನ ಜನವಾಡ ಗ್ರಾಮದ ಅಡಿವೆಪ್ಪ ಮತ್ತು ಶಾಂತಮ್ಮ ದಂಪತಿಗಳಿಗೆ ದಿನಾಂಕ ೧೪-೫-೧೯೪೦ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ. ಟಿ.ಸಿ.ಎಚ್.ವರೆಗೆ ಶಿಕ್ಷಣ ಪಡೆದ ಇವರು ಶಿಕ್ಷಕರಾಗಿ ಸೇವೆ ಸಲ್ಲಿಸಿ, ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ, ೨೦೧೧ರಲ್ಲಿ `ಗಿರಿಸಿದ್ದಲಿಂಗನ ಪರಮಾನಂದದ ಪಂಚ ನದಿಗಳು’ ೨೦೧೫ರಲ್ಲಿ `ಎದೆಯೊಳಗಿಂದ' ಎಂಬ ಇದು ಕವನ ಸಂಕಲನಗಳು, ಮತ್ತು `ನಾವದಗಿಯ ರೇವಪ್ಪನವರ ಜೀವನ ಚರಿತ್ರೆ' ಹಾಗೂ ೨೦೧೭ರಲ್ಲಿ `ರೇವಪ್ಪನವರ ನಾಮಾವಳಿ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ೨೦೧೩ರಲ್ಲಿ ಅಲಿಯಂಬರ ಗ್ರಾಮದಲ್ಲಿ ನಡೆದ ಜನವಾಡ ವಲಯ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಇವರ ಬರಹಗಳು ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಕೂಡ ಲಭಿಸಿವೆ. ಇವರು ದಿನಾಂಕ ೧೧-೫-೨೦೧೮ರಂದು ಇಹಲೋಕ ತ್ಯೆಜಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ