ಶನಿವಾರ, ಜನವರಿ 11, 2025
ಡಾ.ಶಿವಶರಣಯ್ಯಾ ಎಂ.ಮಠಪತಿ
`ವಚನ ವಾರಿದಿ' ಎಂಬ ಹಾರಕೂಡ ಶ್ರೀಗಳ ಕುರಿತು ವಚನಗಳು ಬರೆದು ಪುಸ್ತಕ ಪ್ರಕಟಿಸಿದ ಸಾಹಿತಿ ಡಾ.ಶಿವಶರಣಯ್ಯಾ ಎಂ.ಮಠಪತಿಯವರು ಬೀದರ ಜಿಲ್ಲೆ ಔರಾದ ತಾಲೂಕಿನ ಮಡಪಳ್ಳಿ ಗ್ರಾಮದಲ್ಲಿ ಕೌಠ (ಬಿ) ಗ್ರಾಮದ ಮಲ್ಲಯ್ಯ ಮತ್ತು ಮಲ್ಲಮ್ಮ ದಂಪತಿಗಳಿಗೆ ದಿನಾಂಕ ೧-೯-೧೯೮೩ರಲ್ಲಿ ಜನಿಸಿದ್ದಾರೆ. ಇವರು ಹುಟ್ಟಿದ್ದು ಮಡಪಳ್ಳಿ ಗ್ರಾಮವಾದರು ಬೆಳೆದದ್ದು, ಓದಿದ್ದು ಕೌಠಾ (ಬಿ) ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿ ಪಿ.ಯು. ಶಿಕ್ಷಣ ಬೀದರನಲ್ಲಿ, ಹಾಗೂ ಬಿ.ಎ.ಎಂ.ಎಸ್ .ಪದವಿಯು ಕಲಬುರಗಿಯ ಹಿಂಗೂಲಾAಬಿಕಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಮತ್ತು ಬೀದರದ ಎನ್.ಕೆ.ಜಾಬಶೆಟ್ಟಿ ಆಯುರ್ವೇದಿಕ್ ಮೆಡಿಕಲ್ ಮತ್ತು ಸಂಶೋಧನಾ ಕೇಂದ್ರದಲ್ಲಿ ಸ್ನಾತಕೋತ್ತರ ಪದವಿಯಲ್ಲಿ `ಶರೀರ ರಚನೆ' ಎಂಬ ವಿಷಯದಲ್ಲಿ ಅಧ್ಯಯನ ಮಾಡಿ ಎಂ.ಡಿ.ಯಾಗಿದ್ದಾರೆ.
ಕೆಲವರ್ಷ ಕಲಬುರ್ಗಿಯ ಹಿಂಗೂಲಾAಬಿಕ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಬೀದರದ ಅಕ್ಕ ಮಹಾದೇವಿ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದು, ಸದ್ಯ ಶ್ರೀ ಸಿದ್ದರಾಮೇಶ್ವರ ಆಯುರ್ವೆದಿಕ್ ಮೆಡಿಕಲ್ ಕಾಲೇಜ್ ಹಾಗೂ ಸಂಶೋಧನಾ ಕೇಂದ್ರ ನೌಬಾದಿನ `ಶರೀರ ರಚನೆ' ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುವುದರೊಂದಿಗೆ ಕಪಲಾಪುರ, ನೌಬಾದಿನಲ್ಲಿ ಹಾರಕೂಡ ಶ್ರೀಗಳ ಹೆಸರಿನಲ್ಲಿ ಕ್ಲಿನಿಕಲ್ ತೆರೆದು ವೈದ್ಯಕೀಯ ವೃತ್ತಿಯೊಂದಿಗೆ ಹಾರಕೂಡ ಶ್ರೀಗಳ ಕುರಿತು ಆಧುನಿಕ ವಚನಗಳು ಬರೆದು ಶ್ರೀಗಳಿಗೆ ಆಪ್ತರಾಗಿರುವುದರಿಂದ ಅವರ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿದ್ದಾರೆ. ಇವರ ಭಕ್ತಿಯಿಂದ ಮೂಡಿ ಬಂದ `ವಚನ ವಾರಿದಿ' ಸಂಕಲನಕ್ಕೆ ೨೦೧೮ರಲ್ಲಿ `ಶ್ರೀ ಚೆನ್ನರತ್ನ' ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದ್ದುಕೊಂಡು ಅಧ್ಯಾತ್ಮೀಕ ವಚನ ಸಾಹಿತ್ಯ ರಚಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಷ್ಟೇಯಲ್ಲದೆ ಇವರು ಬರೆದ 'ಭಾರತ ದರ್ಶನ' ಎಂಬ ಕವನ ಸಂಕಲನ ಮತ್ತು `ಚೆನ್ನವೀರ' ಎಂಬ ತ್ರಿಪದಿ ಕೃತಿಗಳು ಮುದ್ರಣದ ಹಂತದಲ್ಲಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ