ಪುಟಗಳು

ಮಂಗಳವಾರ, ಜನವರಿ 14, 2025

ರೂಪಾ ಗಣೇಶ ಗುಡ್ಡಾ

ಕವಯತ್ರಿ ರೂಪ ಗಣೇಶ ಗುಡ್ಡಾ ರವರು ಹುಲಸೂರು ತಾಲೂಕಿನ ಬೇಲೂರು ಗ್ರಾಮದ ಕಲ್ಲಪ್ಪ ಮತ್ತು ಶಾಂತಮ್ಮ ದಂಪತಿಗಳಿಗೆ ದಿನಾಂಕ ೧೦-೯-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ. ಪದವಿಧರರಾದ ಇವರು ಬೀದರ ಜಿಲ್ಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿ ಕವನ, ಲೇಖನ, ಹನಿಗವನ ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿಯು ಪ್ರಕಟ, ಪ್ರಸಾರವಾಗಿವೆ. ಅಷ್ಟೇಯಲ್ಲದೆ ಹಲವಾರು ಹೋಬಳಿ, ತಾಲೂಕು, ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮತ್ತು ಉಪನ್ಯಾಸವು ನೀಡಿದ್ದಾರೆ. ಇವರಿಗೆ ಹಲವು ಕನ್ನಡ ಪರ ಸಂಘ ಸಂಸ್ಥೆಗಳಿAದ ಸಾಕಷ್ಟು ಸಲ ಸತ್ಕರಿಸಿ ಗೌರವಿಸಲಾಗಿದೆ. ಡಾ.ಭೀಮಾಶಂಕರ ಬಿರಾದಾರ ಹವ್ಯಾಸಿ ಬರಹಗಾರ ಡಾ. ಭೀಮಾಶಂಕರ ಬಿರಾದಾರ ರವರು ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದ ಧೂಳಪ್ಪಾ ಮತ್ತು ಸರಸ್ವತಿ ದಂಪತಿಗಳಿಗೆ ದಿನಾಂಕ ೧-೨-೧೯೭೯ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ ಪದವಿಧರರಾದ ಇವರು ಬಸವಕಲ್ಯಾಣದ ಖಾಸಗಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. `ಸಾಮಾಜಿಕ ಕನ್ನಡ ಸಾಹಿತ್ಯ ವಿಮರ್ಶೆಯ ಗ್ರಹಿಕೆ' ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತರಾಗಿ ಕತೆ, ಕವನ, ಲೇಖನ, ಹನಿಗವನ, ಪ್ರಬಂಧ, ಸಂಶೋಧನೆ, ವಿಮರ್ಶೆ, ಮೊದಲಾದವು ಬರೆದಿದ್ದಾರೆ. ಮತ್ತು ಮಯೂರ, ವಿಜಯ ಕರ್ನಾಟಕ, ವಿಜಯವಾಣಿ, ಸಂಗತ, ನ್ಯಾಯಪಥ, ಅರಹು-ಕುರುಹು, ಏನ್ ಸುದ್ಧ, ಬುಕ್ ಬ್ರಹ್ಮ ಮೊದಲಾದ ಅಂತರಜಾಲ ಪತ್ರಿಕೆಗಳಲ್ಲಿ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ. ಅಷ್ಟೇಯಲ್ಲದೆ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣ ಮತ್ತು ಕಮ್ಮಟಗಳಲ್ಲಿ ಭಾಗವಹಿಸಿರುವ ಇವರು ಅನೇಕ ಕನ್ನಡಪರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉಪನ್ಯಾಸಗಳನ್ನು ನೀಡಿದ್ದಾರೆ. ಬಸವಕಲ್ಯಾಣದ ಡಾ.ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನದ ನಿರ್ದೇಶಕರಾಗಿ, ಬಸವಕಲ್ಯಾಣ ಕಸಾಪದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ