ಪುಟಗಳು

ಸೋಮವಾರ, ಜನವರಿ 13, 2025

ಪಂಚಾಕ್ಷರಿ ಜಿ.ಹಿರೇಮಠ

ಹಿರಿಯ ಸಾಹಿತಿ ಪಂಚಾಕ್ಷರಿ ಜಿ.ಹಿರೇಮಠ. ರವರು ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಗರಸಂಗಿ ಗ್ರಾಮದ ಗುರುಸಂಗಯ್ಯಾ ಮತ್ತು ಸಂಗನಬಸ್ಸಮ್ಮಾ ದಂಪತಿಗಳಿಗೆ ದಿನಾಂಕ ೨೧-೧೨-೧೯೫೦ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಸ್ನಾತಕೋತ್ತರ ಪದವಿಧರರಾಗಿದ್ದು, ೧೯೭೪ರಲ್ಲಿ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಗುರುಪಾದ ಶಿವಾಚಾರ್ಯ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರಾಗಿ ಸೇವೆಗೆ ಸೇರಿ ೨೦೧೦ರಲ್ಲಿ ನಿವೃತ್ತರಾಗಿದ್ದಾರೆ. ಇವರು ೧೯೯೧ರಲ್ಲಿ `ಇಷ್ಟಲಿಂಗ ವೈಜ್ಞಾನಿಕ ಸಮೀಕ್ಷೆ’ ೨೦೦೧ರಲ್ಲಿ `ಮಿನುಗು ನಕ್ಷತ್ರಗಳು’ ೨೦೦೪ರಲ್ಲಿ `ನಮ್ಮ ಶೈಕ್ಷಣಿಕ ಸಮೀಕ್ಷೆ’ (ಲೇಖನ) ೨೦೦೪ರಲ್ಲಿ `ಧರಿನಾಡಿನ ಕಥನ ಗೀತೆಗಳು’ (ಸಂಪಾದನೆ) `ಬಸವಕಲ್ಯಾಣ ಬೆಳಗು’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ೧೯೯೦ರಲ್ಲಿ ನವದೆಹಲಿಯಿಂದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ, ೨೦೨೦ರಲ್ಲಿ ಹಾರಕೂಡ ಸಂಸ್ಥಾನದಿAದ ಕಲ್ಯಾಣ ಕರ್ನಾಟಕ ಶಿಕ್ಷಕ ರತ್ನ ಪ್ರಶಸ್ತಿಗಳು ಪಡೆದಿದ್ದು, ೨೦೦೪ರಲ್ಲಿ ಬಸವಕಲ್ಯಾಣ ತಾಲೂಕಿನ ಧರಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರ ಲೇಖನ, ಬರಹಗಳು ಕೆಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಬಸವಕಲ್ಯಾಣದ ಖಾಯಂ ನಿವಾಸಿಯಾಗಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ