ಶನಿವಾರ, ಜನವರಿ 11, 2025
ಸೋಮನಾಥ ಮುದ್ದಾ
ಪತ್ರಕರ್ತ,ಸಾಹಿತಿಯಾದ ಸೋಮನಾಥ ಮುದ್ದಾ ರವರು ಬೀದರ ಜಿಲ್ಲೆ ಔರಾದ (ಬಿ) ತಾಲೂಕಿನ ಗಣಪತಿ ಮುದ್ದಾ ಮತ್ತು ಬಾಯಾಮ್ಮಾ ದಂಪತಿಗಳಿಗೆ ದಿನಾಂಕ ೧-೯-೧೯೬೬ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ, ಎಂ.ಎ.ಸಮಾಜಶಾಸ್ತ್ರ, ಎಂ.ಎ.ಪತ್ರಿಕೋದ್ಯಮ, ಎಂ.ಎಡ್. ಸ್ನಾತಕೋತ್ತರ ಪದವಿಧರರಾದ ಇವರು ೧೯೯೮ರಲ್ಲಿ ಭಾಲ್ಕಿಯ ಪರದಾಪೂರ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸೇರಿ, ಸದ್ಯ ಭಾಲ್ಕಿಯ ತಾಲೂಕಿನಲ್ಲಿ ಬಿ.ಆರ್.ಪಿ.ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು ಹದಿನೈದು ವರ್ಷ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿ ಸದ್ಯ ವಿಶ್ವವಾಣಿ ಪತ್ರಿಕೆಯ ವರದಿಗಾರರಾಗಿದ್ದಾರೆ. `ಜ್ಞಾನ ದೀಪ್ತಿ', `ಭಾಲ್ಕಿ ತಾಲೂಕು ದರ್ಶನ', `ಸದ್ಗುರು ಚನ್ನಬಸವ ನಾಮಾವಳಿಯಲ್ಲಿ ಜೀವನ ದರ್ಶನ' ಎಂಬ ಪುಸ್ತಕಗಳು ಪ್ರಕಟಿಸಿದ್ದು, ಇವರ ಕವನ, ಲೇಖನಗಳು ಪ್ರಜಾವಾಣಿ ಸುಧಾ, ಮಯೂರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ದೂರದರ್ಶನದಲ್ಲಿಯು ಪ್ರಸಾರವಾಗಿವೆ.
`ಶಿವಶರಣ ನನ್ನಯ್ಯ' ಎಂಬ ನಾಟಕದಲ್ಲಿ ನಟಿಸಿ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇವರಿಗೆ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಭಾಲ್ಕಿ ಮಠದ `ಉತ್ತಮ ಲೇಖಕ ಪ್ರಶಸ್ತಿಗಳು ಪಡೆದ ಇವರು ಭಾಲ್ಕಿ ತಾಲೂಕಿನ ಕಸಾಪ ಗೌರವ ಕಾರ್ಯದರ್ಶಿಯಾಗಿ, ಬೀದರ ಕಸಾಪದ ಗಡಿನಾಡು ಪ್ರತಿನಿಧಿಯಾಗಿ, ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ, ಸೇವೆ ಸಲ್ಲಿಸಿದ್ದಾರೆ. ಹಾಗೂ ಸದ್ಗುರು ಶ್ರೀ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿ, ಸದ್ಗುರು ವಿದ್ಯಾಲಯವನ್ನು ಪ್ರಾರಂಭಿಸಿ, ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ಅಷ್ಟೇಯಲ್ಲದೆ ಸದ್ಗುರು ಪ್ರತಿಭಾ ಶೋಧ ಪ್ರತಿಷ್ಠಾನವು ಸ್ಥಾಪಿಸಿ ಅದರ ಮೂಲಕ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆÀ ಪ್ರತಿ ವರ್ಷ ಪ್ರಶಸ್ತಿ, ಪುರಸ್ಕಾರಗಳು ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಮೆಚ್ಚುವಂತಹದಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ