ಪುಟಗಳು

ಶುಕ್ರವಾರ, ಜನವರಿ 10, 2025

ಮಾಣಿಕ ಆರ್.ಭುರೆ

ಸಾಹಿತಿ ಹಾಗೂ ಪತ್ರಕರ್ತರಾಗಿ ಕನ್ನಡ ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಮಾಣಿಕ ಆರ್ ಭುರೆ. ಇವರು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಬಟಗೇರಾ ಗ್ರಾಮದ ರಾಮ ಭುರೆ ಮತ್ತು ಸಂಪತಾಬಾಯಿ ದಂಪತಿಗಳಿಗೆ ದಿನಾಂಕ ೧೩-೧೦-೧೯೭೩ರಲ್ಲಿ ಜನಿಸಿದ್ದಾರೆ. ಬಿ.ಎ ಪದವಿಧರರಾದ ಇವರು ಬಸವಕಲ್ಯಾಣದ ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ೨೦೦೩ರಲ್ಲಿ `ಶರಣ ಸಂಸ್ಕçತಿ ದರ್ಶನ’ ೨೦೦೮ರಲ್ಲಿ `ಅನುಭವ ಮಂಟಪ ಪ್ರಶಸ್ತಿ ಪುರಸ್ಕೃತರು' ೨೦೧೦ರಲ್ಲಿ `ದಲಿತ ಪೀಠಾಧಿಪತಿ' ಎಂಬ ೨೦೧೫ರಲ್ಲಿ `ಹುಲಸೂರು ತಾಲೂಕು ದರ್ಶನ’ ೨೦೧೮ರಲ್ಲಿ `ಸಂಗೀತ ರತ್ನ ವಿರೂಪಾಕ್ಷಯ್ಯ ಗೋರ್ಟಾ’ ೨೦೧೯ರಲ್ಲಿ `ಚಾಲುಕ್ಯ ನಾಡು' ಎಂಬ ಕೃತಿಗಳು ಪ್ರಕಟಿಸಿ, ಹಾರಕೂಡದ ಪೂಜ್ಯ..ಶ್ರೀ.ಡಾ.ಚನ್ನವೀರ ಶಿವಾಚಾರ್ಯರ ಕುರಿತು `ನುಡಿಚೆನ್ನ' ಎಂಬ ಅಭಿನಂದನಾ ಗ್ರಂಥವು ಸಂಪಾದಿಸಿದ್ದಾರೆ ಇವರ `ದಲಿತ ಪೀಠಾಧಿಪತಿ’ ಕೃತಿಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಿಂದ `ಜಿ.ಆರ್.ರೇವಯ್ಯ’ ದತ್ತಿ ಪ್ರಶಸ್ತಿ ದೊರಕಿದೆ. ಕಾಲೇಜು ದಿನಗಳಲ್ಲಿಯೇ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಇವರು ೧೯೯೩ರಲ್ಲಿ `ಉತ್ತರ ಕರ್ನಾಟಕ' ೧೯೯೫ರಲ್ಲಿ `ಬಹಿರಂಗ ಸುದ್ದಿ' `ಜನಬೆಂಬಲ' ೧೯೯೬ರಲ್ಲಿ `ಬಿಸಿಲ ಬದುಕು' ಪತ್ರಿಕೆಗಳ ವರದಿಗಾರರಾಗಿ ಕಾರ್ಯನಿರ್ವಹಿಸಿ ೧೯೯೭ರಲ್ಲಿ `ಪ್ರಜಾವಾಣಿ' ವರದಿಗಾರರಾಗಿ ಸೇವೆಗೆ ಸೇರಿ ೨೭ ವರ್ಷಗಳಿಂದ ಕಾರ್ಯನಿರತರಾಗಿದ್ದಾರೆ. ಇವರ ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಬಸವಕಲ್ಯಾಣ ತಾಲ್ಲೂಕಿನ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಪ್ರಥಮ ತಾಲ್ಲೂಕು ಜಾನಪದ ಸಮ್ಮೇಳನ ಹಾಗೂ ೩ ರಾಷ್ಟ್ರೀಯ ಜಾನಪದ ಉತ್ಸವಗಳನ್ನು ಆಯೋಜಿಸಿದ್ದರು. ಹಾಗೂ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ, ಕಸಾಪದ ಜಿಲ್ಲಾ ಪ್ರತಿನಿಧಿ, ತಾಲ್ಲೂಕು ಕಾರ್ಯದರ್ಶಿ, ಗಡಿನಾಡು ಪ್ರತಿನಿಧಿ ಆಗಿ ಸೇವೆ ಸಲ್ಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ