ಪುಟಗಳು

ಭಾನುವಾರ, ಜನವರಿ 12, 2025

ಜಯಶ್ರೀ ಪ್ರಕಾಶ ಸುಕಾಲೆ

ಕವಯತ್ರಿ ಜಯಶ್ರೀ ಪ್ರಕಾಶ ಸುಕಾಲೆಯವರು ಬೀದರ ತಾಲೂಕಿನ ಗಾದಗಿ ಗ್ರಾಮದ ಶಂಕರರಾವ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೨೪-೪-೧೯೭೩ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಗೃಹಿಣಿಯಾಗಿ, ಸಾಹಿತಿ ಕಲಾವಿಧರಾಗಿ ಗುರ್ತಿಸಿಕೊಂಡಿದ್ದಾರೆ. ಇವರು `ಶರಣು ಶರಣಾರ್ಥಿ' (ಕವನಸಂಕಲನ) `ಕನ್ನಡ ಜಂಗಮ ಡಾ.ಬಸವಲಿಂಗ ಪಟ್ಟದ್ದೆವರು’ (ಚರಿತ್ರೆ) ಎಂಬ ಕೃತಿಗಳು ಪ್ರಕಟಿಸಿ `ಶರಣ ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮ ದಂಪತಿ’ ಎಂಬ ಸಾಕ್ಷ್ಯಚಿತ್ರ ಸಾಹಿತ್ಯ ರಚಿಸಿದ್ದಾರೆ. ಮಹಾಮಹಿಮ ತ್ರಿವಿಧ ದಾಸೋಹಿ ಶಿವಕುಮಾರ ಮಠಪತಿಯವರ ಜೀವನ ಚರಿತ್ರೆಯ ಕುರಿತು ಸಾಕ್ಷ್ಯ ಚಿತ್ರ, ದೃಶ್ಯವಳಿಗಳಿಂದ ಕೂಡಿದ ಚಿತ್ರ ನಿರೂಪಿಸಿ ಪ್ರದರ್ಶನ ಮಾಡಿದ್ದು, ಇದು ಗಲ್ಫ ರಾಷ್ಟ್ರ ಬಹೆರೇನ್ ನಲ್ಲಿ ಬಸವ ಜಯಂತಿಯ ಅಂಗವಾಗಿ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ್ದಾರೆ. ಮತ್ತು ಅನೇಕ ಶರಣರ ರೂಪಕಗಳು ನಿರ್ದೇಶನ ಮಾಡಿದ ಇವರು ಅಕ್ಕನಾಗಮ್ಮ, ಸಿದ್ದರಾಮೇಶ್ವರ, ಗುರುಲಿಂಗ ದೇವರ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇವರ ಬರಹ ಕಾರ್ಯಕ್ರಮಗಳು ಬಸವಪಥ, ಮಹಾಮನೆ, ಶರಣಮಾರ್ಗ, ಬಸವ ಟಿ.ವಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಬೀದರ ಜಿಲ್ಲಾ ವೀರಶೈವ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷರಾಗಿ, ಸೇವೆ ಸಲ್ಲಿಸಿದ ಇವರು ಸದ್ಯ ಬೀದರ ಜಿಲ್ಲಾ ಕಸಾಪ ಮಹಿಳಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ