ಮಂಗಳವಾರ, ಜನವರಿ 14, 2025
ರೇಣುಕಾದೇವಿ ದಿಲೀಪಕುಮಾರ ಸ್ವಾಮಿ
ಕವಯತ್ರಿ ರೇಣುಕಾದೇವಿ ಯವರು ಬಸವಕಲ್ಯಾಣ ತಾಲೂಕಿನ ಮೈಸಲಗಾ ಗ್ರಾಮದ ಶ್ರೀ ಶಿವಶರಣಯ್ಯಾ ಮತ್ತು ಶ್ರೀಮತಿ ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೧-೫-೧೯೭೬ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ. ಬಿ.ಎ (ಹಿಂದಿ) ಪದವಿ ಪಡೆದ ಇವರು ರಾಜೇಶ್ವರದ ಶ್ರೀ ದಿಲೀಪಕುಮಾರ ಸ್ವಾಮಿಯವರ ಧರ್ಮಪತ್ನಿಯಾಗಿದ್ದು, ಬಾಲ್ಯದಿಂದಲೂ ಹಾರಕೂಡ ಶ್ರೀಗಳ ಪ್ರವಚನದ ಪ್ರಭಾವದಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡು ಕವನ, ಲೇಖನ, ಮೊದಲಾದವು ಬರೆದು ಕವಯತ್ರಿಯಾಗಿ ಗುರ್ತಿಸಿಕೊಂಡಿದ್ದಾರೆ. ಹಾರಕೂಡ ಹಿರೇಮಠ ಸಂಸ್ಥಾನದ ಆರಾಧ್ಯ ದೈವ ಭಕ್ತರಾದ ಇವರು ಬರೆದ ಬರಹಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಹಾರಕೂಡದ ಪೂಜ್ಯ. ಶ್ರೀ. ಡಾ.ಚೆನ್ನವೀರ ಶಿವಾಚಾರ್ಯರು ವಿಶೇಷ ದಂಪತಿ ಸಹಿತವಾಗಿ ಸನ್ಮಾನಿಸಿ ಸತ್ಕಾರಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ