ಭಾನುವಾರ, ಜನವರಿ 12, 2025
ಡಾ.ಗಂಗಾಂಬಿಕೆ ಪಾಟೀಲ್
ಕವಯತ್ರಿ ಡಾ.ಗಂಗಾಂಬಿಕೆ ಪಾಟೀಲ್. ಇವರು ಬೀದರದ ಕಂಟೆಪ್ಪ ಮತ್ತು ಈಶ್ವರಮ್ಮಾ ದಂಪತಿಗಳಿಗೆ ದಿನಾಂಕ ೪-೪-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ.ಪಿ.ಎಚ್.ಡಿ.ಪದವೀಧರರಾದ ಇವರು ಬೀದರ ಅಕ್ಕ ಮಹಾದೇವಿ ಪದವಿ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಶರಣ ಸಾಹಿತ್ಯ ಮತ್ತು ಶರಣ ತತ್ವದಲ್ಲಿ ಆಸಕ್ತರಾಗಿ ೧೯೯೮ರಲ್ಲಿ `ವಚನ ಸಂಸ್ಕೃತಿ' ಎಂಬ ಕೃತಿ ಹೊರತಂದಿದ್ದು ಅದರ ನಂತರ ಹಲವಾರು ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರಿಗೆ ಹಲವಾರು ಕೆಲ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ