ಪುಟಗಳು

ಭಾನುವಾರ, ಜನವರಿ 12, 2025

ಪ್ರೊ. ಅಶೋಕ ಎ.ಬಿ.

ಸಾಹಿತಿ ಪ್ರೊ.ಅಶೋಕ ಎ.ಬಿ. ಇವರು ಬೀದರ ತಾಲೂಕಿನ ಮರಖಲ್ ಗ್ರಾಮದ ಅಂಬಣ್ಣ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೧-೭-೧೯೬೭ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ.ಪದವೀಧರರಾದ ಇವರು ಸಿದ್ದಾರ್ಥ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯಿಂದ ಉಪನ್ಯಾಸಕರಾದರು ಪ್ರವೃತ್ತಿಯಲ್ಲಿ ಕವಿ ಸಾಹಿತಿಯಾಗಿ ಹಲವಾರು ಕವನ ಲೇಖನಗಳನ್ನು ಬರೆದಿದ್ದು ಅವು ಅಪ್ರಕಟಿತವಾಗಿವೆ. ಮತ್ತು `ವ್ಯವಹಾರಿಕ ಪರಿಸರ ಶಾಸ್ತ್ರ' ಎಂಬ ಅರ್ಥಶಾಸ್ತ್ರದ ಕೃತಿಯೊಂದು ರಚಿಸಿ ಪ್ರಕಟಿಸಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ