ಪುಟಗಳು

ಶುಕ್ರವಾರ, ಜನವರಿ 10, 2025

ಎಂ.ಡಿ.ಕಾಡಾದಿ

ಅಧ್ಯಾತ್ಮಿಕ ನೈತಿಕ, ಭಕ್ತಿ ಭಾವದ ಕವಿತೆಗಳು ಬರೆದು ಸಾಮಾಜಿಕ ಪರಿವರ್ತನೆ ಬಯಸುವ ಕವಿಯೆಂದರೆ ಎಂ.ಡಿ.ಕಾಡಾದಿ.ಇವರ ಪೂರ್ಣನಾಮ ಮಲ್ಲಿಕಾರ್ಜುನ ತಂದೆ ಧೂಳಯ್ಯಾ ಕಾಡಾದಿಮಠ ಎಂದಾಗಿದೆ. ಬೀದರ ಜಿಲ್ಲೆ ಬಸವಕಲ್ಯಾಣದ ಧೂಳಯ್ಯಾ ಮತ್ತು ಸರಸ್ವತಿ ದಂಪತಿಗಳಿಗೆ ದಿನಾಂಕ ೧-೬-೧೯೬೦ ರಲ್ಲಿ ಜನಿಸಿದ ಇವರು. ಡಿ.ಇ.ಇ. ಎಂ.ಎ.ಇAಗ್ಲೀಷ್ ಸ್ನಾತಕೋತ್ತರ ಪದವಿಧರರಾಗಿ ವಿದ್ಯುತ್ ಇಂಜಿನಿಯರಿAಗ್ ವಿಭಾಗದ ಉಪನ್ಯಾಸಕ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಮುಖ್ಯಸ್ಥರಾಗಿ ೧೯೮೦ರಿಂದ ೨೦೧೫ರವರೆಗೆ ಎಸ್.ಎಸ್.ಕೆ.ಬಿ.ಕಾಲೇಜು ಬಸವಕಲ್ಯಾಣ, ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಬೀದರನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಇವರು ೨೦೦೩ರಲ್ಲಿ `ಮೂಡಣ' ಮತ್ತು ೨೦೦೮ರಲ್ಲಿ `ನಿಸರ್ಗ' ಎಂಬ ಕವನ ಸಂಕಲನಗಳು ಹೊರ ತಂದಿದ್ದಾರೆ. ಮತ್ತು `ಹತ್ತು ಮುಖಗಳ ನೂರು ಭಾವಗಳು' ಎಂಬ ಕೃತಿಯಲ್ಲಿ ಇತರ ಹತ್ತು ಕವನಗಳು ಪ್ರಕಟವಾಗಿವೆ. ಇವರ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಅಧ್ಯಾತ್ಮಿಕ ಕವಿತೆಗಳು ಭಜನೆ ಗೀತೆಗಳಾಗಿ ಜನಪ್ರಿಯವಾಗಿವೆ. ಇವರರಿಗೆ ತಾಲೂಕಾ `ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ಅಭಿವೃದ್ಧಿ ಬಳಗದಿಂದ `ಸುವರ್ಣ ಕನ್ನಡಿಗ ಪ್ರಶಸ್ತಿ, ಮತ್ತು ಹಾರಕೂಡ ಮಠದಿಂದ `ಶ್ರೀಚೆನ್ನ ರತ್ನ' ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ