ಪುಟಗಳು

ಶುಕ್ರವಾರ, ಜನವರಿ 10, 2025

ದಿ.ಹಣಮಂತರಾವ ವಿಸಾಜಿ

ಸಾಹಿತಿ ಹಣಮಂತರಾವ ವಿಸಾಜಿಯವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಕೊಹಿನೂರ ಗ್ರಾಮದ ಬಸವಣಪ್ಪಾ ಮತ್ತು ಸಂಗಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೫೯ರಲ್ಲಿ ಜನಿಸಿದ್ದಾರೆ. ಕತೆ ಕವನ ನಾಟಕಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡು ಬಂದ ಇವರು `ಬದುಕು ಬಂಡಿ' ಮತ್ತು `ಐವತ್ತಾರು ಸಹೋದರರು' (ಕವನ ಸಂಕಲನಗಳು) `ಬಡವನ ನಿರ್ಧಾರ ' (ನಾಟಕ) `ನುಡಿ ಮುತ್ತುಗಳು' (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ `ಶ್ರೀಚನ್ನರತ್ನ ಪ್ರಶಸ್ತಿ’ ಭಾಲ್ಕಿಯ ತಾಲೂಕು ಮಟ್ಟದ `ಉತ್ತಮ ಶಿಕ್ಷಕ ಪ್ರಶಸ್ತಿ' `ಬಸವಕಲ್ಯಾಣದ ಶ್ರೀ ಬಸವೇಶ್ವರ ಕಲಾ ಮಹಾವಿದ್ಯಾಲಯವು ಕೊಡುವ `ಸಾಹಿತ್ಯ ರತ್ನ’ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದ ಇವರು ಸದ್ಯ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ