ಶನಿವಾರ, ಜನವರಿ 11, 2025
ಶೀಲಾ.ಎಸ್ .ಜೂಜಾ
ಸಾಹಿತಿ ಶೀಲಾ. ಎಸ್.ಜೂಜಾ. ಇವರು ಬೀದರ್ ಜಿಲ್ಲೆ ಹುಮನಾಬಾದಿನ ಶ್ರೀ ಸುಭಾಷ ಜೈಶೆಟ್ಟಿ ಶ್ರೀಮತಿ ರಾಚಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೯ರಲ್ಲಿ ಜನಿಸಿದ್ದಾರೆ. ಬಿ.ಎ, ಬಿ.ಇಡಿ ಎಂ.ಎ ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಹುಮನಾಬಾದ ತಾಲೂಕಿನ ಕಲ್ಲೂರು ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತರಾಗಿ ಬಾಲ್ಯದಿಂದಲೂ ತುಂಬ ಕ್ರಿಯಾಶೀಲರಾಗಿ ತೊಡಗಿಸಿಕೊಂಡು `ವಿದ್ಯಾರ್ಜನೆ’ (ಲೇಖನ) `ನನ್ನೊಳಗಿನ ಕಾವ್ಯ’ ಮತ್ತು `ಎರಡನೆಯ ಹೆಜ್ಜೆ’ ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿ ಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನೆಯು ಮಾಡಿದ್ದಾರೆ. ಇವರಿಗೆ ಹುಮನಾಬಾದ ತಾಲೂಕಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, ವೀರಶೈವ ಲಿಂಗಾಯತ ಅಭಿವೃದ್ಧಿ ಸಂಘದ ವತಿಯಿಂದಲೂ ಉತ್ತಮ ಶಿಕ್ಷಕಿ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ