ಸೋಮವಾರ, ಜನವರಿ 13, 2025
ಅರುಂಧತಿ ಚಾಂದಕವಠೆ
ಮಹಿಳಾ ಸಾಹಿತಿ ಅರುಂಧತಿ ಚಾಂದಕವಠೆ ರವರು ಕೊಪ್ಪಳ ಜಿಲ್ಲೆ ಕಿನ್ನಾಳದ ಸೀತಾರಾಮರಾವ ಮತ್ತು ಆರಾಧನಾ ದಂಪತಿಗಳಿಗೆ ದಿನಾಂಕ ೨೨-೬-೧೯೬೦ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಬೀದರದ ಬಿ.ಎಸ್.ಎನ್.ಎಲ್. ನಲ್ಲಿ ಕಛೇರಿಯಲ್ಲಿ ಜ್ಯೂನಿಯರ್ ಟೆಲಿಕಾಂ ಆಫೀಸರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ೨೦೦೪ರಲ್ಲಿ `ಬಾಂಧವ್ಯ' ಎಂಬ ಕಥಾ ಸಂಕಲನ ಪ್ರಕಟಿಸಿದ್ದಾರೆ. ಮತ್ತು `ಇದ್ದಿಲು ಪುಡಿ’, `ಮನೆ ಮನೆಯ ಕತೆ’, `ನಿಲ್ಲು’, `ಮಂಗನ ತೀರ್ಪು,’ ಎಂಬ ನಾಟಕಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಆದರೆ, ಆ ನಾಟಕಗಳು ಈಗಾಗಲೇ ಹಲವು ಕಡೆ ಪ್ರದರ್ಶನ ಕಂಡು ತುಂಬ ಜನಪ್ರಿಯತೆಯು ಗಳಿಸಿವೆ.ಮತ್ತು ಇವರು ಒಬ್ಬ ಉತ್ತಮ ಕಲಾವಿದೆಯು ಆಗಿರುವುದರಿಂದ ಕಲಬುರಗಿ ಆಕಾಶವಾಣಿಯಿಂದ ಪ್ರಸಾರವಾದ `ರಾವಿ ನದಿಯ ದಂಡಯಲ್ಲಿ’, `ಛಲ’, `ಸೌಹಾರ್ದ,’ `ಉಡುಗೊರೆ,’ `ಬಯಸದೆ ಬಂದ ಭಾಗ್ಯ,’ `ಬದುಕು ಜಟಕಾ ಬಂಡಿ’ ಎಂಬ ನಾಟಕಗಳಲ್ಲಿ ನಟಿಸಿದ್ದಾರೆ. ಇವರ ಕತೆ, ಕವನ, ಲೇಖನ, ಪ್ರಬಂಧಗಳು ಪ್ರಮುಖ ಪತ್ರಿಕೆ, ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ೨೦೦೧ರಲ್ಲಿ ಬೀದರ ಜಿಲ್ಲಾ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ `ಮನೆ ಮನೆ ಕತೆ’ ,ನಾಟಕ ರಚಿಸಿ ಕುಟುಂಬ ಸದಸ್ಯರೊಂದಿಗೆ ಪ್ರದರ್ಶನ ಮಾಡಿದ್ದರಿಂದ ಗೌರವ ಸನ್ಮಾನ, ೨೦೦೯ರಲ್ಲಿ ಧರಿನಾಡು ಕನ್ನಡ ಸಾಹಿತ್ಯ ಸಂಘ ಮತ್ತು ಹುಮನಾಬಾದಿನ ಸಾಕ್ಷಿ ಪ್ರತಿಷ್ಠಾನದಿಂದ ಧರಿನಾಡು ಸಿರಿ ಪ್ರಶಸಿಯು ನೀಡಿ ಗೌರವಿಸಿದ್ದಾರೆ. ಹಾಗೂ ೨೦೦೬ರಲ್ಲಿ ಬೀದರ ೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಸೇರಿದಂತೆ ಮೊದಲಾದ ಜಿಲ್ಲಾ, ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚನವು ಮಾಡಿದ್ದಾರೆ. ಇವರಿಗೆ ೨೦೦೯ರಲ್ಲಿ ಬೀದರ ತಾಲೂಕಿನ ಅಣದೂರದಲ್ಲಿ ನಡೆದ ವಲಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ