ಪುಟಗಳು

ಶುಕ್ರವಾರ, ಜನವರಿ 10, 2025

ಡಾ.ಕೆ.ಎಂ.ಮೇತ್ರಿ

ಕಲ್ಯಾಣ ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಪುಸ್ತಕಗಳು ಬರೆದು ಖ್ಯಾತರಾದ ಲೇಖಕರೆಂದರೆ ಡಾ.ಕೆ.ಎಂ.ಮೇತ್ರಿ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಗೌರ ಗ್ರಾಮದ ಮಾರುತಪ್ಪಾ ಮತ್ತು ಮಲ್ಲವ್ವ ದಂಪತಿಗಳಿಗೆ ದಿನಾಂಕ ೧-೮-೧೯೬೨ರಲ್ಲಿ ಜನಿಸಿದ್ದಾರೆ. ಎಂ.ಎ. ಸಮಾಜ ಶಾಸ್ತ್ರ, ಎಂ.ಎ.ಮಾನವ ಶಾಸ್ತ್ರ, ಎಂ.ಎಡ್. ಪಿ.ಎಚ್.ಡಿ. ಮತ್ತು ೧೫ವಿವಿಧ ಡಿಪ್ಲೊಮಾ ಪದವಿಧರರಾದ ಇವರು ೧೯೯೬ರಲ್ಲಿ ಹಂಪಿ ವಿಶ್ವವಿದ್ಯಾಲಯದಲ್ಲಿ ಪ್ರವಾಚಕ ಮುಖ್ಯಸ್ಥರಾಗಿ ಸೇವೆಗೆ ಸೇರಿ ೨೦೦೪ರಿಂದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಸೂಕ್ಷ್ಮ ಆದಿವಾಸಿಗಳು', `ಗೊಂಡಮಾನ ಗೊಂಡಿ ಶಬ್ದಕೋಶ', `ಹಾಲು ಮತ ಬುಡಕಟ್ಟುಗಳು', `ತುಳುನಾಡು ಹೆಗ್ಗಡೆ ಸಮೂದಾಯ', `ಮರಗು ಭಾಷೆ', `ಅಲಕ್ಷಿತರ ಸಮಾಜ ಶಾಸ್ತ್ರ', ಎಂ.ಎ ಪ್ರಥಮ ಕೋರ್ಸು-೪, ಮತ್ತು `ಕುರುಗೋಡು ನೀಲಮ್ಮನವರ ಸಾಂಸ್ಕೃತಿಕ ಅಧ್ಯಯನ ' ಎಂಬ ಕೃತಿಗಳು ಮತ್ತು `ಬುಡ್ಗ ಜಂಗಮ', `ದಕ್ಕಲಿಗ', `ಗೋಸಂಗಿ', `ಹಂಡಿ ಜ್ಯೋಗಿ', `ಸುಡುಗಾಡು ಸಿದ್ದ', `ಡುಂಗ್ರಿ ಗರಾಸಿಯ', `ಹಕ್ಕಿ ಪಿಕ್ಕಿ', `ಪಾರಧಿ', `ಹೆಳವರು', `ಕೊರಮ', `ಶಿಳ್ಳೆಕ್ಯಾತ', `ಸಿಂಧೋಳ್ಳು', `ರಾಜಗೊಂಡ' `ಬೈಲಪತ್ತಾರ' `ದೊಂಬಿದಾಸ' `ಘಿಸಾಡಿ' `ಗೊಂಧಳಿ'. `ಕಂಜರ ಭಾಟ'. `ಸಿಕ್ಲಿಗರ ಅಲೆಮಾರಿ ಕುರುಬ ' `ಕಾಡುಗೊಲ್ಲ', `ಎಲ್ಲಮನ ಕಥನ ಕಾವ್ಯ', `ಬುಡ್ಗ ಜಂಗಮ ದರ್ಶಿನಿ', `ಬುಡ್ಗ ಜಂಗಮರು', `ಬುಡಕಟ್ಟು ಕುಲಕಸುಬುಗಳು', `ಕೃಷ್ಣ ಗೊಲ್ಲರ ಕಥನ ಕಾವ್ಯಗಳು', `ಕುಮಾರ ರಾಮ ಮತ್ತೆ ಕೃಷ್ಣ ಗೊಲ್ಲರ ಮಹಾಕಾವ್ಯ' ಎಂಬ ಸಂಪಾದಿತ ಕೃತಿಗಳು . ಮತ್ತು ಸುಲ್ತಾನ ಸುರಳಿ, ಸೇರಿದಂತೆ ಒಟ್ಟು ೪೨ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರು ಬರೆದ ನೂರಾರು ಲೇಖನಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೨೦ರಲ್ಲಿ ಬಿರ್ಸಾ ಮುಂಡ ರಾಷ್ಟಿçÃಯ ಪ್ರಶಸ್ತಿ, ಲಭಿಸಿದೆ. ಸದ್ಯ ಇವರು ಹಂಪಿಯಲ್ಲಿ ವಾಸವಾಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ